
ಬೇಲೂರು : ಪಟ್ಟಣದ ಬಿಕ್ಕೋಡು ರಸ್ತೆಯ ವಿಷ್ಣು ಸಮುದ್ರದ ಪಕ್ಕದಲ್ಲಿರುವ ಕಲ್ಯಾಣಿ ಜಾಗದಲ್ಲಿ ನಾಗರಪಂಚಮಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಈ ಸ್ಥಳದಲ್ಲಿರುವ ಅರಳಿಕಟ್ಟೆ ಮರದ ಪಕ್ಕದ ನಾಗರ ಕಲ್ಲಿಗೆ ಮಹಿಳೆಯರು ಮತ್ತು ಭಕ್ತರು ಹಾಲು, ಅರಿಶಿನ-ಕುಂಕುಮ, ಹೂವುಗಳಿಂದ ಪೂಜೆ ಸಲ್ಲಿಸಿ, ನಾಗದೇವರಿಗೆ ಹಾಲೆರೆಯುವ ಮೂಲಕ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ನಾಗರಪಂಚಮಿ ಹಬ್ಬವನ್ನು ಹಿಂದು ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿದ್ದು, ಈ ಹಬ್ಬದಂದು ನಾಗದೇವರನ್ನು ಪೂಜಿಸುವ ಸಂಪ್ರದಾಯವಿದೆ.
ನಾಗದೇವರಿಗೆ ಹಾಲೆರೆಯುವುದು ಆರೋಗ್ಯ ಮತ್ತು ಸಮೃದ್ಧಿಗಾಗಿ ಎನ್ನಲಾಗುತ್ತದೆ. ಕಲ್ಯಾಣಿ ಹತ್ತಿರದ ಈ ಸ್ಥಳದಲ್ಲಿ ಪ್ರತಿವರ್ಷವೂ ನಾಗರಪಂಚಮಿಯಂದು ಭಕ್ತರು ಜಮಾಯಿಸಿ ನಂಬಿಕೆಯೊಂದಿಗೆ ಹಬ್ಬ ಆಚರಿಸುತ್ತಾರೆ.
ಸ್ಥಳೀಯರು ಭಕ್ತರು ಮಹಿಳೆಯರು ಈ ಪೂಜಾ ಸ್ಥಳವನ್ನು ಪವಿತ್ರ ಸ್ಥಳವಾಗಿ ಪರಿಗಣಿಸಿ, ವಿವಿಧ ತಮ್ಮ ಬಯಕೆಗಳ ಈಡೇರಿಕೆಗೆ ನಾಗದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಪೂಜೆಯ ಬಳಿಕ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.




