ಬೇಲೂರು : ತಾಲೂಕಿನ ಕಸಬಾ ಹೋಬಳಿ ಬಂಟೇನಹಳ್ಳಿ ಗ್ರಾಮದ ನಿವಾಸಿ ಸಾನಿಯಾ ಬಿನ್ ಇಮ್ತಿಯಾಜ್ ಅಹಮದ್ (22) ಎಂಬ ಯುವತಿ ನಾಪತ್ತೆಯಾಗಿದ್ದು, ಆಕೆಯನ್ನು ಪತ್ತೆ ಹಚ್ಚಲು ಸಾರ್ವಜನಿಕರ ಸಹಕಾರ ಕೋರಲಾಗಿದೆ.ಬೇಲೂರು ಪೊಲೀಸ್ ಠಾಣೆ ನೀಡಿರುವ ಮಾಹಿತಿಯಂತೆ, 2026ರ ಜುಲೈ 11ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4.30 ಗಂಟೆಯ ನಡುವಿನ ಅವಧಿಯಲ್ಲಿ ಸಾನಿಯಾ ಮನೆಯಿಂದ ಯಾರಿಗೂ ತಿಳಿಸದೆ ಹೊರಗೆ ಹೋಗಿದ್ದು, ಇದುವರೆಗೆ ಮನೆಗೆ ವಾಪಸ್ ಬಂದಿಲ್ಲ.

ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 207/2026 ದಾಖಲಾಗಿದೆ.ನಾಪತ್ತೆಯಾದ ಯುವತಿಯ ಚಹರೆ. ಸಾನಿಯಾ ಬಿನ್ ಹೆಚ್.ಎಂ. ಇಮ್ತಿಯಾಜ್ (22), ಮುಸ್ಲಿಂ ಜನಾಂಗ, ಬಿಳಿ ಮೈಬಣ್ಣ, ಕಪ್ಪು ತಲೆಕೂದಲು, ದುಂಡು ಮುಖ, ಸುಮಾರು 5.2 ಅಡಿ ಎತ್ತರ ಹೊಂದಿದ್ದಾರೆ. ಮನೆಯಿಂದ ಹೊರಡುವ ವೇಳೆ ಕಪ್ಪು ಬಣ್ಣದ ಬುರ್ಖಾ ಧರಿಸಿದ್ದು, ಉರ್ದು ಭಾಷೆ ಮಾತನಾಡುತ್ತಾರೆ.

ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಬೇಲೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *