ಸಕಲೇಶಪುರ : ಪಟ್ಟಣದ ಒಕ್ಕಲಿಗ ಸಮುದಾಯ ಭವನದಲ್ಲಿ ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಅಪ್ ಇಂಡಿಯಾ ವತಿಯಿಂದ ಆಯೋಜಿಸಲಾಗಿದ್ದ ಪಕ್ಷ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ ಎಸ್. ಐ. ಆರ್ ನುಸುಳುಕೋರರ ವಿರುದ್ದ ಎಂದು ಹೇಳಲಾಗುತ್ತಿದ್ದು ಆದರೆ ನಿಜವಾಗಿಯೂ ಇದು ಹಾಗಿಲ್ಲ. ಇದರ ಹಿಂದಿನ ಉದ್ದೇಶವೆ ಬೇರೆ ಇದೆ. ಭಾರತದ ದಮನೀತ ವರ್ಗಗಳನ್ನು ಅಧಿಕಾರ ವಂಚಿತ ರಾಗಿ ಮಾಡುವುದು ಬಿಜೆಪಿ ಯ ಉದ್ದೇಶವಾಗಿದೆ, ಬಿಹಾರದಲ್ಲಿ ತರಾತುರಿಯಲ್ಲಿ ಪಿತೂರಿ ಮಾಡಿ 66 ಲಕ್ಷ ಜನರನ್ನು ಮತದಾನ ಪ್ರಕ್ರಿಯೆಯಿಂದ ಹೊರ ಇಡಲಾಯಿತು.

ತಮಿಳುನಾಡಿ ನಿಂದ 16% ಜನರನ್ನು ಮತ ದಾನ ಪ್ರಕ್ರಿಯೆ ಯಿಂದ ಹೊರ ಇಡಲಾಗಿದೆ. ಉತ್ತರ ಪ್ರದೇಶದಲ್ಲಿ 3 ಕೋಟಿ ಜನರನ್ನು ಹೊರ ಇಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಕೂಡ ಇದೇ ಕಥೆಯಾಗಿದೆ.11 ದಾಖಲಾತಿಗಳನ್ನು ನೀಡಬೇಕು ಎನ್ನುವ ಚುನಾವಣೆ ಆಯೋಗ ನಿವೃತ್ತಿಯಾಗಿ ಪೆನ್ಷನ್ ತೆಗೆದುಕೊಳ್ಳುವ ಪ್ರಮಾಣ ಪತ್ರ ಹೊಂದಿರುವರು ಎಷ್ಟ್ಟು ಜನ ಇದ್ದಾರೆ,ಪಾಸ್ಪೋರ್ಟ್ ಎಲ್ಲಾರ ಬಳಿ ಇರಲು ಸಾಧ್ಯವಿದೆಯೇ?

ಆಧಾರ್ ಗೆ ಏಕೆ ಮಾನ್ಯತೆ ಕೊಡುತ್ತಿಲ್ಲ, ಕಾಂಗ್ರೆಸ್ ಎಸ್.ಐ. ಆರ್ ಪ್ರಕ್ರಿಯೆ ಕುರಿತು ಗಮನ ಹರಿಸಬೇಕು, ಆದರೆ ಈ ಕುರಿತು ಅವರಿಗೆ ಚಿಂತೆ ಇಲ್ಲಾ , ಎಸ್. ಐ. ಆರ್ ಪ್ರಕ್ರಿಯೆ ತೆರೆ ಮೆರೆಯಲ್ಲಿ ನಡೆಯುತ್ತಿದೆ. ಪಶ್ಚಿಮ ಬೆಂಗಳದಲ್ಲಿ ಹಾಗೂ ಬಿಹಾರದಲ್ಲಿ ಹಲವು ಪ್ರಾಮಾಣಿಕ ಅಧಿಕಾರಿಗಳು ಒತ್ತಡದಿಂದ ಮೃತ ಪಟ್ಟಿದ್ದಾರೆ, ರಾಜ್ಯದಲ್ಲೂ ಸಹ ಎಸ್. ಐ. ಆರ್ ಪ್ರಕ್ರಿಯೆ ಸದ್ದಿಲ್ಲದೇ ಆರಂಭವಾಗಲಿದ್ದು ಮುಸ್ಲಿಂ ರ ಮತಗಳನ್ನು ವ್ಯವಸ್ಥಿತ ವಾಗಿ ತೆಗೆಯುವ ಪ್ರಯತ್ನ ಮಾಡಲಾಗುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕುರಿತು ಗಮನ ಹರಿಸದಿದ್ದಲ್ಲಿ ಎಸ್. ಡಿ. ಪಿ. ಐ ವತಿಯಿಂದ ರಾಜ್ಯದ್ಯಾತ ಹೋರಾಟ ಮಾಡಲಾಗುವುದು ಎಂದರು.

ವುಮೆನ್ಸ್ ಇಂಡಿಯಾ ಮೂವ್ಮೆಂಟ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಪ್ರಸ್ತುತ ರಾಜಕೀಯದಲ್ಲಿ ಮಹಿಳೆಯರ ಪಾತ್ರದ ಕುರಿತು ಮಾತನಾಡಿ ಮುಸ್ಲಿಂ ರು ದ್ವೇಷ ರಾಜಕಾರಣಕ್ಕೆ ದೇಶದಲ್ಲಿ ಬಲಿಪಶುಗಳಾಗಿದ್ದಾರೆ. ಎಸ್. ಐ. ಆರ್ ಗೆ ಬಡವರು ಕೆಲವು ದಾಖಲಾತಿಗಳನ್ನು ನೀಡಲು ಸಾಧ್ಯವಿಲ್ಲ, ಮಹಿಳೆಯರಿಗೆ ಎಸ್. ಐ ಆರ್ ಕುರಿತು ಯಾವುದೇ ಮಾಹಿತಿ ಇಲ್ಲಾ. ಈ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಮನೆಮನೆಗೆ ಹೋಗಿ ಜಾಗೃತಿ ಮಾಡಬೇಕು.ಕೇಂದ್ರ ಸರ್ಕಾರ ಮುಸ್ಲಿಂ ರ ವಿರುದ್ಧ ಹಲವು ಕಾನೂನು ಜಾರಿ ಗೊಳಿಸಿದೆ ಅದರೆ ನಾವು ಏನು ಮಾಡುತಿದ್ದೇವೆ. ಕಾಂಗ್ರೆಸ್ ನವರು ಮುಸ್ಲಿಂ ಪರ ಬರುವುದಿಲ್ಲ, ನಮ್ಮ ಹಕ್ಕುಗಳನ್ನು ನಾವೇ ಹೋರಾಟ ಮಾಡಿ ಪಡೆಯಬೇಕಾಗಿದೆ. ಕೋಗಿಲು ಲೆಔಟ್ ನಲ್ಲಿ ಬಡವರಿಗೆ ಮಾಹಿತಿ ನೀಡದೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಬುಲ್ದೊಜರ್ ಸಂಸ್ಕೃತಿ ಯನ್ನು ಇಲ್ಲಿನ ಕಾಂಗ್ರೆಸ್ ಸರ್ಕಾರ ತಂದಿರುವುದು ಎಷ್ಟ್ಟು ಸರಿ, ಹೀಗಾಗಿ ನಾವೆಲ್ಲಾ ಮುಂದಿನ ದಿನಗಳಲ್ಲಿ ಜಾಗೃತರಾಗ ಬೇಕಾದ ಅವಶ್ಯಕತೆ ಇದೆ ಎಂದರು.

ಈ ಸಂದರ್ಭದಲ್ಲಿ ಎಸ್. ಡಿ. ಪಿ. ಐ ಜಿಲ್ಲಾಧ್ಯಕ್ಷ ಇಮ್ರಾನ್ ಅರೇಹಳ್ಳಿ, ಜಿಲ್ಲಾ ಉಪಾಧ್ಯಕ್ಷ ಸಿದ್ದಿಕ್ ಆನೆಮಹಲ್, ತಾಲ್ಲೂಕು ಅಧ್ಯಕ್ಷ ವಾಜೀದ್ ಪಾಷ,ಉಪಾಧ್ಯಕ್ಷ ಸೈಯದ್ ಮೈದೀನ್, ಮುಖಂಡರುಗಳಾದ ಹೈದರ್ ಆನೆಮಹಲ್, ಸಾಧಿಕ್ ಮಂಜರಾಬಾದ್,ಸಲೀಂ, ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *