
ಹಾಸನ ಜಿಲ್ಲೆ ಫೈನಲ್ ಪಂದ್ಯದಲ್ಲಿ ಬೆಳಗಾವಿ ತಂಡದ ವಿರುದ್ದ ಪೂರ್ಣವಧಿಯಲ್ಲಿ 0-0 ಅಂತ್ಯಗೊಂಡಿದ್ದು, ಪೆನಾಲ್ಟಿ ಶೂಟ್ ನಲ್ಲಿ 3-3 ಸಮಬಲ ಗೊಂಡಿದ್ದು ಸಡನ್ ಡೆತ್ ನಲ್ಲಿ ಬೆಳಗಾವಿ ವಿರುದ್ದ 2-1 ರಲ್ಲಿ ಪಂದ್ಯ ಮುಕ್ತಾಯಗೊಳಿಸಿತು.
ಇದಕ್ಕೂ ಮೊದಲು ನಡೆದ ಸೆಮಿಪೈನಲ್ ಮತ್ತು ಕ್ವಾಟರ್ ಫೈನಲ್ ನಲ್ಲಿ ಬಲಿಷ್ಠ ಬೀದರ್ ಮತ್ತು ಬೆಂಗಳೂರು ನಗರ ತಂಡಗಳನ್ನು ಸೋಲಿಸಿತ್ತು.
ಕಲ್ಬುರ್ಗಿ ಮತ್ತು ಚಿಕ್ಕಮಗಳೂರು ತಂಡಗಳನ್ನು ಲೀಗ್‌ನಲ್ಲಿ ಸೋಲಿಸಿತು.
ಹಾಸನ ಜಿಲ್ಲೆ ಫುಟ್ಬಾಲ್ ತಂಡದ ನಾಯಕ ಹರೀಶ್ ಕೆ …ಪಿಡಿಓ , ಸಹಾಯಕನಿರ್ದೇಶಕರು ಪಂರಾಜ್ ಮತ್ತು ವೇಣುಗೋಪಾಲ್ ಪಿಡಿಓ ಆನೆಮಹಲ್ ಇಬ್ಬರು ಕಳೆದ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಪ್ರತಿನಿಧಿಸಿದ್ದರು ..ತಂಡದಲ್ಲಿ ವೈಧ್ಯರುಗಳಾದ ಡಾ. ವೆಂಕಟೇಶ್, ಡಾ. ಸತೀಶ್,&ವಸಂತ್ , ಗುರುಪ್ರಸಾದ್, ಶಿವಣ್ಣ, ಸೋಮಶೇಖರ್, ಸಂಪತ್ ಆರೋಗ್ಯ ಇಲಾಖೆ ಡಾ, ಸಾಗರ್,, ಲೋಕೇಶ್ ಪಶುಸಂಗೋಪನೆ ಇಲಾಖೆ, ಲೋಕೇಶ್ ಕಂದಾಯ ಇಲಾಖೆ,_ಪುರುಶೋತ್ತಮ್ ಪ್ರಕಾಶ್ , ವೇದ, ಕಾಂತರಾಜು ಶಿಕ್ಷಣಇಲಾಖೆ ಯೋಗಾನಾಥ್ ಕೈಗಾರಿಕಾ ತರಬೇತಿ ಇಲಾಖೆ, ಮೈಲಾರಸ್ವಾಮಿ ಅರಣ್ಯ ಇಲಾಖೆ ತಂಡದ ಆಟಗಾರರು ಭಾಗವಹಿಸಿದ್ದರು..
ಹಾಸನ ಫುಟ್ಬಾಲ್ ತಂಡವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷರಾದ ಶ್ರೀ ಸಿ ಎಸ್ ಷಡಾಕ್ಷರಿ ಮತ್ತು ಜಿಲ್ಲಾಧ್ಯಕ್ಷರಾದ ಬಿ ಪಿ ಕೃಷ್ಣೇಗೌಡ ಹಾಗೂ ಜಿಲ್ಲಾ ಪಧಾಧಿಕಾರಿಗಳು ಅಭಿನಂಧಿಸಿದರು…




