
ಶಿಬಿರದ ಪ್ರಮುಖ ಕಾರ್ಯಕ್ರಮಕ್ಕೆ ಲಗ್ಗೆ ಇಡುತ್ತಿರುವ ತಂಡ ರೈತರಿಗೆ ಮುಖ್ಯವಾಗಿ ಅವಶ್ಯವಿರುವ ಹಾಗೂ ಕಡಿಮೆ ಅರಿವು ಇರುವ ಬೆಳೆ ವಿಮೆ ವಿಷಯದ ಬಗೆಗೆ ಅರಿವು ಮೂಡಿಸಲು ‘ಬೆಳೆ ವಿಮೆ’ ಎಂಬ ಕಾರ್ಯಗೋಷ್ಠಿಯನ್ನು ಹಮ್ಮಿಕೊಂಡಿದ್ದರು.
ಈ ವಿಷಯದ ಕುರಿತು ಮಾಹಿತಿ ನೀಡಿದ ತಂಡ ವಿಮೆ ಮಾಡಿಸಬಹುದಾದ ಬೆಳೆಗಳ ಪಟ್ಟಿ, ವಿಮೆ ಮಾಡಿಸುವ ರೀತಿ, ರೈತರಿಗೆ ಅದರಿಂದ ಆಗುವ ಲಾಭಗಳು, ವಿಮೆ ಬಗೆಗೆ ಮಾಹಿತಿ ಮೂಲಗಳು ಹಾಗು ಇತ್ಯಾದಿ ಅವಶ್ಯ ಚಿತ್ರಣವನ್ನು ರೈತರ ಮುಂದೆ ತೆರೆದಿಟ್ಟರು.
ಈ ಕಾರ್ಯಕ್ರಮಕ್ಕೆ ಕೃಷಿ ಮಹಾವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಅರವಿಂದ್ ಕುಮಾರ್. ಎಂ. ಕೆ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ರೈತರಿಗೆ ಮತ್ತಷ್ಟು ಅಧಿಕ ಮಾಹಿತಿ ನೀಡಿದರು. ಇವರ ಜೊತೆ ಮೆಳಗೋಡು ಗ್ರಾಮಪಂಚಾಯಿತಿ ಸದಸ್ಯರಾದ ಕೃಷ್ಣಕುಮಾರ್ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಉತ್ತಮ ಮಟ್ಟದಲ್ಲಿ ಅಂತ್ಯಗೊಂಡಿತು.
