*ಆಲೂಗಡ್ಡೆ ಬೆಳೆ ವಿಚಾರ ಸಂಕೀರ್ಣ*

ಹಾಸನ : ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಮತ್ತು ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಶಿಬಿರ 2025-26 ರ ಅಂಗವಾಗಿ ಶಾಂತಿಗ್ರಾಮ ಹೋಬಳಿಯ ಕೆ.ಬ್ಯಾಡರಹಳ್ಳಿ ಗ್ರಾಮದಲ್ಲಿ ಆಲೂಗಡ್ಡೆ ಬೆಳೆ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮನುದ್ದೇಶಿಸಿ ವಿದ್ಯಾರ್ಥಿಗಳಾದ ಕೃತಿ, ತೇಜಸ್ವಿನಿ, ಮುತ್ತಣ್ಣ, ಸಂದೀಪ, ಹಾಗೂ ಜಯಸಿಂಹ ಮಾತನಾಡಿದರು.

ಗ್ರಾಮದಲ್ಲಿ ಆಲೂಗಡ್ಡೆಯು ಪ್ರಮುಖ ಬೆಳೆಯಾಗಿದ್ದು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬೆಳೆಯ ಪ್ರಮುಖ ಮಾಹಿತಿಗಳಾದ ಭೂಮಿ ಸಿದ್ಧತೆ, ಬಿತ್ತನೆ ಬೀಜದ ಆಯ್ಕೆ, ಬೀಜೋಪಚಾರ, ಬಿತ್ತನೆ ವಿಧಾನ, ಕಟಾವು, ಸಮಗ್ರ ರೋಗ ನಿರ್ವಹಣೆ, ಸಮಗ್ರ ಕೀಟ ನಿರ್ವಹಣೆ,ಆಲೂಗಡ್ಡೆ ಆಹಾರ ಉಪ ಉತ್ಪನ್ನಗಳು,ಮತ್ತು ಬೆಳೆ ಸಂಗ್ರಹಣೆ ಜೊತೆಗೆ ಬೆಳೆಯ ಹಲವಾರು ವಿಚಾರಗಳನ್ನು ರೈತರೊಂದಿಗೆ ಚರ್ಚಿಸಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಮಧುಸೂದನ.ಎನ್. (ಅನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿ ಶಾಸ್ತ್ರ), ಡಾ.ತೋಟಜೋಸೆಫ್ ರಾಜು (ಬೀಜ ತಾಂತ್ರಿಕತೆ ಮತ್ತು ತಂತ್ರಜ್ಞಾನ ವಿಭಾಗ), ಡಾ.ಸಹನ.ಎಮ್. (ಕೃಷಿ ಕೀಟಶಾಸ್ತ್ರ ವಿಭಾಗ) ಅವರು ಮತ್ತು ಗ್ರಾಮದ ರೈತರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *