
ಸಕಲೇಶಪುರ : ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಅಕ್ರಮ ಗೋಮಾಂಸ ಮಾರಾಟದ ವಿರುದ್ದ ಕಾರ್ಯಚರಣೆಗೆ ಇಳಿದಿದ್ದು ಆಚಂಗಿ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಶೇಖರಿಸಿಟ್ಟದ್ದ ಗೋಮಾಂಸ ಪತ್ತೆಯಾಗಿದೆ.
ಹಿಂದೂ ಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರ ಮಾಹಿತಿ ಆದರಿಸಿ ಸಕಲೇಶಪುರ ನಗರ ಠಾಣೆಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಮನೆಯಲ್ಲಿ ಮಾರಾಟಕ್ಕೆ ಪ್ಯಾಕೆಟ್ ಮಾಡಿಟ್ಟಿದ್ದ 100 ಕೆ.ಜಿ ಅಧಿಕ ಗೋಮಾಂಸದ ಪ್ಯಾಕೆಟ್’ಗಳು ಪತ್ತೆಯಾಗಿದೆ.
ಈ ಸಂಬಂಧ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಗೋಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಮುಖ ಆರೋಪಿ ಅತಿಕ್ ಖುರೇಶಿ ಎಂದು ಗುರುತಿಸಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಕಾರ್ಯಾಚರಣೆ ಸಂಬಂಧ ಪ್ರತಿಕ್ರಿಯಿಸಿರುವ ಹಿಂದೂ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಮಂಜುನಾಥ್ ಕಬ್ಬಿನಗದ್ದೆ ಅವರು ಸಕಲೇಶಪುರ ಉಪವಿಭಾಗ ಅಧೀಕ್ಷಕರನ್ನು ಬೇಟಿ ಮಾಡಿ ಅತಿಕ್ ಖುರೇಶಿ ಸೇರಿದಂತೆ ಪದೇ ಪದೇ ಗೋಮಾಂಸ ಗೋಸಾಗಾಟ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಗಡಿಪಾರು ಮಾಡುವಂತೆ ಮನವಿ ನೀಡಲಾಗುವುದು ಎಂದು ತಿಳಿಸಿದರು.
