
ಚನ್ನರಾಯಪಟ್ಟಣ: ಪೂರ್ವ ಮುಂಗಾರಿನಲ್ಲಿ ವರುಣ ಕೈಕೊಟ್ಟು ಆಷಾಢ ಮುಗಿದ ಮೇಲೆ ಸೋನೆ ಮಳೆ ಸುರಿಯುತ್ತಿದೆ. ವಾತಾವರಣದಲ್ಲಿ ಆಗಿರುವ ಏರುಪೇರಿನಿಂದ ಗಣೇಶೋತ್ಸವ ಆಚರಣೆಗೂ ವಿಘ್ನ ಉಂಟಾಗುವ ಲಕ್ಷಣಗಳು ಗೋಚರವಾಗುತ್ತಿವೆ.
ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಂಗಳೂರು ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಭಾರಿ ಪ್ರವಾಹ ಉಂಟಾಗಿರುವುದರಿಂದ ಗಣೇಶೋತ್ಸವ ಆಚರಣೆಯನ್ನು ಅದ್ಧೂರಿಯಾಗಿ ಮಾಡುವ ಬದಲಾಗಿ ಸರಳವಾಗಿ ಆಚರಣೆ ಮಾಡಲು ಈಗಾಗಲೆ ತಾಲೂಕಿನ ಹಲವು ಸಂಘ ಸಂಸ್ಥೆಗಳು ಲೆಕ್ಕಾಚಾರ ಮಾಡುತ್ತಿವೆ.
ಇನ್ನು ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡುವ ಬಗ್ಗೆಯೂ ಕೆಲ ದಾನಿಗಳು ಆಲೋಚನೆ ಮಾಡಿದ್ದು ಅದ್ಧೂರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಬೇಡ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.

