ಸಕಲೇಶಪುರ:ನ, 18: ಯಸಳೂರು ಹೋಬಳಿ ಹೆರೂರು ಗ್ರಾಮದಲ್ಲಿ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಶೋಬ ಹೆತ್ತೂರು ರವರಿಗೆ ಸೇರಿದ ಮರಗಳನ್ನುದರ್ಮಪ್ಪ, ಶರತ್, ಭರತ್ ಇವರುಗಳು ನಾಶಪಡಿಸಿದ್ದಾರೆ.

ಹಲವು ವರ್ಷಗಳಿಂದ ಬೆಳೆದಿದ್ದ ಸುಮಾರು ₹3 ಲಕ್ಷ ಮೌಲ್ಯದ ಸೀಲ್ವರ್ ಮರಗಳನ್ನು ಕೆಲ ನೀಚರು – ಮಾನವ ರೂಪದ ದರೋಡೆಗಾರು ಮಧ್ಯರಾತ್ರಿ ಕಡಿದು ನಾಶಮಾಡಿದ್ದಾರೆ ಮಾಹಿತಿ ಹೊರಬಿದ್ದಿದೆ.

ಪ್ರಕೃತಿಯನ್ನು ಕಾಪಾಡಬೇಕಾದ ಸಮಾಜದಲ್ಲಿ, ಪರರ ಆಸ್ತಿಯ ಮೇಲೆ ಹೀಗೆ ಕೆಟ್ಟ ದೃಷ್ಟಿ ಹಾಕಿ, ಸಂಪತ್ತನ್ನು ಕಾನೂನಿನ ಭಯವಿಲ್ಲದೆ ನಾಶಮಾಡುವ ಮಟ್ಟಕ್ಕೆ ಮಾನವ ಜನರು ಇಳಿದಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಮಗಳ ವಿದ್ಯಾಭ್ಯಾಸಕ್ಕೆ ಹಾಗೂ ತಾಯಿಯ ಅರೋಗ್ಯಕ್ಕೆ ಅಗತ್ಯತೆಗಾಗಿ ಮರ ಕಡಿಯಲು ಮುಂದಾಗಿದ್ದ ಸಂದರ್ಭದಲ್ಲಿ , ಅರೋಪಿಗಳ ಕ್ರೂರತೆ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಹುಟ್ಟಿಸಿದೆ.

ಇಷ್ಟೇ ಅಲ್ಲ…!ಮರಗಳನ್ನು ಕಡಿದು ನಾಶಮಾಡಿದ ನಂತರ, ಶೋಬ ಹೆತ್ತೂರು ರವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬುದು ವಿಷಯ ಇನ್ನಷ್ಟು ಆತಂಕಕ್ಕೆ ಎಡೆಮಾಡಿದೆ. ಕಾನೂನು ಸುವ್ಯವಸ್ಥೆಗೆ ತೆರೆದ ಸವಾಲಿನಂತಾಗಿದೆ.

ಈ ಘಟನೆಯಿಂದ ಭಯಭೀತರಾದ ಕುಟುಂಬಕ್ಕೆ ನ್ಯಾಯ ದೊರೆಯಬೇಕು, ಅಪರಾಧಿಗಳನ್ನು ಕಾನೂನಿನ ಮುಂದೆ ತಲೆಬಾಗಿಸುವಂತೆ ಪೊಲೀಸರು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಸಾರ್ವಜನಿಕರ ಒತ್ತಾಯ ಹೆಚ್ಚುತ್ತಿದೆ.”ಪರರ ಆಸ್ತಿಯನ್ನು ನಾಶಮಾಡಿ, ಬೆದರಿಕೆ ಹಾಕುವವನು ಮಾನವನೇ ಅಲ್ಲ – ಸಮಾಜಕ್ಕೆ ಮಾರಕ!” ಎಂದು ಜನ ಕಿಡಿಕಾರಿದ್ದಾರೆ.

ಘಟನೆ ಸಂಬಂದಿಸಿದಂತೆ ಪೊಲೀಸರಿಗೆ ದೂರು ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *