
ಸಕಲೇಶಪುರ:- ಸಕಲೇಶಪುರ ತಾಲೂಕಿನ ಕುರಬತ್ತೂರು ಗ್ರಾಮಪಂಚಾಯಿತಿಯ ಶುಕ್ರವಾರಸಂತೆ ಶಾಲೆಯ 90 ವಿದ್ಯಾರ್ಥಿಗಳಿಗೆ ಸುಮಾರು 250ಕ್ಕೂ ಹೆಚ್ಚು ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ) ಸಕಲೇಶಪುರ ಘಟಕ ಮತ್ತು “ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ” ವತಿಯಿಂದ ಸಮಾಜ ಸೇವಕರು ಹಾಗೂ ದಾನಿಗಳು ಆದ ಕಾಮನಹಳ್ಳಿ ತೀರ್ಥಾನಂದ (ಕೀರ್ತಿ) ಅವರ ಸಹಕಾರದೊಂದಿಗೆ ಸಕಲೇಶಪುರದ ಹೆತ್ತೂರು ಹಾಗೂ ಯಸಳೂರು ಹೋಬಳಿಯ ಎಲ್ಲಾ ಸರ್ಕಾರಿ ಪ್ರಾಥಮಿಕ ಹಿರಿಯ ಪಾಠ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ಕೊಡುವ ಮೂಲಕ ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಹ ನೀಡುವ ಕೆಲಸ ಮಾಡಲಾಯಿತು.
ದಾನಿಗಳೊಂದಿಗೆ ಸೇರಿ ತಾಲೂಕಿನಾದ್ಯಂತ ಸುಮಾರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ಹಂಚುವ ಕೆಲಸ ಮಾಡಲು ಮುಂದಾಗಿರುವ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ) ಸಕಲೇಶಪುರ ಘಟಕದ ಅಧ್ಯಕ್ಷರಾದ ಕರಡಿಗಾಲ ಅರುಣ್ ಗೌಡ ಹಾಗೂ ಪದಾಧಿಕಾರಿಗಳು ಹಾಗೂ ದಾನಿಗಳಾದ ಜ್ಞಾನ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ತೀರ್ಥಾನಂದ(ಕೀರ್ತಿ) ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಇಂತಹ ಒಳ್ಳೆ ಕೆಲಸಕ್ಕೆ ಮುಂದಾಗಿದ್ದು , ಈ ಕೆಲಸಕ್ಕೆ ಮಾರ್ಗದರ್ಶಕರಾಗಿ ಬೆನ್ನೆಲುಬಾಗಿ ನಿಂತು ಶಿಸ್ತು ಸಮಯ ಪಾಲನೆ, ಸಮಯ ಪ್ರಜ್ಞೆ, ಮತ್ತು ಶಾಲಾ ಆವರಣದ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿರುವ ನಿವೃತ್ತ ಶಿಕ್ಷಕರಾದ ಕೆ.ಏನ್ ರಾಜು ಕರಡಿಗಾಲ ಅವರ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರತಿ ಶಾಲೆಯಲ್ಲೂ ಶಿಕ್ಷಕರು ಹಾಗೂ SDMC ಆಡಳಿತ ಮಂಡಳಿಯಿಂದ ಹಾಗೂ ಪೋಷಕರಿಂದ, ಹಾಗೂ ತಾಲೂಕು ಶಿಕ್ಷಣ ಇಲಾಖೆಯವರಿಂದ ಮತ್ತು ಮಕ್ಕಳಿಂದ ಈ ಸೇವೆಗೆ ವ್ಯಾಪಕ ಪ್ರಸಂಶೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ವಳಲಹಳ್ಳಿ SDMC ಮಾಜಿ ಅಧ್ಯಕ್ಷರಾದ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕದ ಕಾರ್ಯದರ್ಶಿಗಳಾದ ನಾಗೇಶ್ ಕೆರೆಮನೆ, ಕುರಬತ್ತೂರು ಗ್ರಾಮ ಪಂಚಾಯಿತಿ ಸದಸ್ಯರಾದ ಅರ್ಜುನ್ , ತಾಲೂಕು ಬಿಜೆಪಿ ಯುವ ಮೂರ್ಚ ಅಧ್ಯಕ್ಷರಾದ ಜೀತು ಶುಕ್ರವಾರ ಸಂತೆ, ಹಾಸನ ಜಿಲ್ಲಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸಂಪರ್ಕ ಪ್ರಮುಖ್ ಕರಡಿಗಾಲ ಹರೀಶ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಕಲೇಶಪುರ ಘಟಕ ಮಹಿಳಾ ಸಂಘಟನಾ ಕಾರ್ಯದರ್ಶಿ ಹಾಗೂ ಶಾಲಾ ಶಿಕ್ಷಕಿ ನಾಗಲಾಂಬಿಕ, ಶಿರಡಿ ಘಾಟ್ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧಯಕ್ಷರಾಗಿರುವ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾದ ಪ್ರಜ್ವಲ್ ಚಿನ್ನಹಳ್ಳಿ,ಸಮಾಜ ಸೇವಕರಾದ ಸಂತೋಷ್, ಇದ್ದರು.
