
ರಾಮನಾಥಪುರ- ನಾವು ಸಲ್ಲಿಸುವ ವಂದನಾರ್ಪಣೆಯೇ ರುದ್ರಾಭಿಷೇಕದ ವಿಶೇಷ, ನಾವು ಎನೇ ಸಾಧನೆ ಮಾಡಲಿ; ಅವರು ಮಾಡಿದ ಕೊಡುಗೆ ಅಪಾರ, ಅವರೆಲ್ಲರನ್ನೂ ನೆನೆದು ಪೂಜೆ ಸಲ್ಲಿಸುವುದು ಎಲ್ಲರ ಕರ್ತವ್ಯ. ಇಂತಹ ಪೂಜಾ ಕೈಂಕರ್ಯಗಳಿಂದ ಹೆಚ್ಚಿನದಾದ ಪುಣ್ಯ ಸಂಪಾದನೆ ಮಾಡಿ ಮೋಕ್ಷವನ್ನು ಪಡೆಯಲಿ ಎಂದು ನಾವು ಇಂತಹ ಪೂಜಾ ಕೈಂಕರ್ಯಗಳನ್ನು ಮಾಡಿಕೊಂಡು ಬರುವುದು ಎಲ್ಲರ ಕರ್ತವ್ಯ ಎಂದು ಶ್ರೀಕ್ಷೇತ್ರದ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.
ರಾಮನಾಥಪುರ ಹೋಬಳಿಯ ಶಿರದನಹಳ್ಳಿ ಗ್ರಾಮದಲ್ಲಿ ಲಿಂ. ಚಂದ್ರಶೇಖರ್ ಅವರ ಕೈಲಾಸ ಗಣಾರಾಧನೆ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರದ ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರಮಹಾಸ್ವಾಮೀಜಿಯವರ ರುದ್ರಾಭಿಷೇಕ ಪೂಜೆಯಲ್ಲಿ ಕಲ್ಲುಮಠ ಶ್ರೀಗಳು, ಬೆಟ್ಟದಪುರದ ಮಠದ ಶ್ರೀಗಳು, ಕಿರಿಕೊಡ್ಲಿ ಮಠದ ಶ್ರೀಗಳು, ಬಸವಪಟ್ಟಣ ಮಠದ ಶ್ರೀಗಳು, ತೇಜೂರು ಮಠದ ಶ್ರೀಗಳು, ಕೆಸವತ್ತೂರು ಮಠದ ಶ್ರೀಗಳು, ಟಿ. ಮಾಯಿಗೌಡನಹಳ್ಳಿ ಮಠದ ಶ್ರೀಗಳು, ಹಾಡ್ಯ ಶಿವಣ್ಣ, ಶರಣರಾದ ಎಸ್.ಬಿ. ರುದ್ರಪ್ಪ, ವೇದಮೂರ್ತಿ, ಯಶಸ್, ಮುಂತಾದವರು ಭಾಗವಹಿಸಿದ್ದರು.
