ಸಕಲೇಶಪುರ:- ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿ ಹಾಗೂ ಯಸಳೂರು ಹೋಬಳಿಯ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಸಕಲೇಶಪುರ ಘಟಕ ಮತ್ತು ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ವತಯಿಂದ ಸಮಾಜ ಸೇವಕರು ಹಾಗೂ ದಾನಿಗಳು ಆದ ಕಾಮನಹಳ್ಳಿ ತೀರ್ಥಾನಂದ (ಕೀರ್ತಿ) ಅವರ ಸಹಕಾರದೊಂದಿಗೆ ಹೆತ್ತೂರು ಹಾಗೂ ಯಸಳೂರು ಗ್ರಾಮ ಪಂಚಾಯಿತಿಯ ಸರ್ಕಾರಿ ಪ್ರಾಥಮಿಕ ಹಿರಿಯ ಪಾಠ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ಕೊಡುವ ಮೂಲಕ ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡುವ ಕೆಲಸ ಮಾಡಲಾಯಿತು.

ಎರಡು ಹೋಬಳಿ ವ್ಯಾಪ್ತಿಯ ಸುಮಾರು 25 ಶಾಲೆಯಲ್ಲಿ ಕಲಿಯುತ್ತಿರುವ ಗ್ರಾಮೀಣ ಪ್ರದೇಶದ 775ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 2000 ಪುಸ್ತಕಗಳನ್ನು ಇಂದು ಶಾಲೆಯ ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಎರಡು ನೋಟ್ ಪುಸ್ತಕ ಹಾಗೂ ಒಂದು ಪೆನ್ನುಗಳನ್ನು ಹಾಗೂ ಐದರಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ನೋಟು ಪುಸ್ತಕಗಳು ಹಾಗೂ ಒಂದು ಪೆನ್ನು ವಿತರಿಸಲಾಯಿತು.

ಇಂತಹ ಒಳ್ಳೆ ಕೆಲಸಕ್ಕೆ ಮುಂದಾದ ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಹಾಗೂ ಸಮಾಜ ಸೇವಕರು ಹಾಗೂ ದಾನಿಗಳದ ತಿರ್ಥನಂದ (ಕೀರ್ತಿ )ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕದ ಮೂಲಕ ಉಚಿತ ನೋಟ್ ಬುಕ್ ಹಾಗೂ ಪೆನ್ನುಗಳನ್ನು ವಿತರಿಸಿ , ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮಾಡುವುದರೊಂದಿಗೆ. “ನಾನು ಕೂಡ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕಲಿತಿದ್ದು, ಸರ್ಕಾರಿ ಶಾಲೆಯ ಬಗ್ಗೆ ತುಂಬಾ ಗೌರವ . ಸರ್ಕಾರಿ ಶಾಲೆಗಳು ಯಾವ ಖಾಸಗಿ ಶಾಲೆಗೂ ಕಮ್ಮಿಇಲ್ಲ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ಸಹಾಯ ಬೇಕಿದ್ದರೂ ನಮ್ಮ ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಸಂಪರ್ಕಿಸಿ.ನಿಮ್ಮೊಂದಿಗೆ ಸದಾ ಟ್ರಸ್ಟ್ ಇರುತ್ತದೆ. ಈ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರೆಲ್ಲ ಮಲೆನಾಡಿನ ಭಾಗದವರಾಗಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ಸರ್ಕಾರಿ ಶಾಲೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಹಣಕಾಸಿನ ಸಹಾಯವನ್ನು ಮಾಡಲಿದೆ.ಹಾಗೂ ಮಾದರಿ ಶಾಲೆಯನ್ನಾಗಿ ರೂಪಿಸುವ ಕೆಲಸ ಮಾಡಲಾಗುವುದು.” ಎಂದು ಹೇಳುವುದರೊಂದಿಗೆ ಪ್ರೋತ್ಸಾಹದ ಮಾತನಾಡಿದ್ದಾರೆ.

ನಿವೃತ್ತ ಶಿಕ್ಷಕರಾದ ಕೆ ಎನ್ ರಾಜು ಕರಡಿಗಾಲ ಈ ಸಂದರ್ಭದಲ್ಲಿ ಮಾತನಾಡಿ ” ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕ ಹಾಗೂ ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಡುತ್ತಿರುವ ಕೆಲಸ ನಿಜಕ್ಕೂ ಒಳ್ಳೆಯ ಕೆಲಸವಾಗಿದ್ದು. ಇಂತಹ ಸಮಾಜಸೇವಕರಿಂದ ಸರ್ಕಾರಿ ಶಾಲೆ ಹಾಗೂ ಅದರಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕಾಗಿದೆ.”ಎಂದು ಹೇಳಿದರು.

ವಳಲಹಳ್ಳಿ SDMC ಮಾಜಿ ಅಧ್ಯಕ್ಷರಾದ ನಾಗೇಶ್ ಕೆರೆಮನೆ ಮಾತನಾಡಿ”ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕದ ಮೂಲಕ ಈ ತರಹದ ಒಳ್ಳೆ ಕೆಲಸಕ್ಕೆ ಮುಂದಾಗಿದ್ದು, ಇಂಥ ಒಳ್ಳೆ ಕೆಲಸಕ್ಕೆ ನಮ್ಮ ಸಂಸ್ಥೆಯ ಜೊತೆ ಕೈಜೋಡಿಸಿದ ಜ್ಞಾನ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಕೀರ್ತಿ ಅವರ ಸೇವೆ ಇನ್ನೂ ಹೆಚ್ಚಿನ ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು ಮಕ್ಕಳಿಗೆ ಸಿಗುವಂತಾಗಲಿ. ಹಾಗೂ ಸರ್ಕಾರಿ ಶಾಲೆಯಲ್ಲಿ ಓದಿ ಒಳ್ಳೆ ಅಂಕಗಳನ್ನು ಪಡೆಯುವ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ ರೂಪಗೊಂಡು ಸರ್ಕಾರಿ ಶಾಲೆಗೆ ,ತಂದೆ ತಾಯಿ ಹಾಗೂ ಗುರುಗಳಿಗೆ ಒಳ್ಳೆ ಹೆಸರು ತರುವಂತಾಗಲಿ. ” “ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು .

ದಾನಿಗಳೊಂದಿಗೆ ಸೇರಿ ತಾಲೂಕಿನದ್ಯಂತ ಸುಮಾರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನಗಳನ್ನು ಹಂಚುವ ಕೆಲಸ ಮಾಡಲು ಮುಂದಾಗಿರುವ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ) ಸಕಲೇಶಪುರ ಘಟಕದ ಅಧ್ಯಕ್ಷರಾದ ಕರಡಿಗಾಲ ಅರುಣ್ ಗೌಡ ಹಾಗೂ ಪದಾಧಿಕಾರಿಗಳು ಹಾಗೂ ದಾನಿಗಳಾದ ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ತೀರ್ಥಾನಂದ(ಕೀರ್ತಿ) ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿ ಶಾಲೆಯಲ್ಲೂ ಶಿಕ್ಷಕರು ಹಾಗೂ SDMC ಆಡಳಿತ ಮಂಡಳಿಯಿಂದ ಹಾಗೂ ಪೋಷಕರಿಂದ, ಹಾಗೂ ತಾಲೂಕು ಶಿಕ್ಷಣ ಇಲಾಖೆಯವರಿಂದ ಮತ್ತು ಮಕ್ಕಳಿಂದ ಈ ಸೇವೆಗೆ ವ್ಯಾಪಕ ಪ್ರಸಂಶೆ ವ್ಯಕ್ತವಾಗಿದೆ.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕದ ಅಧ್ಯಕ್ಷರು ಕರಡಿಗಾಲ ಅರುಣ್ ಗೌಡ, ಸಮಾಜ ಸೇವಕರು ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಕೀರ್ತಿ , ನಿವೃತ್ತ ಶಿಕ್ಷಕರಾದ ಕೆ ಎನ್ ರಾಜು ಕರಡಿಗಾಲ, ವಳಲಹಳ್ಳಿ SDMC ಮಾಜಿ ಅಧ್ಯಕ್ಷರು ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಾರ್ಯದರ್ಶಿಗಳು ನಾಗೇಶ್ ಕೆರೆಮನೆ, ಯಾಸಳೂರು ಅರಣ್ಯ ಇಲಾಖೆ ಅಧಿಕಾರಿ ಮಂಜುನಾಥ್, ಜಯರಾಜ್ ಚಂಗಡಹಳ್ಳಿ,ಸಂತೋಷ್ ಕಾಮನ ಹಳ್ಳಿ ಇದ್ದಾರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *