
ಕೊಡ್ಲಿಪೇಟೆ : ಹೇಮಾವತಿ ರೋಟರಿ ಕೊಡ್ಲಿಪೇಟೆ ಯ 2025/26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹ ಸಮಾರಂಭ ಸ್ಥಳೀಯ ಡಾ.ಉದಯ್ ಕಂಪರ್ಟ್ ಸಭಾಂಗಣದಲ್ಲಿ ನಡೆಯಿತು.
ಹೇಮಾವತಿ ರೋಟರಿ ಅದ್ಯಕ್ಷರಾದ ಮಾದವ್ ಲಾಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಗ್ರಹಣಾಧಿಕಾರಿಯಾಗಿ ಬಾಗವಹಿಸಿ ಮುಖ್ಯ ಬಾಷಣ ಮಾಡಿದ ನಾಗೇಶ್ P ರವರು ಒಳಿತು ಮಾಡಲ ನಾವು ರೋಟರಿಗೆ ಸೇರ್ಪಡೆಯಾಗಿದ್ದೇವೆ ಮನುಷ್ಯ ಇರುವ ತನಕ ಏನು ಒಳಿತು ಮಾಡುತ್ತಿವೋ ಅದು ಮಾತ್ರ ಉಳಿಯುತ್ತದೆ ಇನ್ನೂ ಯಾವುದು ಇರುವುದಿಲ್ಲ ನಮ್ಮತ್ತಿರ ಎಷ್ಟು ಆಸ್ತಿ ಅಂತಸ್ತು ಇಂಪ್ಲಿಯನ್ಸ್ ಇರಬಹುದು ಹೋಗಬೇಕಾದರೆ ಒಬ್ಬರೆ ಹೋಗಬೇಕಾಗುತ್ತದೆ ,ಸೇವೆ ಎಂಬ ಮನೋಬಾವ ಎಲ್ಲರ ಮನಸೋರೆಗೊಳ್ಳುತ್ತದೆ ಯಾವುದೇ ವ್ಯಕ್ತಿಗೆ ಸಹಾಯಮಾಡಿ ಆ ವ್ಯಕ್ತಿಯ ಮುಖದಲ್ಲಿ ಸಂತ್ತೋಷ ಕಾಣುವಾಗ ಆ ಸಹಾಯ ಏನು ಅಲ್ಲ ಅಂತಾ ಅನಿಸುತ್ತದೆ ನಾವು ಪರೋಪಕಾರಿಯಾಗಿ ಬದುಕಬೇಕೆಂದು,ರೋಟರಿ ಅಂತರಾಷ್ಟ್ರೀಯ ಸಮಿತಿ ಈ ಬಾರಿ Unite for Good ಎಂಬ ದ್ಯೆಯವಾಕ್ಯವನ್ನು ನೀಡಿದೆ ಅದರಂತೆ ನಾನು ಎನ್ನುವುದಕ್ಕಿಂತ ನಾವು ಎಂದು ಒಂದು ತಂಡವಾಗಿ ಕಾರ್ಯಚರಿಸಿದರೆ ಯಶಸ್ಸು ಸಾದ್ಯ ,ರೋಟರಿ ಜೀವನದ ಮೌಲ್ಯಗಳನ್ನು ನಮಗೆ ಕಲಿಸುತ್ತದೆ ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಬಹುದು,ನಾವು ಅನೂಕೂಲವಂತರಾಗಿದ್ದರೆ ಚೆನ್ನಾಗಿದ್ದರೆ ಸಂಸ್ಕಾರವಂತರಾಗಿದ್ದರೆ ನಮ್ಮ ಊರು ಸಂಸ್ಕಾರಯುತವಾಗಿರುತ್ತದೆ ಊರಿಂದ ಜಿಲ್ಲೆ ಜಿಲ್ಲೆಯಿಂದ ರಾಜ್ಯ ದೇಶ , ಚಾರಿಟಿಯನ್ನು ಮನೆಯಿಂದಲೇ ಪ್ರರಂಬಿಸಬೇಕು ಅಂತಾ ಹೇಳುತ್ತಾರೆ ನಾವು ಸಾಕಷ್ಟು ಒಳ್ಳೆಯ ಕಾರ್ಯಗಳನ್ನು ಮನೆಯಿಂದಲೇ ಮಾಡಿಕೊಂಡು ಹೋಗಲು ಶುರು ಮಾಡಬೇಕು , ಮುಂದೆ ರೋಟರಿಗೆ ಬಂದಾಗ ಹೆಚ್ಚು ಜನರಿಗೆ ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಮಾಡುವಂತಾಗುತ್ತದೆ ಎಂದರು,
ಮುಖ್ಯ ಅಥಿತಿಯಾಗಿ ಬಾಗವಹಿಸಿ ಮಾತನಾಡಿದ ರೋಟರಿ ಜಿಲ್ಲಾ ಉಪರಾಜ್ಯಪಾಲ ಉಲ್ಲಾಸ್ ಕ್ರಷ್ಣ ಈ ಸಾಲಿನ ರೋಟರಿ ಹೇಮಾವತಿ ಸಮಿತಿಯು ಗೊಲ್ಡನ್ ಅವಾರ್ಡ್ ಪಡೆದುಕೊಂಡಿದೆ ಮುಂದಿನ ಸಾಲಿನ ಸಮಿತಿಯು ಸಹ ಇದೇ ಸೂಕ್ತ ಸಮಯದಲ್ಲಿ ಉತ್ತಮವಾದ ಸಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುವ ಮೂಲಕ ಪ್ಲಾಟಿನಂ ಮತ್ತು ಡ್ಯೆಮಂಡ್ ಆವಾರ್ಡ್ ಗಳಿಸುವಂತಾಗಲಿ ಎಂದು ಹಾರ‌್ಯೆಸಿ ,ರೋಟರಿ ವಾರ್ಷಿಕವಾಗಿ ಹತ್ತು ಯೋಜನೆಗಳನ್ನು ಕೊಡುತ್ತದೆ ಈ ಸಾಲಿನಲ್ಲಿ ಮಾಡಬೇಕಾದ ಹತ್ತು ಚಟುವಟಿಕೆಗಳು ಈ ರೀತಿಯಲ್ಲಿದೆ ಹಿರಿಯ ನಾಗರಿಕರಿಗೆ ಸಂದ್ಯಾ ಸುರಕ್ಷಾ ಯೋಜನೆ,ಆರೋಗ್ಯ ಕಾರ್ಯಕ್ರಮ, ಕ್ಯಾನ್ಸರ್ ಕುರಿತು ಜಾಗ್ರತಿ,ಜಲ್,ಜಮೀನ್,ಜಂಗಲ್ ,ಅಂಗನವಾಡಿ ಪುನಶ್ಚೇತನ, ಸಮುದಾಯಕ್ಕಾಗಿ ಒಂದು ಯೋಜನೆ,ಸರಕಾರಿ ಶಾಲೆಯ ಮಕ್ಕಳಿಗೆ ಉತ್ತೇಜನ,ಮಹಿಳೆಯರ ಸಬಲಿಕರಣ ಸೇರಿದಂತೆ ಮುಂತಾದ ಯೋಜನೆಗಳನ್ನು ವಿವರಿಸಿ ಇದನ್ನು ಅನುಷ್ಠಾನ ಮಾಡುವಂತೆ ಸೂಚಿಸಿದರು.
ವೇದಿಕೆಯಲ್ಲಿದ್ದ ರೋಟರಿ ವಲಯ ಸೇನಾನಿ ರಾಮಣ್ಣ ಪದಗ್ರಹಣವಾದ ನೂತನ ಸಮುತಿಗೆ ಶುಭ ಕೊರಿ ಮಾತನಾಡಿದರು,ಪ್ರಾರಂಭದಲ್ಲಿ ದೀಪ ಬೆಳಗಿಸುವುದರ ಮೂಲಕ ಗಣ್ಯರು ಉದ್ಘಾಟಿಸಿದರು.
ಮುಂದಿನ ಸಾಲಿನ ಅದ್ಯಕ್ಷರಾಗಿ ಉಮೇಶ್ ಯು.ಹೆಚ್.ಕಾರ್ಯದರ್ಶಿಯಾಗಿ ಗಣೇಶ್ ಚೌದರಿ ಮತ್ತು ಪದಾಧಿಕಾರಿಗಳು ಜವಾಬ್ದಾರಿ ಯನ್ನು ಸ್ವಿಕರಿಸಿದರು,ಈ ಸಂದರ್ಭದಲ್ಲಿ ಮಾತನಾಡಿದ ಅದ್ಯಕ್ಷ ಉಮೇಶ್ ರವರು ನಮ್ಮ ಅವದಿಯಲ್ಲಿ ಜನಪಯೋಗಿಯಾದಂತಹ ಉತ್ತಮ ಕಾರ್ಯಕ್ರಮ ಮಾಡಲು ಎಲ್ಲಾ ರೋಟರಿಯನ್ ಗಳ ಬೆಂಬಲವನ್ನು ಕೋರಿದರು,ಕೊಡ್ಲಿಪೇಟೆ ಗ್ರಾ.ಪಂ.ಸದಸ್ಯ ಶೋಭಿತ್ ಗೌಡ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು,ಕಾರ್ಯದರ್ಶಿ ಸಾಗರ್ ಕೆ.ಕೆ.ಹಿಂದಿನ ಸಾಲಿನ ಕಾರ್ಯಕ್ರಮಗಳ ವರದಿಯನ್ನು ಮಂಡಿಸಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ನೂತನ ಕಾರ್ಯದರ್ಶಿ ಗಣೇಶ್ ಚೌದರಿ ವಂದಿಸಿದರೆ , ಶ್ರುತಿ ನಿರೂಪಿಸಿದರು.
ಕಾರ್ಯದಲ್ಲಿ ವಲಯ ಮಟ್ಟದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡದ ನಾಯಕ ದುಶ್ಯಂತ್ ಮತ್ತು ತಂಡವನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ರೋಟರಿಯನ್ ಡಾ.ಉದಯ್‌ಕುಮಾರ್ ,ಉಪಾಧ್ಯಕ್ಷ ಭಾನುಪ್ರಕಾಶ್ ,ಖಜಾಂಜಿ ಅಮ್ರತ್‌ಕುಮಾರ್ ,ಹಿಂದಿನ ಅದ್ಯಕ್ಷರುಗಳಾದ ಹೆಚ್.ಎಂ.ದಿವಾಕರ್ ,ಡಿ.ವಿ.ದಿನೇಶ್ ,ಹೆಚ್.ಜೆ. ಪ್ರವೀಣ್ ,ಬಿ.ಕೆ.ಯತೀಶ್ ಮುಂತಾದವರು ಹಾಗೂ ಶನಿವಾರಸಂತೆ ,ಆಲೂರು ಸಿದ್ದಾಪುರ ,ಪಿರಿಯಾಪಟ್ಟಣ, ಸೋಮವಾರಪೇಟೆ ಯ ರೋಟರಿ ಪ್ರಮುಖರು ಇದ್ದರು.


