ಮಾಡಾಳು ಶಕ್ತಿ ದೇವತೆ ಎಂದೇ ರಾಜ್ಯಾದ್ಯಂತ ಇತಿಹಾಸ ಹೊಂದಿರುವ ಪುಣ್ಯಕ್ಷೇತ್ರ ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿಯು ಮೃತ್ತಿಕೆ ರೂಪದಲ್ಲಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರ ಸಾನಿಧ್ಯದಲ್ಲಿ ಆ 30 ರಂದು ಭಾನುವಾರ ಪುರಪ್ರವೇಶ ಮಾಡಲಿದ್ದಾರೆ

ಕಳೆದ 167 ವರ್ಷಗಳಿಂದ ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿರುವ ಶ್ರೀಸ್ವರ್ಣಗೌರಮ್ಮ ದೇವಿಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಈ ಜಾತ್ರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರು ಭಕ್ತಿಪರಶವಾಗಿ ಕಾತರದಿಂದ ಕಾಯುತ್ತಿದ್ದಾರೆ.

ಕೋಡಿಮಠದ ಮಹತಪಸ್ವಿ ಯೋಗ ಸಮಾಧಿಯಲ್ಲಿರುವ ಶಿವಲಿಂಗ ಜ್ಜ ಯ್ಯೆ ನೀಲಮ್ಮ ದೇವಿ ಕೃಪಾ ಆಶೀರ್ವಾದದಿಂದ ಜ ಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಯವರ ಸಂಕಲ್ಪದಂತೆ 30ರಂದು ಬೆಳಿಗ್ಗೆ 11:00ಗೆ ಮೂಲ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಗ್ರಾಮದ ಹೊರ ಭಾಗದಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಾಲಯದ ಮುಂಭಾಗ ಇರುವ ತೋಟದಲ್ಲಿದೇವಿಯ ಮೂರ್ತಿ ತಯಾರಿಸಲು ಮೃತ್ತಿಕೆ (ಮಣ್ಣು)ತರಲಾಗುವುದು

ಶ್ರೀಗಳ ಪಾದಪೂಜೆಯ ನಂತರ ಎರಡು ಕುಕ್ಕೆಗಳಲ್ಲಿ ಮೃ ತ್ರಿ ಕೆಯನ್ನು ತಲೆ ಮೇಲೆ ಹೊತ್ತುಕೊಂಡು ವಾಪಸ್ ಮೂಲ ಸನ್ನಿಧಿಗೆ ತರಲಾಗುವುದು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *