
ಸನಾತನ ಸೇವಾ ಟ್ರಸ್ಟ್ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ.
ಸಕಲೇಶಪುರ: ತಾಲೂಕಿನ ಕೌಡಳ್ಳಿ ಗ್ರಾಮದಲ್ಲಿರುವ ಎಸ್.ಕೆ.ಗಣಪಯ್ಯ ರೋಟರಿ ಶ್ರವಣ ದೋಷವುಳ್ಳ ಶಾಲೆಯಲ್ಲಿ 2026 ನೇ ವರ್ಷದ ನೂತನ ಕ್ಯಾಲೆಂಡರ್ ಅನ್ನು ನಗರ ಠಾಣಾ ವೃತ್ತ ನಿರೀಕ್ಷಕರಾದ ಸಿ.ವಿ. ವನರಾಜ್ ಮತ್ತು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಪೊಲೀಸ್ ಅಧಿಕಾರಿ ವನರಾಜ್ ಸಮಾಜಮುಖಿಯಾಗಿ ನಿಸ್ವಾರ್ಥ ಸೇವೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ . ಸಮಾನ ಮನಸ್ಕರು ಸನಾತನ ಸೇವಾ ಟ್ರಸ್ಟ್ ಹೆಸರಿನಲ್ಲಿ ಹಲವಾರು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ, ಪ್ರತಿಫಲ ಅಪೇಕ್ಷೆ ಇಲ್ಲದೆ ಸಮಾಜಕ್ಕೆ ದುಡಿಯುವುದು ಮನುಷ್ಯನ ದೊಡ್ಡ ಗುಣ ಎಂದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕೆಲಸಗಳು ಈ ಟ್ರಸ್ಟ ವತಿಯಿಂದ ನಡೆಯಲಿ ಎಂದು ಹಾರೈಸಿದರು.
ಸಮಾಜ ಸೇವಕರಾದ ಜೈ ಮಾರುತಿ ದೇವರಾಜ್ ಮಾತನಾಡಿ ಶ್ರವಣ ದೋಷವುಳ್ಳ ಶಾಲೆಯಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡುತ್ತಿರುವುದು ಸನಾತನ ಸೇವಾ ಟ್ರಸ್ಟ್ ತಂಡದ ಒಂದು ಉತ್ತಮವಾದ ನಿರ್ಧಾರ . ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ದೇವರ ಮಕ್ಕಳಿದ್ದಂತೆ ,ಇವರಿಗೆ ಶಕ್ತಿ ನೀಡುವ ಕೆಲಸವನ್ನು ನಾಗರಿಕ ಸಮಾಜ ಮಾಡಬೇಕು.. ಈ ಟ್ರಸ್ಟ್ ಸುಮಾರು ಒಂದು ವರ್ಷದಿಂದ ಸಮಾಜದಲ್ಲಿ ಹಲವಾರು ಉತ್ತಮ ಕೆಲಸವನ್ನು ಮಾಡಿಕೊಂಡು ಬಂದಿದೆ. ಸಮಾಜಮುಖಿ ಕೆಲಸ ಮಾಡುವವರ ಜೊತೆ ಕೈಜೋಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಧ್ವನಿ ಯಾಗಬೇಕು ಎಂದರು.
ಟ್ರಸ್ಟಿನ ಅಧ್ಯಕ್ಷ ಆರ್.ಬಾಲರಾಜು ಮಾತನಾಡಿ ಟ್ರಸ್ಟ್ ವತಿಯಿಂದ ಎರಡನೇ ವರ್ಷದ ಕ್ಯಾಲೆಂಡರ್ ಅನ್ನು ಈ ಶಾಲೆಯಲ್ಲಿ ಬಿಡುಗಡೆ ಮಾಡುತ್ತಿರುವುದಕ್ಕೆ ಬಹಳ ಹೆಮ್ಮೆ ಎನಿಸುತ್ತದೆ, ಇಲ್ಲಿರುವ ಮಕ್ಕಳು ಮತ್ತು ಪ್ರಾಧ್ಯಾಪಕರು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾಗಿ ಸಕಲೇಶಪುರಕ್ಕೆ ಮತ್ತು ರೋಟರಿ ಸಂಸ್ಥೆಗೆ ಉತ್ತಮವಾದ ಹೆಸರನ್ನು ತಂದಿದ್ದಾರೆ, ಇಂಥ ಶಾಲೆಗಳಿಗೆ ದಾನಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸಹಾಯವನ್ನು ಮಾಡಬೇಕು ಎಂದರು.
ಟ್ರಸ್ಟಿನ ಸಂಸ್ಥಾಪನಾ ಅಧ್ಯಕ್ಷ ಮಂಜುನಾಥ್ ಸಂಗಿ ಟ್ರಸ್ಟಿನ ಒಂದು ವರ್ಷದ ಕಾರ್ಯವೈಕರಿ ಹಾಗೂ ಮುಂದಿನ ಕಾರ್ಯದ ಬಗ್ಗೆ ತಿಳಿಸಿಕೊಟ್ಟರು.ಶಾಲಾ ಮಕ್ಕಳಿಗೆ ಪೆನ್ನು, ಪುಸ್ತಕ ಹಾಗೂ ಸಿಹಿಯನ್ನು ಟ್ರಸ್ಟಿನ ವತಿಯಿಂದ ವಿತರಿಸಲಾಯಿತು.
ಶಾಲೆಯ ಕಾರ್ಯದರ್ಶಿ ರವಿಕುಮಾರ್ ಸನಾತನ ಸೇವಾ ಟ್ರಸ್ಟ್ ನ ಸದಸ್ಯರಿಗೆ ಶಾಲೆಯ ಪರವಾಗಿ ಧನ್ಯವಾದಗಳು ತಿಳಿಸಿದರು.ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಸಂದೇಶ್ ಹೆಬ್ಬನಹಳ್ಳಿ, ಅನಿಲ್, ಕುಮಾರಸ್ವಾಮಿ, ರುದ್ರೇಶ್ ಶೆಟ್ಟಿ, ಲೋಹಿತ್ ಜಂಬರಡಿ, ಕುಸುಮ ಭೂಪಾಲ್ ಹಾಗೂ ಪದಾಧಿಕಾರಿಗಳು ,ಸದಸ್ಯರು ಹಾಜರಿದ್ದರು.
