
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ: ಅಪಾಯದಿಂದ ಪಾರು.
ಅರೇಹಳ್ಳಿ: ಚಲಿಸುತ್ತಿದ್ದ ಕಾರಿನ ಮೇಲೆ ಸಿಲ್ವರ್ ಮರ ಬಿದ್ದ ಪರಿಣಾಮ ಕಾರು ಜಖಂಗೊಂಡಿದ್ದು ಚಾಲಕ ಸೇರಿದಂತೆ ಇತರ ಮೂವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಬೇಲೂರು ತಾಲೂಕು ಅರೇಹಳ್ಳಿ-ದೋಲನಮನೆ ರಸ್ತೆಯ ಚೆಕ್‌ಡ್ಯಾಂ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಚಾಲಕ ಈಶ್ವರ್ ತಮ್ಮ ವೈಯಕ್ತಿಕ ಕೆಲಸ ಮುಗಿಸಿಕೊಂಡು ಹೆಗ್ಗಡಿಹಳ್ಳಿಯಿಂದ ಅರೇಹಳ್ಳಿಗೆ ತೆರಳುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬೃಹತ್ ಸಿಲ್ವರ್ ಮರವೊಂದು ಕಾರಿನ ಮೇಲೆ ಬಿದ್ದಿದೆ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸೋಮವಾರ ಸಂತೆಯ ದಿನವಾದ್ದರಿಂದ ಈ ಘಟನೆ ಪರಿಣಾಮ ಕೆಲ ಕಾಲ ವಾಹನಗಳ ದಟ್ಟಣೆ ಏರ್ಪಟ್ಟಿತ್ತು.
ಗ್ರಾಮಸ್ಥರು ಹಾಗೂ ಸಹ ಪ್ರಯಾಣಿಕರು ಕಾರಿನ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
