
ವರನಟ ಡಾ. ರಾಜ್ ಕುಮಾರ್ ಅವರ 20ನೇ ವರ್ಷದ ಪುಣ್ಯಸ್ಮರಣೆಯನ್ನು ಬೇಲೂರು ಪಟ್ಟಣದ ರಾಜ್ ಕುಮಾರ್ ಧ್ವಜಸ್ತಂಭದ ಬಳಿ ಭಕ್ತಿಭಾವದಿಂದ ಆಚರಿಸಲಾಯಿತು.*
*ಈ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ ಕುಮಾರ್ ಅಭಿಮಾನಿ ಬಳಗ್ ತಾಲೂಕು ಅಧ್ಯಕ್ಷ ತೀರ್ಥಂಕರ್ ಅವರು,
“ಡಾ. ರಾಜ್ ಕುಮಾರ್ ಅವರು ಕೇವಲ ನಟರಲ್ಲ, ಕನ್ನಡ ನಾಡಿನ ಸಂಸ್ಕೃತಿ ಮತ್ತು ಮೌಲ್ಯಗಳ ಪ್ರತೀಕವಾಗಿದ್ದರು. ಅವರ ಜೀವನ ಶೈಲಿ, ಸರಳತೆ ಮತ್ತು ಸಮಾಜದ ಮೇಲಿನ ಕಾಳಜಿ ಎಲ್ಲರಿಗೂ ಪ್ರೇರಣೆಯಾಗಿದೆ. ಇಂದಿನ ಯುವಜನತೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಉತ್ತಮ ದಿಕ್ಕಿನಲ್ಲಿ ಸಾಗುತ್ತದೆ” ಎಂದು ಹೇಳಿದರು.
“ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದರೂ ಸಹ ಅಹಂಕಾರವಿಲ್ಲದೆ ಸರಳ ಜೀವನ ನಡೆಸಿದವರು ಡಾ. ರಾಜ್ ಕುಮಾರ್. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಲು ಅವರು ಮಾಡಿದ ಸೇವೆ ಅನನ್ಯ. ಇಂತಹ ಮಹಾನ್ ವ್ಯಕ್ತಿತ್ವವನ್ನು ನಾವು ಸದಾ ಸ್ಮರಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಣಿಂದ್ರ, ಮಂಜುನಾಥ್, ಹೋಟೆಲ್ ಚಂದ್ರಣ್ಣ, ಅಕ್ಕಿ ರಾಜು, ವೆಂಕಟೇಶ್ ಕೇಶವ್ ಸೇರಿದಂತೆ ಇತರರು ಹಾಜರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಅನೇಕ ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಲ್ಲಿಸಿದರು.
