
ಕೊಡ್ಲಿಪೇಟೆ : ಮ್ಯೆಸೂರು ಧರ್ಮಸ್ಥಳ ಸಂಚಾರ ಪ್ರಾರಂಭಿಸಿದ ನೂತನ ಅಶ್ವಮೇಧ ಬಸ್ ಗೆ ಕೊಡ್ಲಿಪೇಟೆಯಲ್ಲಿ ಅಭೂತಪೂರ್ವಕವಾಗಿ ಬರಮಾಡಿಕೊಂಡು ಚಾಲನೆ ನೀಡಲಾಯಿತು,
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅರಕಲಗೂಡು ಡಿಪೋದಿಂದ ಈ ನೂತನ ಬಸ್ಸನ್ನು ಬೀಡಲಾಗಿದೆ, ಕೊಡ್ಲಿಪೇಟೆ ವ್ಯಾಪ್ತಿಯ ಜನರ ಬಹುದಿನದ ಬೇಡಿಕೆಯಾಗಿದ್ದ ಧರ್ಮಸ್ಥಳಕ್ಕೆ ನೇರ ಬಸ್ ಮಾರ್ಗಕ್ಕೆ ಇಂದು ಚಾಲನೆ ಸಿಕ್ಕಿದೆ.
ಕೊಡ್ಲಿಪೇಟೆಗೆ ಸಂಜೆ 5 ಗಂಟೆಗೆ ಆಗಮಿಸಿದ ಬಸ್ ಗೆ ಗ್ರಾ.ಪಂ.ಜನಪ್ರತಿನಿಧಿಗಳು ,ಸರಕಾರಿ ನಾಮ ನಿರ್ದೆಶಿತ ಸದಸ್ಸರುಗಳು ,ಹಾಗೂ ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಬಾಳೆ ದಿಂಡನ್ನು ಕಟ್ಟಿ ತೆಂಗಿನಕಾಯಿ ಹೊಡೆದು ಸಹಿ ಹಂಚಿ ಸಂಬ್ರಮದ ಮೂಲಕ ಸಂಚಾರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಕೆಡಿಪಿ ಸಮಿತಿಯ ಸದಸ್ಯರಾದ ಔರಂಗಜೇಬ್ ರವರು ಈ ಕಾರ್ಯಕ್ರಮಕ್ಕೆ ಖುದ್ದು ಶಾಸಕರಾದ ಮಂಥರ್ ಗೌಡ ರವರು ಆಗಮಿಸಿ ಚಾಲನೆ ನೀಡಬೇಕಿತ್ತು, ಮುಖ್ಯಮಂತ್ರಿಗಳು ಬೆಂಗಳೂರು ನಲ್ಲಿ ಶಾಸಕರುಗಳ ಸಭೆ ಏರ್ಪಡಿಸಿದ್ದು, ಅಲ್ಲಿಗೆ ತುರ್ತಾಗಿ ತೆರಳಬೆಕಾಗಿದ್ದರಿಂದ ಈ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ.
ಈ ನೂತನ ಸಾರಿಗೆ ಸೇವೆಯು ಶಾಸಕ ಡಾ ಮಂತರ್‌ಗೌಡ ಮತ್ತು ಅರಕಲಗೂಡು ಶಾಸಕರ ಪ್ರಯತ್ನದಿಂದ ಸಾದ್ಯವಾಗಿದೆ ,ಕಾಂಗ್ರೇಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗ್ಯಾಂರಂಟಿ ಯೋಜನೆಯಾದ ಶಕ್ತಿ ಯೋಜನೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ ಸುಮಾರು 500 ಕೋಟಿಗೂ ಹೆಚ್ಚು ಮಹಿಳಾ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದು, ಗ್ಯಾರಂಟಿ ಯೋಂದಿಗೆ ಶಾಸಕರು ಸಹ ಮಡಿಕೇರಿ ವಿಧಾನ ಸಭಾ ಕ್ಷೇತ್ರದಲ್ಲಿ ಕೋಟ್ಯಾಂತರ ರೂಪಾಯಿಗಳ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡುತ್ತಿದ್ದಾರೆಂದರು.
ಕಾಂಗ್ರೆಸ್ ಪಕ್ಷದ ಮುಖಂಡರು ಗ್ರಾ.ಪಂ.ಮಾಜಿ ಅದ್ಯಕ್ಷರಾದ ಕೆ.ಆರ್.ಚಂದ್ರಶೇಖರ್ ರವರು ಈ ಸಂದರ್ಭದಲ್ಲಿ ಮಾತನಾಡಿ ಈ ನೂತನ ಬಸ್ ಸೇವೆಯಿಂದ ಈ ಬಾಗದ ಜನರಿಗೆ ಪುಣ್ಯಕ್ಷೇತ್ರ ಧರ್ಮಸ್ಥಳ ಮತ್ತು ಮ್ಯೆಸೂರಿಗೆ ತೆರಳಲು ನೇರ ಸೌಲಭ್ಯ ಕಲ್ಪಿಸಿದಂತಾಗುತ್ತದೆ, ಸಾರ್ವಜನಿಕರು ಇದರ ಸೌಲಬ್ಯ ಪಡೆದುಕೊಳ್ಳಬೆಕೆಂದುಈ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಶಾಸಕರುಗಳು ಹಾಗೂ ಸರಕಾರಿ ಸಾರಿಗೆ ನಿಗಮದ ಆದಿಕಾರಿಗಳಿಗೆ ಸಾರ್ವಜನಿಕರ ಪರವಾಗಿ ಧನ್ಯವಾದ ಅರ್ಪಿಸಿದರು.
ಈ ಬಸ್ ಪ್ರತಿ ದಿನ ಮೈಸೂರು ನಿಂದ ಸಮಯ ಮಧ್ಯಾಹ್ನ 12:30ಕ್ಕೆ ಹೊರಟು, ಕೆ.ಆರ್.ನಗರ, ಚುಂಚನಕಟ್ಟೆ, ಸಾಲಿಗ್ರಾಮ, ಕೊಣನೂರು, ಅರಕಲಗೂಡು, ಮಾರ್ಗವಾಗಿ, ಕೊಡ್ಲಿಪೇಟೆ ಗೆ ಸಂಜೆ 04:20ಕ್ಕೆ ತಲುಪಿ ಕೊಡ್ಲಿಪೇಟೆಯಿಂದ 04:30 ಕ್ಕೆ ಹೊರಟು ಬಾಳ್ಳುಪೇಟೆ, ಸಕಲೇಶಪುರ, ಗುಂಡ್ಯ ಮಾರ್ಗವಾಗಿ ಧರ್ಮಸ್ಥಳಕ್ಕೆ ರಾತ್ರಿ 08:00 ಗಂಟೆಗೆ ತಲುಪುತ್ತದೆ ಮರುದಿನ ಧರ್ಮಸ್ಥಳ ದಿಂದ ಬೆಳಗ್ಗೆ 06:30ಕ್ಕೆ ಹೊರಟು ಗುಂಡ್ಯ ಸಕಲೇಶಪುರ ಮಾರ್ಗವಾಗಿ ಕೊಡ್ಲಿಪೇಟೆಗೆ 09:40 ಕ್ಕೆ ತಲುಪಿ ಕೊಡ್ಲಿಪೇಟೆಯಿಂದ 09:45ಕ್ಕೆ ಹೊರಟು ಅರಕಲಗೂಡು, ಕೊಣನೂರು, ಸಾಲಿಗ್ರಾಮ, ಕೆ.ಆರ್. ನಗರ ಮಾರ್ಗವಾಗಿ ಮಧ್ಯಾಹ್ನ 01:30 ಕ್ಕೆ ಮೈಸೂರು ತಲುಪಲಿದೆ ಎಂದು ಚಾಲಕ ಧರಣೇಂದ್ರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಚಾಲಕ ಮತ್ತು ನಿರ್ವಾಹಕ ನಿರ್ವಾಣಿ ಯವರಿಗೆ ಪುಷ್ಪಹಾರ ಮಾಡಲಾಯಿತು, ಕೊಡ್ಲಿಪೇಟೆ ಗ್ರಾಮ ಪಂಚಾಯತ್ ಅದ್ಯಕ್ಷರಾದ ಅಪ್ಸರಿಬೇಗಂ ,ಉಪಾಧ್ಯಕ್ಷೆ ಯಶೋದಮ್ಮ ,ಸದಸ್ಯರುಗಳಾದ ವಹಾಬ್,ಪ್ರಸನ್ನ ,ಬ್ಯಾಡಗೊಟ್ಟ ಪಂಚಾಯತ್ ಅದ್ಯಕ್ಷರಾದ ಪಾವನ ,ಸದಸ್ಯರಾದ ಹನೀಪ್,ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಜನಾರ್ದನ್, ತಾಲೂಕು ಕೆಡಿಪಿ ಸದಸ್ಯ ವೇದಕುಮಾರ್,ಮುಖಂಡರುಗಳಾದ ಸುಲ್ಯೆಮಾನ್ ,ಸಾಬ್‌ಜಾನ್ ,ನಿಸಾರ್,ಜಯಪ್ಪ,ಮಲ್ಲೇಶ್, ಪ್ರೆಮಕುಮಾರ್ ,ಹಾಲಪ್ಪ ,ಇಂದ್ರೇಶ್ ,ನಿಖಿಲ್ ,ಉಮೇಶ್ ,ಗಣೇಶ್ , ಸುಮಂತ್ ,ಸುಹೀಲ್ , ನಜೀರ್ ಅಹಮ್ಮದ್. ಬಿ.ಕೆ.ಯತೀಶ್ ,ಜಿ.ಆರ್.ಸುಬ್ರಹ್ಮಣ್ಯ ,ವರ್ತಕ ರಾದ ಶಿವರಾಜ್, ಮುಂತಾದವರು ಹಾಜರಿದ್ದರು.

