ಸಕಲೇಶಪುರ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಕಲೇಶಪುರ ಪ್ರಖಂಡದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮದ ನಿಮಿತ್ತ ಸಕಲೇಶಪುರದ ಆದಿದೇವತೆ ಶ್ರೀ ಗುಹೆ ಕಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಶಸ್ತ್ರಾಸ್ತ್ರ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಮಂದಿರ ಅರ್ಚಕ ಪ್ರಮುಖರಾದ ಶ್ರೀ ಪ್ರದೀಪ್ ಶರ್ಮ ಅವರು ಶಸ್ತ್ರಾಸ್ತ್ರ ಪೂಜೆಯ ಮಹತ್ವವನ್ನು ತಿಳಿಸಿದರು. ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹ ಕಾರ್ಯದರ್ಶಿ ಹರೀಶ್ ಕರಡಿಗಾಲ, ಜಿಲ್ಲಾ ಉಪಾಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾ ಸಹ ಸಂಯೋಜಕ ವಿಷ್ಣು, ಜಿಲ್ಲಾ ಸುರಕ್ಷಾ ಪ್ರಮುಖ ರಘು ಪ್ರಸಾದ್, ತಾಲೂಕು ಸಂಯೋಜಕ ಸುಜನ್, ಕಾರ್ಯದರ್ಶಿಗಳಾದ ಲೋಹಿತ್, ಹೆತ್ತೂರು ಪ್ರಖಂಡ ಕಾರ್ಯದರ್ಶಿ ಸುರೇಶ್, ಸಹ ಸಂಯೋಜಕರಾದ ಶರತ್ ಗೌಡ ಮತ್ತು ಅಭಿ, ಗೋರಕ್ಷಾ ಪ್ರಮುಖ ಕಿರಣ್, ಸುರಕ್ಷಾ ಪ್ರಮುಖ ಅಖಿಲೇಶ್, ಹಿಂದೂ ಮುಖಂಡರಾದ ಮಹೇಂದ್ರ ಕುಮಾರ್ ಮತ್ತು ಲೋಹಿತ್ ಜಂಬರಡ್ಡಿ, ವಕೀಲ ಷಣ್ಮುಖ, ಸಂಘದ ಪ್ರಮುಖರು ಹಾಗೂ ದೇವಸ್ಥಾನ ಟ್ರಸ್ಟ್‌ನ ಮುಕೇಶ್ ಮತ್ತು ಸುರೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ ಭಕ್ತರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *