ಸಕಲೇಶಪುರ : ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಸಯ್ಯದ್ ಮುಫಿಸ್ ರವರ ತಾಯಿ ಮಕ್ಕ ಆಪ (80) ನಿಧನ ಹೊಂದಿದ್ದಾರೆ.

ಅನಾರೋಗ್ಯದಿಂದ ಪೀಡಿತರಾಗಿದ್ದ ಇವರು ಸ್ವ ನಿವಾಸದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಮೃತಪಟ್ಟರು.ಇವರ ಅಂತಿಮ ಕ್ರಿಯೆ ಪಟ್ಟಣದ ಖಬರಸ್ಥಾನ್ ನಲ್ಲಿ ಸಂಜೆ 6:30 ಕ್ಕೆ ನಡೆಯಲಿದೆ.

ಮೃತರ ಆತ್ಮಕ್ಕೆ ಶಾಂತಿ ಕೋರಿ ಕಾಂಗ್ರೆಸ್ ಮುಖಂಡರಾದ ಬೈರ್‌ಮುಡಿ ಚಂದ್ರು, ಮುರಳಿ ಮೋಹನ್, ಯಡೆಹಳ್ಳಿ ಮಂಜುನಾಥ್, ಅನ್ನಪೂರ್ಣ, ಪುರಸಭೆ ಅಧ್ಯಕ್ಷ ಕಾಡಪ್ಪ, ಮಾಜಿ ಶಾಸಕ ಎಚ್ ಎಂ ವಿಶ್ವನಾಥ್, ಬಿ ಆರ್ ಗುರುದೇವ್, ಜೆಡಿಎಸ್ ಮುಖಂಡ ಇಬ್ರಾಹಿಂ ಯಾದ್‌ಗಾರ್, ಹಸೈನಾರ್ ಆನೆಮಹಾಲ್, ಸೇರಿದಂತೆ ಅನೇಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *