ಅರೇಹಳ್ಳಿ: ಮಲೆನಾಡು ಬಾಗವಾದ ಅರೇಹಳ್ಳಿ ಹಾಗು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಮಳೆ ಚುರುಕುಗೊಂಡಿದ್ದು ಕಳೆದ ರಾತ್ರಿ ಸುರಿದ ದಾರಕಾರ ಮಳೆಗೆ ಸರ್ಕಾರಿ ಶಾಲೆಯ ಕಾಂಪೌಂಡ್ ಕುಸಿದು ಬಿದ್ದ ಘಟನೆ ವರದಿಯಾಗಿದೆಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪರಿಮಿತಿಯ ಸುತ್ತಲೂ ಸುಮಾರು ಹತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಕಾಂಪೌಂಡ್ ನ ಒಂದು ಬದಿಯ ಉದ್ದಗಲಕ್ಕೂ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದಿದೆ.

ಇದರಿಂದ ಪಕ್ಕದಲ್ಲೇ ನೂತನವಾಗಿ ನಿರ್ಮಿಸಲಾದ ರೈತ ಸಂಪರ್ಕ ಕೇಂದ್ರದ ಸಿಮೆಂಟ್ ಇಂಟರ್ಲಾಕ್ ಗಳು ಸಹ ಸಾಕಷ್ಟು ಹಾನಿಯಾಗಿದೆ.ಶಿಥಿಲವಾಗಿ ಬಿದ್ದ ಕಾಂಪೌಂಡ್ ಮಳೆ ಗಾಳಿ ಬಿರುಗಾಳಿಯಿಂದ ಗೋಡೆಯ ಸಾಮರ್ಥ್ಯ ಕಡಿಮೆಯಾಗಿದ್ದಲ್ಲದೆ ಕೆಲವೊಮ್ಮೆ ಕಾಂಪೌಂಡ್ ಗೋಡೆಗಳನ್ನು ನಿರ್ಮಿಸುವಾಗ ಸರಿಯಾದ ಗುಣಮಟ್ಟದ ವಸ್ತುಗಳನ್ನು ಬಳಸದೆ ಇರುವುದು ಅಥವಾ ಸೂಕ್ತ ಇಂಜಿನಿಯರಿಂಗ್ ಮಾನದಂಡಗಳನ್ನು ಪಾಲಿಸದಿರುವುದೇ ಇದಕ್ಕೆ ಕಾರಣವಾಗಿರಬಹುದು, ಮಣ್ಣು ಸಡಿಲವಾಗಿದ್ದಾಗ ಅಥವಾ ಅಡಿಪಾಯವನ್ನು ಸರಿಯಾಗಿ ವಿನ್ಯಾಸಗೊಳಿಸಲಿದ್ದಾಗ ಭಾರಿ ಮಳೆಯಿಂದಾಗಿ ದೊಡ್ಡ ಕುಸಿತಕ್ಕೆ ಕಾರಣವಾಗಿದೆ!

ಈ ಕುಸಿತದ ಬಗ್ಗೆ ರೈತ ಸಂಪರ್ಕ ಕೇಂದ್ರದ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಹಾಗು ಶಾಲಾ ಆಡಳಿತ ಮಂಡಳಿಯವರು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಆಗ್ರಹಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ ಅರೇಹಳ್ಳಿ ಸರಕಾರಿ ಶಾಲೆಯ ಕಾಂಪೌಂಡ್ ಕುಸಿದ ವಿಚಾರ ನಮ್ಮ ಗಮನಕ್ಕೆ ಬಂದಿದ್ದು ಇದು ಕೃಷಿ ಇಲಾಖೆ ರೈತ ಸಂಪರ್ಕಕ್ಕೆ ಸೇರಿದ್ದಾಗಿದ್ದು ಇದನ್ನು ಅವರಿಗೆ ತಿಳಿಸಿ ಮೇಲ್ಬಾಗದಲ್ಲಿ ಪೈಪ್ ನೀರು ಕಾಂಪೌಂಡ್ ಗೆ ಬೀಳುತ್ತಿದ್ದರಿಂದ ಈ ರೀತಿ ಆಗಿರಬಹುದು.ಅಲ್ಲದೆ ಅದನ್ನು ಬೇರೆಡೆಗೆ ತಿರುಗಿಸಲು ಹೇಳಿದ್ದು ಹಾಗು ಕಾಂಪೌಂಡ್ ಅನ್ನು ಹೊಸದಾಗಿ ಕಟ್ಟಿ ರೆಡಿ ಮಾಡಿಸಿಕೊಡಿ ಮತ್ತೆ ಇನ್ನು ಮುಂದೆ ಹೀಗಾಗದಂತೆ ಜಾಗೃತಿ ವಹಿಸಬೇಕೆಂದು ಅವರಿಗೆ ಎಚ್ಚರಿಕೆ ನೀಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *