ಸಕಲೇಶಪುರ : ಮನೆಯ ಮುಂದೆ ಒಣಗಲು ಹಾಕಿದ್ದ ಕಾಫಿ ಬೀಜ ಕಳುವಿಗೆ ಯತ್ನಿಸಿದ ಕಳ್ಳರನ್ನು ಗೆಳೆಯರು ಬೈಕ್ ಸಮೇತ ಹಿಡಿದ ಘಟನೆ ನಡೆದಿದೆ.

ಹಾಸನ‌ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಬೆಳಗೋಡು ಹೋಬಳಿಯ (ಬಾಗೆಪೋಸ್ಟ್) ಕಾಕನಮನೆ ಗ್ರಾಮದಲ್ಲಿ ಈಶ್ವರಪ್ಪ ಎಂಬುವವರ ಮನೆಯ ಮುಂದೆ ಒಣಗಲು ಹಾಕಿದ್ದ ಕಾಫಿ ಬೀಜಗಳನ್ನು ತಡರಾತ್ರಿ ಖಾಲಿ ಪ್ಲಾಸ್ಟಿಕ್ ಚೀಲಗಳೊಂದಿಗೆ ಒಂದೇ ಬೈಕ್‌ನಲ್ಲಿ ಕಾಫಿ ಕದಿಯಲು ಬಂದಿದ್ದ ಮೂವರು ಚೋರರು ಕಳ್ಳತನ ಮಾಡುವಾಗಲೇ ರೆಡ್‌ಹ್ಯಾಂಡ್ ಆಗಿ ಮೂವರು ಕಳ್ಳರನ್ನು ಸ್ಥಳೀಯರು ಹಿಡಿದು ಕಳ್ಳರಿಗೆ ಗೂಸಾ ಕೊಟ್ಟು ಪೊಲೀಸರಿಗೆ ಗ್ರಾಮಸ್ಥರು ಒಪ್ಪಿಸಿದ್ದಾರೆ

ಬಾಳ್ಳುಪೇಟೆ ಗ್ರಾಮದ ರಾಜಾಸಾಬ್, ನಿಡನೂರು ಗ್ರಾಮದ ಲೋಹಿತಾಶ್ವ, ಕಾಂತರಾಜು ಬಂಧಿತರಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *