
ಸಕಲೇಶಪುರ – ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ದಿನಾಂಕ 07.09.2025 ರಂದು ಭಾನುವಾರ ಗಣಪತಿ ಮೆರವಣಿಗೆ ಮೇಲೆ ಹಾಗೂ ಗಣಪತಿ ಮೂರ್ತಿ ಮೇಲೆ ಕಲ್ಲು ತೂರಾಟ ಮಾಡಿದ್ದೂ ಖಂಡನೀಯ. ಕಲ್ಲು ತೂರಾಟ ಮಾಡಿ ಕೋಮುಗಲಭೆ ಸೃಷ್ಠಿಸಿದ ಗಲಭೆಕೋರರಿಗೆ UAPA ಕಾಯ್ದೆ ಅಡಿ ಬಂಧಿಸಬೇಕು ಎಂದು ಸಕಲೇಶಪುರ ಉಪವಿಭಾಗಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.
ಮದ್ದೂರಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲುತೂರಾಟ ಮಾಡಿದನ್ನ ಖಂಡಿಸಿ ಶಾಂತಿಯುತ ಪ್ರತಿಭಟನೆ ಮಾಡುತಿದ್ದ ಮದ್ದೂರು ಹಿಂದೂಗಳ ಮೇಲೆ ಲಾಠಿಪ್ರಹಾರ ಮಾಡಿರುವುದು ಸರ್ಕಾರ ಪೋಲಿಸ್ ಇಲಾಖೆಯನ್ನು ಬಳಸಿಕೊಂಡು ವ್ಯವಸ್ಥಿತ ಸಂಚು ಆಗಿದ್ದು ಪೊಲೀಸ್ ಮಹಾ ನಿರ್ದೇಶಕರು ಯಾವ ಕಾರಣಕ್ಕೆ ಲಾಠಿಚಾರ್ಜ್ ಮಾಡಲು ಆದೇಶಿಸಿದ್ದಾರೆ ಎಂಬುದು ತನಿಖೆ ಆಗಬೇಕು.
ಮದ್ದೂರಿನಲ್ಲಿ ಮಹಿಳಾ ಪ್ರತಿಭಟನಾಕಾರರ ಮೇಲೆ ಏಕ-ಏಕಿ ಲಾಠಿಪ್ರಹಾರ ಮಾಡಿರುವುದರ ಹಿಂದೆ ದುರುದ್ದೇಶ ಇದ್ದು ಇದರ ಬಗ್ಗೆ ಇಲಾಖಾ ತನಿಖೆಗೆ ಆದೇಶಿಸಬೇಕು ಎಂದು ಪ್ರತಿಭಟನಾನಿರತ ಕಾರ್ಯಕರ್ತರು ಆಗ್ರಹಿಸಿದರು.
ಮಂಡ್ಯ ಜಿಲ್ಲೆ ಮದ್ದೂರು ಗಣಪತಿ ವಿಸರ್ಜನಾ ಮೆರವಣಿಗೆ ರಾಮ್ ರಹೀಮ್ ರಸ್ತೆಗೆ ಬಂದಾಗ ಮುಸ್ಲಿಂ ಕಿಡಿಗೇಡಿಗಳು ಏಕ ಏಕಿ ಕಲ್ಲು ತೂರಾಟ ಮಾಡಿ ವಿದ್ಯುತ್ ನಿಗಮದ ನಿಯಮ ಮೀರಿ ಕಲ್ಲು ತೂರಾಟ ಮಾಡಿದ್ದೂ ಹಾಗು ಯಾವ ಕಡೆಯಿಂದ ಕಲ್ಲು ಬರುತ್ತಿದೆ ಎಂದು ಗೊತ್ತಾಗಬಾರದು ಎಂದು ಬೀದಿ ದೀಪ ತೆಗೆದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿರುವ ಇರ್ಫಾನ್ ಮತ್ತು ಜಾಫರ್ ಗುಂಪಿನ ಎಲ್ಲ 30 ಜನರ ಮೇಲೆ UAPA ಕಾಯ್ದೆ ಅಡಿ ಕೇಸ್ ದಾಖಲಿಸಬೇಕು ಮತ್ತು ಕೋಮುಗಲಭೆ ಸೃಷ್ಠಿಸಲು ವ್ಯವಸ್ಥಿತ ಸಂಚು ರೂಪಿಸಿದ ಎಲ್ಲ ಗಲಭೆಕೋರರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಶಿಕ್ಷೆ ಆಗುವ ಹಾಗೆ ಕಾನೂನು ಪ್ರಕ್ರಿಯೆ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶಿಸಬೇಕು ಎಂದು ಈ ಹಿಂದೂ ಮುಖಂಡ ರಘು ಸಕಲೇಶಪುರ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಸಂಚಾಲಕ್ ಶಿವು ಜಿಪ್ಪಿ. ವಿನೋದ್. ಸುಪ್ರೀತ್ ಇತರರು ಇದ್ದರು..

