ಹಾಸನ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಮಂಡ್ಯ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ಅಂತಿಮ ವರ್ಷದ ವಿದ್ಯಾರ್ಥಿಗಳ ಕೃಷಿ ಕಾರ್ಯಾನುಭವ ಶಿಬಿರ ೨೦೨೫-೨೬ ರ ವಸ್ತು ಪ್ರದರ್ಶನವನ್ನು ದಿನಾಂಕ: ೦೯.೧೦.೨೦೨೫ ರಂದು ಸಂತ ಇಗ್ನೇಶಿಯನ್‌ ಸಮುದಾಯ ಭವನ, ಗಾಡೇನಹಳ್ಳಿ, ಹಾಸನ ತಾಲ್ಲೂಕಿನಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಕೃಷಿ ಮಹಾವಿದ್ಯಾಲಯ, ಹಾಸನ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಸಂಬಂಧಿಸಿತ ಇಲಾಖೆಗಳು ಮತ್ತು ಸಂಸ್ಥೆಗಳು ಹಾಗೂ ವಿವಿಧ ಕೃಷಿ ಕಾರ್ಯಾನುಭವ ಶಿಬಿರದ ಹಳ್ಳಿಗಳಾದ ಕೆ. ಆಲದಹಳ್ಳಿ, ಕೆ. ಬ್ಯಾಡರಹಳ್ಳಿ, ಹಂಪನಹಳ್ಳಿ, ಹಾರನಹಳ್ಳಿ, ಚಿಕ್ಕ ಹಾಗೂ ದೊಡ್ಡಚಾಕನಹಳ್ಳಿ ಮತ್ತು ಗಾಡೇನಹಳ್ಳಿ ಗ್ರಾಮಗಳ ಸಹಯೋಗದೊಂದಿಗೆ ಅದ್ದೂರಿಯಾಗಿ ಕೃಷಿ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಈ ಕೃಷಿ ವಸ್ತು ಪ್ರದರ್ಶನವನ್ನು ಡಾ. ಶಂಕರ, ಎಂ. ಎ. ನಿವೃತ ಸಂಶೋಧನಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ರೆವೆರೆಂಡ್‌ ಫಾದರ್‌ ಡೇವಿಡ್ ಕುಮಾರ್‌, ಧರ್ಮಗುರುಗಳು, ಧರ್ಮಕೇಂದ್ರ, ಗಾಡೇನಹಳ್ಳಿ, ರಂಜಿತಾ ಬಿ. ಎಸ್. ಸಿಸ್ಟರ್‌ ಸುಪೀರಿಯರ್‌, ಗಾಡೇನಹಳ್ಳಿ, ಡಾ. ಕೆ. ಎನ್‌. ಮುನಿಸ್ವಾಮಿಗೌಡ ಡೀನ್‌ (ಕೃಷಿ) ಕೃಷಿ ಮಹಾವಿದ್ಯಾಲಯ, ಹಾಸನ ಹಾಗೂ ಇತರ ಗಣ್ಯರು ಮಳಿಗೆಗಳನ್ನು ಉದ್ಘಾಟಿಸಿ ವೀಕ್ಷಿಸಿದರು ಹಾಗೂ ರಾಶಿ ಪೂಜೆಯನ್ನು ನೆರವೇರಿಸಿ ದೀಪ ಬೆಳಗುವುದರ ಮೂಲಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕೃಷಿ ಮಹಾವಿದ್ಯಾಲಯ,ಕಾರೇಕೆರೆ,ಹಾಸನ ಆಯೋಜಿಸಿರುವ “ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ”ದ ಅಡಿಯಲ್ಲಿ ಅಂತಿಮ ವರ್ಷದ ಕೃಷಿ,ಜೈವಿಕ ತಂತ್ರಜ್ಞಾನ ಮತ್ತು ಆಹಾರ ತಂತ್ರಜ್ಞಾನ ವಿದ್ಯಾರ್ಥಿಗಳು ‘ಕೃಷಿ ವಸ್ತು ಪ್ರದರ್ಶನ’ ವನ್ನು ಗಾಡೇನಹಳ್ಳಿ ಯಲ್ಲಿ ಹಮ್ಮಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಡಾ.ಎಸ್.ವಿ.ಸುರೇಶ,ಗೌರವಾನ್ವಿತ ಕುಲಪತಿಗಳು,ಕೃಷಿ ವಿಶ್ವವಿದ್ಯಾನಿಲಯ ,ಜಿ.ಕೆ.ವಿ.ಕೆ,ಬೆಂಗಳೂರು; ಡಾ.ಕೆ.ಎಮ್.ಹರಿಣಿಕುಮಾರ್, ವಿಶೇಷಾಧಿಕಾರಿಗಳು,ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ವಿ.ಸಿ.ಫಾರಂ,ಮಂಡ್ಯ;ಡಾ.ಎಮ್.ಎ. ಶಂಕರ್, ನಿವೃತ್ತ ನಿರ್ದೇಶಕರು, ಕೃಷಿ ವಿಶ್ವವಿದ್ಯಾನಿಲಯ,ಜಿ.ಕೆ.ವಿ.ಕೆ., ಬೆಂಗಳೂರು; ಡಾ.ಎನ್.ಶಿವಕುಮಾರ್, ಶಿಕ್ಷಣ ನಿರ್ದೇಶಕರು,ಕೃ.ವಿ.ವಿ, ವಿ.ಸಿ.ಫಾರಂ,ಮಂಡ್ಯ;ಡಾ.ಓ.ಆರ್. ನಟರಾಜ್,ಡೀನ್, ಪಶುವೈದ್ಯಕೀಯ ಮಹಾವಿದ್ಯಾಲಯ,ಹಾಸನ;ಡಾ.ಕೆ.ಎನ್.ಮುನಿಸ್ವಾಮಿ ಗೌಡ, ಡೀನ್(ಕೃಷಿ) ಮತ್ತು ಆವರಣದ ಮುಖ್ಯಸ್ಥರು, ಕೃಷಿ ಮಹಾವಿದ್ಯಾಲಯ,ಕಾರೆಕೆರೆ, ಹಾಸನ ಇವರ ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಮುಖ್ಯ ಅತಿಥಿಗಳಾಗಿ ಪಿ.ರಮೇಶ್ ಕುಮಾರ,ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಹಾಸನ; ಅಶೋಕ, ಉಪ ನಿರ್ದೇಶಕರು,ಕೃಷಿ ಇಲಾಖೆ,ಹಾಸನ; ಯೋಗೇಶ, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ,ಹಾಸನ; ರಮೇಶ,ಉಪ ನಿರ್ದೇಶಕರು,ಪಶು ಸಂಗೋಪನ ಇಲಾಖೆ, ಹಾಸನ; ಗಿರೀಶ,ಉಪ ನಿರ್ದೇಶಕರು,ರೇಷ್ಮೆ ಇಲಾಖೆ,ಹಾಸನ; ಡಾ.ಎಂ.ಹೆಚ್.ಶಂಕರ,ಮುಖ್ಯಸ್ಥರು,ಕೃಷಿ ವಿಜ್ಞಾನ ಕೇಂದ್ರ,ಕೊನೆಹಳ್ಳಿ, ತಿಪಟೂರು; ವಿಕಾಸ. ಕೆ.ಸಿ.,ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ,ಹಾಸನ; ರಂಜಿತಾ.ಬಿ.ಎಸ್., ಸಿಸ್ಟರ್ ಸುಪೀರಿಯರ್,ಗಾಡೇನಹಳ್ಳಿ; ರೆವರೆಂಡ್ ಫಾಧರ್ ಡೇವಿಡ್ ಕುಮಾರ್, ಧರ್ಮ ಗುರುಗಳು,ಧರ್ಮಕೇಂದ್ರ,ಗಾಡೇನಹಳ್ಳಿ ಇವರು ಉಪಸ್ಥಿತರಿದ್ದರು. ಹಾಗೂ IAT, ಅಲುಮಿನಿ ಅಸೋಸಿಯೆಷನ್ ಮತ್ತು ಲಯನ್ಸ್ ಕ್ಲಬ್ ಇವರು ಉಪಸ್ಥಿತರಿದ್ದರು.

ಡಾ. ಶಶಿಕಲಾ, ಎಸ್‌, ಜೆ, ಸಂಯೋಜಕರು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ, ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಎಲ್ಲಾ ಹಳ್ಳಿಗಳಲ್ಲಿ ಜರುಗಿದ ವಿವಿಧ ಚಟುವಟಿಕೆಗಳ ಬಗ್ಗೆ ವಿವರಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಡಾ, ಶಂಕರ, ಎಂ. ಎ. ನಿವೃತ ಸಂಶೋಧನಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ “ಮಣ್ಣಿಂದಲೆ ಎಲ್ಲಾ ಮಣ್ಣಿಲ್ಲದೆ ಏನು ಇಲ್ಲ, ಮನುಷ್ಯ ಸತ್ತರೆ ಮಣ್ಣಿಗೆ, ಮಣ್ಣು ಸತ್ತರೆ ಎಲ್ಲಿಗೆ” ಎಂಬ ಮಾತಿನಂತೆ ತಮ್ಮ ಮೌಲ್ಯಯುತವಾದ ನುಡಿಗಳನ್ನು ಆಡಿದರು. ಬೀಜೋಪಾಚಾರಗಳು, ಮಣ್ಣಿನ ಫಲವತ್ತತೆ ಹಾಗೂ ಆಹಾರ ಮೌಲ್ಯವರ್ಧನೆ ಬಗ್ಗೆ ರೈತರಿಗೆ ಅರಿವು ಮೂಡಿಸಿದರು. ಜಾನುವಾರುಗಳು ರೈತರಿಗೆ ಎಟಿಎಂ. ಇದ್ದಂತೆ ಎಂದು ಹೇಳಿದರು.

. ರೆವೆರೆಂಡ್‌ ಫಾದರ್‌ ಡೇವಿಡ್ ಕುಮಾರ್‌, ಧರ್ಮಗುರುಗಳು, ಧರ್ಮಕೇಂದ್ರ, ಗಾಡೇನಹಳ್ಳಿರವರು ಎಲ್ಲಾ ಹಳ್ಳಿಗಳಲ್ಲಿ ಕೃಷಿ ವಿದ್ಯಾರ್ಥಿಗಳು ನಡೆಸಿದ ಚಟುವಟಿಕೆಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಡಾ. ಕೆ. ಎನ್‌. ಮುನಿಸ್ವಾಮಿಗೌಡ ಡೀನ್‌ (ಕೃಷಿ), ಕೃಷಿ ಮಹಾವಿದ್ಯಾಲಯ, ಹಾಸನ ರವರು ಅಧ್ಯಕ್ಷೀಯ ಭಾಷಣದಲ್ಲಿ ಭೂಮಿ ತಾಯಿಯ ಫಲವತ್ತತೆ ರೈತರಿಗೆ ತುಂಬಾ ಮುಖ್ಯ ಎಂದು ತಿಳಿಸಿದರು. ಕಳೆದ ಮೂರು ತಿಂಗಳು ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕಾರ್ಯಾನುಭವಕ್ಕೆ ಸಹಕಾರ ನೀಡಿದ ಎಲ್ಲಾ ಗ್ರಾಮಸ್ಥರಿಗೆ ಹೃತೂರ್ವಕ ವಂದನೆಗಳನ್ನು ತಿಳಿಸಿದರು.

ಕೃಷಿ ಮಹಾವಿದ್ಯಾಲಯ, ಹಾಸನ ವತಿಯಿಂದ ಆರು ಹಳ್ಳಿಯ ಪ್ರಗತಿಪರ ರೈತ ಮತ್ತು ರೈತ ಮಹಿಳೆಯರಿಗೆ ಸನ್ಮಾನಿಸಲಾಯಿತು.ಅಂತಿಮವಾಗಿ ಶ್ರೀ. ರಂಜನ್‌ ಕುಮಾರ್‌, ಅಂತಿಮ ವರ್ಷದ ಕೃಷಿ ವಿದ್ಯಾರ್ಥಿ ವಂದನಾರ್ಪಣೆ ಮಾಡುವುದರೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *