
ಸಕಲೇಶಪುರ : ಗೋ ಹತ್ಯೆ ನಿಷೇದಕ್ಕೆ ಸಂಬಂಧ ಹಿಂದಿನ ಬಿಜೆಪಿ ರಾಜ ಸರ್ಕಾರ ಜನರ, ಮಠಾಧೀಶರ, ಸಂಘಟನೆಗಳ ಹೋರಾಟ ಹಾಗೂ ಸಂವಿಧಾನದ ಮೂಲ ಆಸರೆಯಾದ ರೈತರ ಬೆನ್ನೆಲುಬು ದೇಶದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಆರೋಗ್ಯ ಕೃಷಿ ಮುಂತಾದವಳಿಗೆ ಆಧಾರಸ್ತಂಭ ಗೋ ವಂಶವಾಗಿದ್ದು ಅದರ ರಕ್ಷಣೆ ಪೋಷಣೆ ಸರ್ಕಾರದ ಆದ್ಯ ಕರ್ತವ್ಯ ಎಂದು ಅರಿತು ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದು ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಪಡೆಯಲು ನಿರ್ಧರಿಸಿದೆ.
ಅಮಿಷ, ಒತ್ತಾಯದ ಮೋಸದ ಮತಾಂತರ ನಿಷೇಧ ಮಸೂದೆ ವಾಪಸ್.
ಇದು ಸಹ ಹಿಂದಿನ ಬಿಜೆಪಿ ರಾಜ್ಯ ಸರ್ಕಾರದಿಂದ ಜಾರಿಗೆ ತಂದಿತ್ತು ಮತಾಂತರ ಮಹಾ ಪಿಡುಗು ದೇಶದ ಸಂಸ್ಕೃತಿಕ ಭೌಗೋಳಿಕ ಜನಸಂಖ್ಯೆ ಮುಂತಾದ ಅಸಮತೋಲನ ಜೊತೆಗೆ ಸಂಘರ್ಷಕ್ಕೆ ಕಾರಣಿಭೂತ ಆಗಿದ್ದು ಅದಕ್ಕೆ ನಾಡಿನ ಎಲ್ಲಾ ಸಮಾಜ ಸಮುದಾಯಗಳ ಸಂವಿಧಾನದ ಆಶಯದಂತೆ ಜಾರಿಗೆ ತಂದ ಮಸೂದೆಯನ್ನು ಪ್ರಸ್ತುತ ರಾಜ್ಯ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆಯಲು ಯತ್ನಿಸುತ್ತಿದೆ.
ಪಠ್ಯ ಪುಸ್ತಕಗಳಲ್ಲಿ ದೇಶಭಕ್ತರ, ಸ್ವತಂತ್ರ ಹೋರಾಟಗಾರರ, ಸಮಾಜ ಸುಧಾರಕರ ಪಠ್ಯ ಕೈ ಬಿಡುವ ನಿರ್ಧಾರ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರಿಗೆ ಮಾಡಿದ ಘೋರ ಅವಮಾನ.
ರಾಜ್ಯ ಸರ್ಕಾರದ ಈ ಮೂರು ಪ್ರಸ್ತಾವನೆಗೆ ನಮ್ಮ ಪ್ರಬಲ ವಿರೋಧವಿದೆ ತಾವು ತಕ್ಷಣ ಮಧ್ಯಪ್ರವೇಶಿಸಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಬೇಕೆಂದು ತಮ್ಮಲ್ಲಿ ವಿನಂತಿ.
ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ಜಾನೇಕೆರೆ ಹೇಮಂತ್, ತಾಲೂಕು ಶ್ರೀ ರಾಮ ಸೇನೆ ಅಧ್ಯಕ್ಷ ಭರತ್ ದೆಖಲ, ಜಿಲ್ಲಾ ಕಾರ್ಯದರ್ಶಿ ಲೋಕೇಶ್, ನಗರ ಘಟಕದ ಅಧ್ಯಕ್ಷ ಬಸವರಾಜ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು
