ಗೋ ವನ್ನು ಸಕಲೇಶಪುರದ ಗ್ರಾಮಾಂತರ ಪೊಲೀಸ್ ಠಾಣೆಯ ಮುಂಭಾಗ ಇಟ್ಟು ಪ್ರತಿಭಟನೆ ಮಾಡುತ್ತೇವೆ ಎಂದ ತಕ್ಷಣ ASP ಮಿಥುನ್ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತರ ಮನವೊಲಿಸಿದ್ದಾರೆ

ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಸುತ್ತ ಮುತ್ತ ಹೆಗ್ಗಿಲ್ಲದೆ ನೆಡೆಯುತ್ತಿರುವ ಗೋ ಹತ್ಯೆ ಪ್ರಕರಣ ಗಳು ಈ ಕೆಲವು ದಿನಗಳ ಹಿಂದೆ ಮಾವಿನಹಳ್ಳಿ ಯಲ್ಲಿ ಗಬ್ಬದ ಹಸುವನ್ನು ಕತ್ತು ಕುಯ್ದು ಗ್ರಾಮಸ್ಥರು ಬಂದ ತಕ್ಷಣ ಹೇಮಾವತಿ ನದಿಗೆ ತಳಿ ಓಡಿ ಹೋಗಿದ್ದರು .ಇದಾದ ಕೆಲವೇ ದಿನಗಳಲ್ಲಿ ಈ ದಾರುಣ ಘಟನೆ ಕ್ಯಾಮನಹಳ್ಳಿಯ ಎಂ ಬಿ ಸಿ ಎಸ್ಟೇಟ್ ನಲ್ಲಿ ನಿನೇ ಸಂಜೆ 4 ಗಂಟೆಗೆ ನೆಡೆದಿದೆ.

ಕ್ಯಾಮನಹಳ್ಳಿಯಲ್ಲಿ ದನಕ್ಕೆ ಗುಂಡಿಟ್ಟ ವಿಚಾರ ಭಜರಂಗದಳದ ಕಾರ್ಯಕರ್ತರ ಗಮನಕ್ಕೆ ಬಂದ ತಕ್ಷಣ ಎ ಎಸ್ ಪಿ ಮಿಥುನ್ ರವರಿಗೆ ವಿಷಯ ತಿಳಿಸಿದ್ದಾರೆ.ಸ್ಥಳಕ್ಕೆ ಎ ಎಸ್ ಪಿ ಮಿಥುನ್ ಧಾವಿಸಿ ಗಬ್ಬದ ಹಸುವಿಗೆ ಗುಂಡು ಹೊಡೆದವರ ಬಗ್ಗೆ ತನಿಖೆ ನೆಡಸಿದ್ದಾರೆ.ಈ ವಿಚಾರವು ಬಜರಂಗದಳದವರಿಗೆ ಗೊತ್ತಾದ ತಕ್ಷಣ ಆಕ್ರೋಶ ವ್ಯಕ್ತ ಪಡಿಸಿ ಗುಂಡಿಟ್ಟ ಗೋವನ್ನು ಗ್ರಾಮಾಂತರ ಠಾಣೆಯಲ್ಲಿ ಇಟ್ಟು ಪ್ರತಿಭಟನೆಗೆ ಮುಂದಾದಾಗ ಎ ಎಸ್ ಪಿ ಮಿಥುನ್ ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಅಬ್ದುಲ್ ಖದರ್ ಮತ್ತು ಮಹಮದ್ದ್ ಎಂಬುವರನ್ನ ಬಂಧಿಸಿದ್ದಾರೆ ತೀವ್ರ ವಿಚಾರಣೆ ಮಾಡುತಿದ್ದರೆ. ಗುಂದು ಹೊಡೆದ ವ್ಯಕ್ತಿಗಳು ದೇಖಲ ಗ್ರಾಮದವರೆಂದು ತಿಳಿದಿದ್ದು ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸ್ ಕಾರ್ಯಚರಣೆ ನಡಿಯುತಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *