
ಸಕಲೇಶಪುರ ಬಜರಂಗದಳ ಕಾರ್ಯಕರ್ತರ ಖಚಿತ ಮಾಹಿತಿ ಪಡೆದ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ
ಬೆಳ್ಳಂಬೆಳಗ್ಗೆ 2 ಅಕ್ರಮ ಗೋವುಗಳನ್ನ ಸಾಗಿಸುತ್ತಿದ್ದ ವಾಹನ ಜಪ್ತಿ.
ಎರಡು ವಾಹನದಲ್ಲಿ 18 ಕ್ಕೂ ಹೆಚ್ಚು ಅಕ್ರಮವಾಗಿ ಮತ್ತು ಬಲವಂತವಾಗಿ ತುಂಬಿ ಕೊಡ್ಲಿಪೇಟೆ ಕಡೆಗೆ ಸಾಗಾಣಿಕೆ ಮಾಡುತ್ತಿದ್ದ ವಾಹನ ನಾಗರೀಕ ಸಮಾಜವೇ ಬೆಚ್ಚಿ ಬೀಳುವ ರೀತಿ ಗೋಹತ್ಯೆ ನಿಷೇಧ ಕಾನೂನು ಇದ್ದರು ಸಹ ಅಕ್ರಮವಾಗಿ ಗೋವುಗಳ ಸಾಗಾಣಿಕೆ ಆತಂಕ ತಂದಿದೆ.
ಬೆಳಗ್ಗಿನ ಜಾವಾ 3 ಗಂಟೆ ಸಮಯದಲ್ಲಿ ಅಕ್ರಮವಾಗಿ ದೇವಾಲಕೆರೆ ಗ್ರಾಮದಿಂದ ಕೊಡ್ಲಿಪೇಟೆ, ಮಲ್ಲಪಟ್ಟಣ ಕ್ಕೆ ಯಾವುದೇ ಭಯವಿಲ್ಲದೆ ಕ್ರೂರವಾಗಿ ಒಂದು ವಾಹನದಲ್ಲಿ 10 ಮತ್ತು ಮತ್ತೊಂದು ವಾಹನದಲ್ಲಿ 8 ಗೋವುಗಳನ್ನ ಅಕ್ರಮವಾಗಿ ತುಂಬಿ ಸಾಗಾಣಿಕೆ ಮಾಡುತ್ತಿದ್ದರು.
ಪೊಲೀಸ್ ನವರನ್ನ ಕಂಡು ಎರಡು ವಾಹನದ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದು.
ಬಜರಂಗದಳ ಮುಖಂಡರು ತಕ್ಷಣ ವಾಹನ ಚಾಲಕ ಮತ್ತು ಮಾಲೀಕನನ್ನ ಬಂಧಿಸಬೇಕು ಮತ್ತು ವಾಹನ ಜಪ್ತಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಕಲೇಶಪುರದ ಆಗಲಟ್ಟಿ ಸೇತುವೆ ಬಳಿ ಅತಿ ವೇಗದಿಂದ ಬಂದ ವಾಹನಗಳನ್ನ ಪೊಲೀಸ 112 ವಾಹನ ತಡೆಗಟ್ಟಿದಾಗ ವಾಹನ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.
KA 13 D 3181 Ashok Leyland ವಾಹನ
KA 12 B 9784 Pick up ವಾಹನ
ಸಕಲೇಶಪುರ ಅಕ್ರಮ ಗೋವುಗಳ ಸಾಗಾಣಿಕೆ, ಗೋಹತ್ಯೆ, ಗೋಮಾಂಸ ಮಾರಾಟದ ಕೇಂದ್ರವಾಗುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಗೋಹಂತಕರ ಮೇಲೆ ಹದ್ದಿನ ಕಣ್ಣಿಟ್ಟು ಚೆಕ್-ಪೋಸ್ಟ್ ಹಾಕಿ ವಾಹನ ತಪಾಸಣೆ ಮಾಡಿ ಅಕ್ರಮ ತಡೆಗಟ್ಟಬೇಕು ಎಂದು ಬಜರಂಗದಳ ಆಗ್ರಹಿಸುತ್ತದೆ.





