ಸಕಲೇಶಪುರ : ತಾಲ್ಲೂಕಿನ ಸರ್ಕಾರಿ ಪ್ರೌಡಶಾಲೆಗಳಲ್ಲಿ 2024– 25ನೇ ಸಾಲಿನ ಎಸ್‌.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಖಡ 90% ಹಾಗೂ ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು “ವೈಚಾರಿಕ” ಸಂಜೆ ದಿನಪತ್ರಿಕೆ ವತಿಯಿಂದ ಲಯನ್ಸ್‌ ಸಭಾಂಗಣ, ಬಿ.ಎಂ. ರಸ್ತೆ, ಸಕಲೇಶಪುರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಯಸಳೂರು ತೆಂಕಲಗೋಡು ಬ್ರಹ್ಮಾನ್ನಠ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳಿಗೆ ಸನ್ಮಾನಿಸುವುದರ ಜೊತೆಗೆ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಆರಕ್ಷಕ ಉಪ ಅಧೀಕ್ಷಕರಾದ ಪ್ರಮೋದ್ ಕುಮಾರ್ ಜಿ. ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಗಂಗಾಧರನ್ ಜಿ.ಡಿ.ವೈಚಾರಿಕ ಸಂಜೆ ದಿನ ಪತ್ರಿಕೆ ಸಂಪಾದಕರಾದ ಬ್ಯಾಕರವಳ್ಳಿ ವೆಂಕಟೇಶ, ವಳಲಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ದರ್ಶನ್,ಖಜಾಂಚಿಗಳಾದ ಹಿರಿದನಹಳ್ಳಿ ಹೂವಣ್ಣ ಗೌಡ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷರಾದ ಹಾಡ್ಲಹಳ್ಳಿ ಗಗನ್,ಕರವೇ ತಾಲೂಕು ಘಟಕ( ಪ್ರವೀಣ್ ಶೆಟ್ಟಿ ಬಣ ) ಅಧ್ಯಕ್ಷರಾದ ರಮೇಶ್ ಪೂಜಾರಿ ಸೇರಿದಂತೆ ಇತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *