ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿಯ 166ನೇ ವರ್ಷದ ಜಾತ್ರಾ ಮಹೋತ್ಸವವೂ ಕೋಡಿಮಠ ಹಾಗೂ ಸ್ವರ್ಣ ಗೌರಮ್ಮ ದೇವಿ ಸೇವಾ ಟ್ರಸ್ಟ್ ವತಿಯಿಂದ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳು ಭಕ್ತರ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ

ದೇವಿ ದರ್ಶನಕ್ಕೆ ಬರಿ ಭಕ್ತರಲ್ಲದೆ ನಾನಾ ಮಠಾಧೀಶರು ಸಹ ಸುಕ್ಷೇತ್ರಕ್ಕೆ ಆಗಮಿಸಿ ದೇವಿ ದರ್ಶನ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ ಇಂದು ದೇವಿ ದರ್ಶನಕ್ಕೆ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದಲೂ ಸ್ರಾಸಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅಮ್ಮನವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ

ಬಾನಂಗಳದಲ್ಲಿ ರವಿ ಉದಯಿಸುತ್ತಿದ್ದಂತೆ ಇತ್ತ ಮಾಡಾಳು ಮೂಲ ಗೌರಮ್ಮ ದೇವಿ ದೇವಾಲಯದಲ್ಲಿತಾಯಿ ಜಗನ್ಮಾತೆ ಶಕ್ತಿ ಸ್ವರೂಪಿಣಿ ಅಮ್ಮನವರ ಪೂಜಾ ಕೈಂಕರ್ಯಗಳು ಆರಂಭವಾಗುತ್ತವೆ ಶುಕ್ರವಾರ ಮಧ್ಯಾನ ಕಡೂರು ಮೂರು ಕಳಸ ಮಠ ಶ್ರೀ ಜ್ಞಾನ ಪ್ರಭು ಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ ಕುಪ್ಪೂರು ಗದ್ದಿಗೆ ಮಠದ ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು

ನಂತರ ಮಾತನಾಡಿದ ಜ್ಞಾನ ಪ್ರಭು ಸಿದ್ದರಾಮದೇಶಿ ಕೇಂದ್ರ ಸ್ವಾಮೀಜಿ ಶತಮಾನಗಳಿಂದಲೂ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಜಾತ್ರಾ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ ಕೋಡಿಮಠದ ಲಿಂಗೈಕ್ಯ ಶಿವಲಿಂಗ ಸ್ವಾಮೀಜಿಯವರು ದೇವಿಗೆ ಆಶೀರ್ವದಿಸಿ ನೀಡಿರುವ ಬಂಗಾರದ ಮೂಗುತಿದಾರಣೆಯಿಂದ ಭಕ್ತರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುತ್ತಾ ಬಂದಿದ್ದು ಭಕ್ತರ ನಂಬಿಕೆಗೆ ಮತ್ತಷ್ಟು ಮೆರಗು ನೀಡಿದೆ ಇಲ್ಲಿನ ಅಭಿವೃದ್ಧಿ ಸಮಿತಿ ಅಮ್ಮನವರ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಅನುವು ಮಾಡಿಕೊಟ್ಟಿರುವುದಲ್ಲದೆ ಜಾತಿ ಮತ ಭೇದ ಭಾವ ಎನ್ನದೆ ಸಾಮೂಹಿಕ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *