
ಸಕಲೇಶಪುರ: ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಭಾರತೀಯ ರೈಲ್ವೆಯ 79ನೇ ತಿರುಚಿ ತರಬೇತಿ (79th Tiruchi Training Batch) ತಂಡವು ಸಕಲೇಶಪುರದಲ್ಲಿ ಪರಿಸರ ಪ್ರೇಮಿ ಇತಿಹಾಸ್ ಜಿ.ಎಸ್. ಅವರೊಂದಿಗೆ ಗಿಡ ನೆಡುವ ಮೂಲಕ ತಮ್ಮ 20 ವರ್ಷದ ಸ್ನೇಹ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿತು.
‘ಹಸಿರು ಕಾರ್ಯಕ್ರಮ – ಹಸಿರು ದಿನ’ ಎಂಬ ಪರಿಕಲ್ಪನೆಯಡಿ ನಡೆದ ಈ ಕಾರ್ಯಕ್ರಮದಲ್ಲಿ ತಂಡದ ಸದಸ್ಯರು ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು. ಗಿಡಗಳನ್ನು ನೆಡುವ ಮೂಲಕ ಪ್ರಕೃತಿಯೊಂದಿಗೆ ಬಾಂಧವ್ಯ ಬೆಳೆಸುವುದು ಹಾಗೂ ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಇತಿಹಾಸ್ ಜಿ.ಎಸ್. ಅವರು ಗಿಡಗಳ ಸಂರಕ್ಷಣೆ ಮತ್ತು ಪರಿಸರ ಉಳಿವಿನ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಭಾರತೀಯ ರೈಲ್ವೆಯ 79ನೇ ತಿರುಚಿ ತರಬೇತಿ ಬ್ಯಾಚ್‌ನ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು ಹಸಿರಿನ ಮಡಿಲಲ್ಲಿ ಗಿಡ ನೆಡುವ ಮೂಲಕ ತಮ್ಮ 20 ವರ್ಷದ ನೆನಪುಗಳನ್ನು ಸಂಭ್ರಮಿಸಿದರು.
