ಸಕಲೇಶಪುರ : ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ರೋಟರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಯಾಗಿ ಅರುಣ್ ರಕ್ಷಿದಿ ಅವರು ಆಯ್ಕೆಯಾಗಿದ್ದಾರೆ.

ಆರು ಜನರ ಗೌರ್ನಿಂಗ್ ಕೌನ್ಸಿಲ್ ನ ಪೈಕಿ ಒಬ್ಬರಾದ ಅರುಣ್ ರಕ್ಷಿದಿ ಅವರು ನೆನ್ನೆ ನಡೆದ ರೋಟರಿ ಸಂಸ್ತೆಯ ಸಭೆಯಲ್ಲಿ ಆಯ್ಕೆಯಾದರು.

ಇವರ ಆಯ್ಕೆಗೆ ಸಹಕರಿಸಿದ ರೋಟರಿಯ ಎಲ್ಲಾ ಸದಸ್ಯರಿಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

ಈ ಹಿಂದೆ ಈ ಸ್ಥಾನದಲ್ಲಿ ರೊ.ಸುರೇಶ್ ಅವರು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.ಅರುಣ್ ರಕ್ಷಿದಿ ಅವರಿಗೆ ತಾಲೂಕಿನ ವಿವಿದ ಸಂಘ- ಸಂಸ್ಥೆಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *