
ಚನ್ನರಾಯಪಟ್ಟಣ ಪಟ್ಟಣದ ಗ್ರಾಮ ದೇವತೆ ವಳಗೇರಮ್ಮನವರ, ವಾರ್ಷಿಕ ಜಾತ್ರಾ ಮಹೋತ್ಸವ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಗ್ರಾಮದ ಅದಿದೇವತೆ ವಳಗೆರಮ್ಮನವರ, ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ, ವಿಶೇಷ ಪೂಜೆ ಅಭಿಷೇಕ ಹವನಗಳನ್ನ ನೆರವೇರಿಸಿದ ನಂತರ , ಉತ್ಸವಮೂರ್ತಿಗೆ ವಿಶೇಷ ಅಲಂಕಾರ ಪೂಜೆಗಳನ್ನು ಮಾಡಿ ಮಹಾನ್ ನೈವೇದ್ಯ ಹಾಗೂ ಮಹಾ ಮಂಗಳಾರತಿ ನಂತರ, ವಿಪ್ರದ ವೇದ ಘೋಷ ದೊಂದಿಗೆ , ಹಾಗೂ ಮಂಗಳವಾದ್ಯೊಡನೆ, ಪಟ್ಟಣದ ಗಣಪತಿ ಪೆಂಡಾಲ್ ಬಳಿ ಉತ್ಸವ ಮೂರ್ತಿಯನ್ನು ಕರೆತರಲಾಯಿತು.
ಸುಂದರವಾಗಿ ಅಲಂಕೃತಗೊಂಡಿದ್ದ ರಥ ಕೆ ಪೂಜೆ ಸಲ್ಲಿಸಲಾಯಿತು. ಮೂರು ಪ್ರತ್ಯಕ್ಷನೆ ಬಂದ ಉತ್ಸವ ಹಾಗೂ ಸೋಮನ ಕುಣಿತ ನಂತರ ಅಮ್ಮನವರ ರಥಾರೋಹಣ ನಡೆಯಿತು.
ತಮಟೆ ವಾದ್ಯದೊಂದಿಗೆ, ಸೋಮನ ಕುಣಿತ ಅತ್ಯಂತ ಆಕರ್ಷಣಿ ತಂದಿತ್ತು, ಬಾಳೆ ಕಂದನ್ನು ಮೂರು ಪ್ರತ್ಯಕ್ಷಣೆ ಮಾಡಿದ ಸೋಮ ಕಡಿತ ನಂತರ, ರಥವನ್ನ, ಅಮ್ಮನವರಿಗೆ ಜೈಕಾರ ಹಾಕುತ್ತಾ ಇಳೆಯಲಾಯಿತು
ಭಾವೈಕ್ಯತೆಯ ಸಂಕೇತವಾದ ವಳಗೆರಮ್ಮನವರ ಜಾತ್ರಾ ಮಹೋತ್ಸವ, ಅಹಿಂಸಾತ್ಮಕವಾದದ್ದು. ಸುತ್ತಲ ಎಂಟು ಗ್ರಾಮಗಳ ಭಕ್ತರು ಹಾಗೂ, ರಾಜ್ಯದ್ಯಂತ ನೆಲೆಸಿರುವ ದೇವಿಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ, ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ವ ಳಗೇರಮ್ಮ ಶಕ್ತಿ ಅಪಾರವಾದದ್ದು, ಗುಡಿ ಗೌಡರ ಕುಟುಂಬದಿಂದ. ರಥೋತ್ಸವದ ಜವಾಬ್ದಾರಿ, ಪ್ರತಿ ವರ್ಷ ನಿರ್ವಹಣೆ ಯಾಗುತ್ತಿದೆ,.
ರಥವು ದೇವಾಲಯವನ್ನು ತಲುಪಿದ ನಂತರ, ಅಮ್ಮನವರ ಉಯ್ಯಾಲೋತ್ಸವ ಕೆಂಡಕೊಂಡ ಬಾಯೀ ಬೀಗ, ಹಾಗೂ ಸಿಡಿ ಜಾತ್ರೆ ಆರಂಭವಾಗುತ್ತದೆ. ಸುತ್ತಲ ಹತ್ತಾರು ಗ್ರಾಮಗಳ ಭಕ್ತರು ಹಸಿರು ಬಂಡಿಯ ಮೂಲಕ, ತಡಿಗೆಯನ್ನ ತಂದು ಅಮ್ಮನವರಿಗೆ ಅರ್ಪಿಸುತ್ತಾರೆ. ಜಾತ್ರೆಯ ಮಾರನೆಯ ದಿನ, ಚಂದ್ರಮಂಡಲೊತ್ಸವ ಕಾರ್ಯಕ್ರಮ, ನಡೆಯಲಿದೆ
ನರಕ ಚತುರ್ದಶಿ ದಿನದಂದು ನಡೆಯುವ ಒಳಗೇರಮ್ಮನವರ ಜಾತ್ರೆ, ಸಂಭ್ರಮ ಸಡಗರದಿಂದ, ಸಂಪನ್ನಗೊಂಡಿತು.
