ಸಕಲೇಶಪುರ :- ಹೆತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ದಿನಾಂಕ: -20 -11 -2025 ನೇ ಗುರುವಾರರಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಣಬನಹಳ್ಳಿ ಶಾಲೆಯಲ್ಲಿ ನಡೆಯಿತು. ಹೆತ್ತೂರು ಕ್ಲಸ್ಟರ್ ನ ಸುಮಾರು 100 ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು.

ವಿದ್ಯಾರ್ಥಿಗಳು ಛದ್ಮವೇಷ, ಚಿತ್ರಕಲೆ, ದೇಶಭಕ್ತಿ ಗೀತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿ ಬಹುಮಾನಗಳನ್ನು ಪಡೆದು ತಾಲ್ಲೂಕು ಹಂತಕ್ಕೆ ಆಯ್ಕೆಯಾದರು.

ಈ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹೆತ್ತೂರು ಸಾನ್ವಿ ಪಬ್ಲಿಕ್ ಸ್ಕೂಲ್ ನ ಪ್ರಥಮ್ ಗೌಡ ಜಿ. ಯು ಹೆತ್ತೂರು ಬೆಳಗಾರರ ಸಂಘದ ಕಾರ್ಯದರ್ಶಿ ಉದಯ್ ಹಾಗೂ ನ್ಯಾಯವಾದಿಗಳಾದ ವಾಣಿ ಉದಯವರ ಮಗ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ತೀರ್ಪುಗಾರರ ಮೆಚ್ಚುಗೆ ಪಡೆದು ಪ್ರಥಮ ಬಹುಮಾನ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕೊಣಬನಹಳ್ಳಿ ಶಾಲಾ ಮುಖ್ಯ ಶಿಕ್ಷಕಿ ದೇವಕಿ, ಕುಮಾರಸ್ವಾಮಿ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಲಲಿತ, ಬಡ್ತಿ ಮಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶ ವಿವಿಧ ಶಾಲೆಗಳಿಂದ ಶಿಕ್ಷಕರು, ಮಕ್ಕಳು,ಎಸ್ ಡಿ ಎಂ ಸಿ ಸದಸ್ಯರು,ಪೋಷಕರು, ಗ್ರಾಮಸ್ಥರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *