
ಸಕಲೇಶಪುರ : ಮಲೆನಾಡು ರಕ್ಷಣಾ ಸೇನೆಯ ಸಕಲೇಶಪುರ ತಾಲ್ಲೂಕಿನ ಹಾದಿಗೆ ಘಟಕ ಹಾದಿಗೆ ಗ್ರಾಮದ ಈಶ್ವರ ದೇವಸ್ಧಾನದಲ್ಲಿ ಗ್ರಾಮದ ಯುವಕರ ಹಾಗೂ ಹಾನುಬಾಳು ಹೋಬಳಿ ಅಧ್ಯಕ್ಷರಾದ ಪ್ರೀತಮ್ ಮತ್ತು ಉಪಾಧ್ಯಕ್ಷರಾದ ಸಾಗರ್ ರವರ ಸಹಕಾರದೊಂದಿಗೆ ಅದ್ದೂರಿಯಾಗಿ ಉದ್ಘಾಟನೆಗೊಂಡಿತು…
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯಾಧ್ಯಕ್ಷರಾದ ಡಾ.ಸಾಗರ್ ಜಾನೇಕೆರೆಯವರು ನೂತನ ಘಟಕವನ್ನು ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿ ಸಂಘಟನೆಯ ಉದ್ದೇಶವನ್ನು ತಿಳಿಸಿ ಕೆಲವು ಸಲಹೆಗಳನ್ನು ನೀಡಿದರು..
ಹಾಗೆಯೇ ತಾ.ಅಧ್ಯಕ್ಷರಾದ ಮಂಜುದೇವ್ ರವರು ಹಾದಿಗೆ ಘಟಕದ ಅಧ್ಯಕ್ಷರಾದ ಸಚಿನ್,ಉಪಾಧ್ಯಕ್ಷರಾದ ಸೋಮಶೇಖರ್,ಚಿದಾ,ಶ್ರೀಕಂಠರವರಿಗೆ ಸನ್ಮಾನಿಸಿ ಕನ್ನಡ ಭಾವುಟ ನೀಡುವುದರೊಂದಿಗೆ ಸಂಘಟನೆಯ ಜವಾಬ್ದಾರಿ ನೀಡಿದರು.
ಈ ಸಂಧರ್ಭದಲ್ಲಿ ಸಕಲೇಶಪುರ ಯುವ ಘಟಕದ ಅಧ್ಯಕ್ಷರಾದ ವಿನಯ್ ದೋಣಿಗಾಲ್,ನಗರಾಧ್ಯಕ್ಷರಾದ ಧನ್ಯಕುಮಾರ್,ತಾ.ಕಾರ್ಯದರ್ಶಿ ಯುವರಾಜ್,ಮಳಲಿ ಘಟಕದ ಅಧ್ಯಕ್ಷರಾದ ಗೌತಮ್,ದೀಪಕ್ ಹಾಗೂ ಹಾದಿಗೆ ಗ್ರಾಮಸ್ಥರಾದ ಶಿವದೀಪ್,ಮಧು,ಅರುಣ್, ಶರತ್,ಪುನೀತ್,ಉಮೇಶ್ ಇತರರು ಇದ್ದರು.
