ಸಕಲೇಶಪುರ : ಪಟ್ಟಣದ ತೇರ ಫಂಥ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ರಿ ೨೦೫೪ನೇ ಮದ್ಯವರ್ಜನ ಶಿಬಿರದದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಪಕೃತಿಯಲ್ಲಿ ಜೈವಿಕ ವೈವಿಧ್ಯತೆಯಲ್ಲಿ ಪ್ರಾಣಿಗಳು ಸಹಜ ನಿಯಮದಂತೆ ಬದುಕುತ್ತವೆ. ಆದರೆ ಮನುಷ್ಯನಿಗೆ ವಿಶೇಷವಾದ ವಿವೇಚನಾ ಶಕ್ತಿ ಇದೆ. ತಪ್ಪನ್ನು ಅರಿತು ತಿದ್ದಿಕೊಳ್ಳುವ ಸಾಮರ್ಥ್ಯವೂ ಮನುಷ್ಯನಿಗೇ ವಿಶೇಷವಾಗಿದೆ. ಇದೇ ಮನುಷ್ಯ ಮತ್ತು ಪ್ರಾಣಿಗಳ ನಡುವೆ ದೊಡ್ಡ ವ್ಯತ್ಯಾಸ, ಮನುಷ್ಯರು ತಮ್ಮ ಜೀವನದಲ್ಲಿ ತಪ್ಪುಗಳನ್ನು ಮಾಡುವುದು ಸಹಜ ಆದರೆ ತಮ್ಮ ತಪ್ಪುಗಳನ್ನು ಅರಿತು ಸರಿದಾರಿಯಲ್ಲಿ ನಡೆಯುವ ವ್ಯಕ್ತಿ ನವಜೀವನವನ್ನು ಪಡೆಯುತ್ತಾನೆ, ದುಷ್ಟ ಆಲೋಚನೆಗಳಿಂದ ದೂರವಿದ್ದು ಸಜ್ಜನ ಮಾರ್ಗದಲ್ಲಿ ನಡೆಯುವವರು ಸಮಾಜಕ್ಕೆ ಆದರ್ಶವಾಗುತ್ತಾರೆ.ಮಾನವ ಸೃಷ್ಟಿಯ ಹಿಂದೆ ಭಗವಂತನ ಅರ್ಥಪೂರ್ಣ ಉದ್ದೇಶವಿದೆ ಎಂದು ತಿಳಿಯಲಾಗಿದೆ.

ಮನುಷ್ಯನು ಸತ್ಯ, ಧರ್ಮ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಅವನ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆ ಉಂಟಾಗುತ್ತದೆ. ಉತ್ತಮ ಚಿಂತನೆ ಮತ್ತು ಸಜ್ಜನಿಕೆಯ ಮೂಲಕ ಹೊಸ ಬದುಕನ್ನು ಆರಂಭಿಸುವುದೇ ನಿಜವಾದ ಪುನರ್ಜನ್ಮವಾಗಿದೆ ಎಂದರು ಮನುಷ್ಯನ ಪಂಚೇಂದ್ರಿಯಗಳು ಮೆದುಳಿನೊಂದಿಗೆ ಸಂಪರ್ಕ ಹೊಂದಿದ್ದು, ಅವುಗಳ ಮೂಲಕ ಜ್ಞಾನ ಮತ್ತು ಅನುಭವಗಳು ರೂಪುಗೊಳ್ಳುತ್ತವೆ. ಆದರೆ, ಜೀವನದಲ್ಲಿ ಧರ್ಮ, ಸತ್ಯ ಮತ್ತು ಒಳ್ಳೆಯ ಆಲೋಚನೆಗಳನ್ನು ಅಳವಡಿಸಿಕೊಂಡರೆ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳು ಬೆಳೆಯಲು ಸಾಧ್ಯ, ಮನುಷ್ಯನ ಜೀವನದಲ್ಲಿಯೂ ಸಂಕಷ್ಟಗಳ ನಂತರ ಉತ್ತಮ ಜೀವನ ಆರಂಭವಾಗಬಹುದು.. ಇಂತಹ ಮೌಲ್ಯಯುತ ಬದುಕೇ ನವಜೀವನದ ನಿಜವಾದ ಅರ್ಥ, ಮನಸ್ಸಿನ ಶುದ್ಧಿ ಮತ್ತು ಸಜ್ಜನ ಜೀವನವೇ ಆತ್ಮವನ್ನು ಪರಮಾತ್ಮನ ಕಡೆಗೆ ನಡೆಸುವ ಸಾದನವಾಗಿದೆ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ೨೦೫೪ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರೇಖಾ ಸುರೇಶ್, ಉಪಾಧ್ಯಕ್ಷರಾದ ವಿಜಯಕುಮಾರ್ ಬ್ಯಾಕರವಳ್ಳಿ, ಕೋಶಾಧಿಕಾರಿ ಯೋಗೇಶ್, ಯೋಜನಾಧಿಕಾರಿ ರಾಜೇಶ್ ಎಂ ಕಾನರ್ಪ, ಶಿಬಿರಾಧಿಕಾರಿ ನಂದ ಕುಮಾರ್, ಆರೋಗ್ಯ ಸಹಾಯಕಿ ಫಿಲೋಮಿನಾ ಡಿಸೋಜ ಹಾಗೂ ಯೋಜನೆಯ ಕಾರ್ಯಕರ್ತರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು, ಸೇವಾ ಪ್ರತಿನಿಧಿಯವರು ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed