ಸಕಲೇಶಪುರ : ಇತ್ತೀಚ್ಚಿಗೆ ಪಟ್ಟಣದ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಮಾಜಿ ರಾಜ್ಯಪಾಲ ಶಿರೀಶ್ ಗುಜ್ಜಾರ್ ಅವರು ಅಧ್ಯಕ್ಷರು ಹಾಗೂ ೧೩ ಜನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೊಧಿಸಿದರು.

ನಿಕಟ ಪೂರ್ವ ಅಧ್ಯಕ್ಷ ಲಯನ್ ಜಯಶಂಕರ್ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷೆ ಲಯನ್‌ ಬಬಿತಾ ವಿಶ್ವನಾಥ್ ತಾಲೂಕಿನ ಅಗತ್ಯವಿರುವ ಎಲ್ಲ ಕ್ಷೇತ್ರದ ಸಾಮಾನ್ಯ, ಬಡ ಜನರ ನೆರವಿಗೆ ಸಂಸ್ಧೆ ಬದ್ದವಾಗಿದ್ದು ಅರ್ಹ ಫಲಾನುಭಾವಿಗಳ ನೆರವಿಗೆ ತಾನು ಮತ್ತು ತನ್ನ ತಂಡ ಸದಾ ಸಿದ್ದ ಎಂದರು.

ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶಾಸಕ ಸಿಮೆಂಟ್ ಮಂಜುನಾಥ್ ಲಯನ್ಸ್ ಸಂಸ್ಧೆ ನಿಕಟ ಪೂರ್ವ ರಾಜ್ಯಪಾಲ ಸಂಜೀತ್ ಶೆಟ್ಟಿ ನೇತೃತ್ವದಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ಸಾರ್ವಜನಿಕ. ಮುಕ್ತಿಧಾಮ ನವೀಕರಿಸಿದ್ದು, ಕ್ರಾಫರ್ಡ್ ಆಸ್ಪತ್ರೆಗೆ 10 ಐಸಿಯು ಬೆಡ್ಡುಗಳ ಕೊಡುಗೆ ನೀಡಿದ್ದ ಪಟ್ಟಣದಲ್ಲಿ ಮೂರು ಡಯಾಲಿಸಿಸ್ ಯಂತ್ರಗಳು ಸ್ಧಾಪಿಸಿದ್ದೂ ಸೇರಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದರು. ಕಾರ್ಯದರ್ಶಿ ಗಳಾಗಿ ಮೀನಾಕ್ಷಿ ಖಾದರ್,ಖಜಾಂಜಿಯಾಗಿ ಬಸವರಾಜ್ ಪ್ರಮಾಣ ವಚನ ಸ್ವೀಕರಿಸಿದರು.

ಟಿ.ಜಿ ರಾಜ್ಯಪಾಲ ಪಿಡಿಜಿ ಲಯನ್ ವೆಂಕಟೇಶ್ ಅವರು ನೂತನ ಲಿಯೋ ಕ್ಲಬ್ ಅನ್ನು ಸ್ಧಾಪನೆ ಮಾಡಿ ಅಧ್ಯಕ್ಷೆ ಆಶ್ರಿತಾ ಕೆ.ಪೂಜರಿ,ಕಾರ್ಯದರ್ಶಿ ಅಯುಷಾ ಖಾದರ್,ಹಾಗೂ ಖಜಾಂಜಿ ಚರಿತಾ ಗಿರೀಶ್ ಇವರಿಗೆ ಪ್ರಮಾಣ ವಚನ ಬೋಧಿಸಿದರು.

ಸಮಾರಂಭದಲ್ಲಿ ನಿಕಟ ಪೂರ್ವ ಗವರ್ನರ್. ಸಂಜೀತ್ ಶೆಟ್ಟಿ,ರೀಜನ್ ಚೇರ್ಮಾನ್ ಜಗದೀಶ್, ಝೋಣ್ ಚೇರ್ಮಾನ್ ಪ್ರಸನ್ನಕುಮಾರ್ ಸಿಪಿ ನಿಕಟ ಪೂರ್ವ ಅಧ್ಯಕ್ಷ ಜಯಶಂಕರ್ ಕಾರ್ಯದರ್ಶಿ ವಿಶ್ವನಾಥ್, ಖಜಾನ್ಜಿ ದುರ್ಗೇಶ್ ,ಉಪಾಧ್ಯಕ್ಷ ಗಿರೀಶ್ ಕುಮಾರ್ ಇದ್ದರು.

HBಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಈ ವರ್ಷದ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಸಯನ್ಸ್, ಆರ್ಟ್ಸ್ ಮತ್ತು ಕಮಾರ್ಸ್ ವಿಭಾಗಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂರು ಜನ ವಿದಗಯಾರ್ಧಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತ್ತು ಹಾಗೇನೆ ಸೋಣಿಗಾಲ್ ಪ್ರಾಧಮಿಕ ಶಾಲಾ ಮಕ್ಕಳಿಗೆ ನೋಟು ಪುಸ್ತಕಗಳು ವಿತರಿಸಲಾಯಿತ್ತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *