ಸಕಲೇಶಪುರ: ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಲಭ್ಯವಾಗಬೇಕೆಂಬ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಸುಮಾರು 1೦ ಲಕ್ಷ ರೂ ವೆಚ್ಚದಲ್ಲಿ 10 ಐ.ಸಿ.ಯು ಬೆಡ್ಡುಗಳ ಕೊಠಡಿಯನ್ನು ಸಿದ್ದತೆ ಮಾಡಲಾಗಿದ್ದು ಇದರಿಂದ ತಾಲ್ಲೂಕಿನ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಲಯನ್ಸ್ ಜಿಲ್ಲೆ 317 ಡಿಸ್ಟ್ರಿಕ್ಟ್ ರಾಜ್ಯಪಾಲ ಸಂಜೀತ್ ಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಬಬಿತಾ ವಿಶ್ವನಾಥ್ ಮಾಜಿ ಅಧ್ಯಕ್ಷ ಜಯಶಂಕರ್, ಕಾರ್ಯದರ್ಶಿ ವಿಶ್ಬನಾಥ್, ವಲಯಾಧ್ಯಕ್ಷ ಪ್ರಸನ್ನ ಕುಮಾರ್,ಡಾ.ನವೀನ್ ಚಂದ್ರ ಶೆಟ್ಟಿ, ಐಎಂಎ ಮಾಜಿ ಅಧ್ಯಕ್ಷ ಡಾ. ಸುಧಾಕರ್,ರೋಟರಿ ಅಧ್ಯಕ್ಷ ಸದಾಶಿವ,ನಿಕಟ ಪೂರ್ವ ಅಧ್ಯಕ್ಷ ಶಶಿಕುಮಾರ್,ಕ್ರಾಫರ್ಡ್ ಆಸ್ಪತ್ರೆಯ ವೈದ್ಯರುಗಳಾದ ಡಾ.ರತ್ನಾಕರ ಕಿಣಿ, ಡಾ.ಮಧುಸೂದನ್ ಲಯನ್ ಸದಸ್ಯರುಗಳು ಆಸ್ಪತ್ರಿ ಸಿಬ್ಬಂದಿಗಳು ಮುಂತಾದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *