ಅರಸೀಕೆರೆ : ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಎಳ್ಳು ಅಮಾವಾಸ್ಯೆ ಪೂಜೆಯನ್ನು ನೂರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನೆರವೇರಿಸಲಾಯಿತು ಲೋಕಕಲ್ಯಾಣಾರ್ಥವಾಗಿ ಪ್ರತಿ ತಿಂಗಳ ಅಮಾ ವಾಸ್ಯೆಯಂದು ಮೂಗೂತಿ ಸುಂದರಿ ಗೌರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು

ಪೂಜೆಯ ಅಂಗವಾಗಿ ದೇವಾಲಯವನ್ನು ತಳಿರು ತೋರಣ ಬಾಳೆ ಕಂದುಗಳಿಂದ ಶ್ಯಂಗರಿಸಿದ್ದರೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂ ಕರಿಸಿದ್ದು ನೋ ಡುಗರ ಕಣ್ಮನ ಸೆಳೆಯಿತು ಮುಂಜಾನೆ ಧನುರ್ಮಾಸ ಹಾಗೂ ಅಮಾವಾಸ್ಯೆ ಪೂಜೆ ನಿಮಿತ್ತ ಗೌರಮ್ಮ ದೇವಿಗೆ ಕುಂಕುಮಾರ್ಚನೆ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠ ಮಹಾ ತಪಸ್ವಿಲಿಂಗೈಕ್ಯ ಶಿವಲಿಂಗಜ್ಜಯ್ಯ ಮೂರ್ತಿಗೆ ಮತ್ತು ಗ್ರಾಮದ ಆರಾಧ್ಯ ದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಪುರೋಹಿತರಿಂದ ಧಾರ್ಮಿಕ ವಿದಿ ವಿಧಾನಗಳಿಂದ ಭಕ್ತರ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಯಿತು

ರಾತ್ರಿ 8 ಗಂಟೆಗೆ ಸರಿಯಾಗಿ ಮಹಾಮಂಗಳಾರತಿ ಕರ್ಪೂರದಾರತಿ ಸಲ್ಲಿಸಲಾಯಿತು

ನಂತರ ಬಂದ ಭಕ್ತಾದಿಗಳಿಗೆ ಎಂಪಿ ಶಿವಲಿಂಗಪ್ಪ ಮತ್ತು ಕುಟುಂಬ ವರ್ಗದಿಂದದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು ಮಾಡಾಳು ಸೇರಿದಂತೆ ಕೊಪ್ಪಲು ಸೀತಾಪುರ ಯ ರೇಹಳ್ಳಿ ವೈಜಿಹಳ್ಳಿ ಡಿ ಎಂ ಕುರ್ಕೆ ಶಶಿವಾಳ ರಾಂಪುರ ಸೊಪ್ಪಿನ ಹಳ್ಳಿ ಪಿ ಹೊಸಹಳ್ಳಿ ಕಿತ್ತನಕೆರೆ ದೋಣನಕಟ್ಟೆ ದ ಶಂಕರನಹಳ್ಳಿ ಮದ್ದರಹಳ್ಳಿ ಕಡಲ ಮಗೆ ಗ್ರಾಮಗಳಿಂದ ಭಕ್ತಾದಿಗಳು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *