
ಮೈಸೂರು : ಬೂಕರ್ ಪ್ರಶಸ್ತಿ ವಿಜೇತ ಬಾನು ಮುಪ್ತಾಕ್‌ರಿಂದ ದಸರಾ ಉದ್ಘಾಟನೆ ಮುಖ್ಯಮಂತ್ರಿ ಸಿದ್ದರಾಮಯ್ಯಘೋಷಣೆ.
ಈ ಬಾರಿ ದಸರಾವನ್ನು ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಸ್ತಾಕ್ ಉದ್ಘಾಟನೆ ಮಾಡಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.ಈ ಬಾರಿ 11 ದಿನ ದಸರಾ ನಡೆಯಲಿದ್ದು . ಸೆಪ್ಟೆಂಬರ್ 22 ರಿಂದ ದಸರಾ ಆರಂಭ ಆಗಲಿದ್ದು ಅಕ್ಟೋಬಟ್ 2 ರಂದು ವಿಜಯದಶಮಿ ಆರಂಭಗೊಳ್ಳಲಿದೆ.
ಕರ್ನಾಟಕದ ಮಹಿಳೆಗೆ ಬೂಕರ್ ಪ್ರಶಸ್ತಿ ಸಿಕ್ಕಿರುವುದು ತುಂಬ ಸಂತೋಷ ತಂದಿದೆ ಹೋರಾಟದ ಹಿನ್ನೆಲೆಯಿಂದ ಬಂದವರು ಬಾನು, ಕನ್ನಡ ಚಳವಳಿಯಲ್ಲಿ ಕೆಲಸ ಮಾಡಿರುವ ಪ್ರಗತಿಪರ ಚಿಂತಕರು. ಹಾಗಾಗಿ ದಸರಾ ಉದ್ಘಾಟನೆಗೆ ಆಹ್ವಾನ ನೀಡಿದ್ದೇವೆ ಎಂದು ಮುಖ್ಯ ಮಂತ್ರಿಗಳು ವಿಧಾನ ಸೌಧದಲ್ಲಿ ತಿಳಿಸಿದರು. .
ಜಿಲ್ಲಾಡಳಿತ ಕೂಡ ಅಧಿಕೃತವಾಗಿ ಆಹ್ವಾನಿಸಲಿದೆ ಎಂದು ಸ್ಪಷ್ಟಪಡಿಸಿದರು.
