ಸಕಲೇಶಪುರ: ನಾಡ ಪ್ರಭು ಕೆಂಪೇಗೌಡರ 514 ನೇ ಜಯಂತಿಯನ್ನು ಇಂದು ಪ್ಟಣದ ಹೊಸ ಬಸ್ ನಿಲ್ದಾಣದ ಮುಂಭಾಗದ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಿರುವ ಜಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯ ಹಾಗೂ ಇತರ ಸಮುದಾಯದ ಮುಖಂಡರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಿದರು

ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಅಡಚಣೆಯನ್ನು ಉಂಟುಮಾಡಿರುವ ಸಕಲೇಶಪುರ ಆಡಳಿತ ವ್ಯವಸ್ಥೆಯು ಹಮ್ಮಿ ಕೊಂಡಿರುವ ಕಾರ್ಯಕ್ರಮವನ್ನು ದಿಕ್ಕರಿಸಿ ಹಾಸನದಲ್ಲಿ ನಡೆಯುವ ಶ್ರೀ ಶ್ರೀ ಶ್ರೀ ನಿರ್ಮಲಾನಂದಾಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಕ್ಕೆ ನೂರಾರು ಸಂಖ್ಯೆಯಲ್ಲಿ ವಾಹನಗಳಲ್ಲಿ ತೆರಳಿದರು

ಈ ಸಂದರ್ಭದಲ್ಲಿ ಒಕ್ಕಲಿರ ಸಂಘದ ಅಧ್ಯಕ್ಷ ಹೆಚ್.ಎಂ.ವಿಶ್ವನಾಥ್, ಕಾರ್ಯದರ್ಶಿ ಉಮೇಶ್ ಮರಗತ್ತೂರು, ಅಣ್ಣೇಗೌಡ, ಉಪಾದ್ಯಕ್ಷ ದೇವರಾಜು, ನರ್ದೇಕರುಗಳು, ಕೆಜಿಎಫ್ ಅದ್ಯಕ್ಷ ಮೋಹನ್ ಕುಮಾರ್, ಕಸಬಾ ಬೆಳೆಗಾರರ ಸಂಘದ ಅದ್ಯಕ್ಷ ಕೌಡಳ್ಳಿ ಲೋಹಿತ್, ಮಾಜಿ ಜಿ.ಪಂ ಸದಸ್ಯರಾದ ಕೆ.ಎಸ್.ಕುಮಾರಸ್ವಾಮಿ, ಉಜ್ಮರಿಜ್ವಿ ಸುದರ್ಶನ್, ಹೆಚ್.ಡಿ.ಪಿ.ಎ ಜಿಲ್ಲಾ ಅದ್ಯಕ್ಷ ಸುಬ್ರಹ್ಮಣ್ಯ, ರೋಟರಿ ಕಾರ್ಯದರ್ಶಿ ಜಾನೆಕೆರೆ ಆರ್ ಪರಮೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ಜೈಬೀಮ್ ಮಂಜು, ಕಾರ್ಯ ದರ್ಶಿ ದಯಾನಂದ್, ಕಾಮನಹಳ್ಳಿ ಜಯಣ್ಣ, ಕೆಂಪೇಗೌಡ ವೇದಿಕೆ ಯುವ ಅದ್ಯಕ್ಷ ವಿಶಾಲ್ ಗೌಡ, ಬದ್ರಿಯ ಮಸೀದಿಯ ಕಾರ್ಯದರ್ಶಿ ಅಕ್ಬರ್ ಜುನೈದ್, ಸೇರಿದಂತೆ ಅನೇಕ ಎಲ್ಲಾ ಸಮುದಾಯದ ಮುಖಂಡರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *