
ಸಕಲೇಶಪುರ ತಾಲ್ಲೂಕಿನ ಹೆತ್ತೂರು ಕೂಡುರಸ್ತೆ ಮಧ್ಯ ಏಕ ರೆಸಾರ್ಟ್ ಹತ್ತಿರ ಜೋರು ಮಳೆ ಗಾಳಿಗೆ ಮರ ಬಿದ್ದು ಸುಮಾರು 15 ದಿನ ಕಳೆದರೂ ಸಹ ಮರವನ್ನು ತೆರವುಗೊಳಿಸದೇ ಇರುವುದರಿಂದ ವಾಹನ ಸವಾರರು ಪರದಾಡವಂತೆ ಆಗಿತ್ತು.
ರಸ್ತೆ ಅರ್ಧ ಭಾಗ ಬಿದ್ದಿರುವ ಮರ ಹಾಗೆ ಇದ್ದು ಒಂದು ವಾಹನ ಸಂಚರಿಸುವಷ್ಟು ಮಾತ್ರ ರಸ್ತೆ ಇದ್ದು ವಾಹನಗಳು ಎದುರು ಬದುರಾದಾಗ ಆಫಘಾತ ಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು tv46ಮಲೆನಾಡು ಡಿಜಿಟಲ್ ಚಾನಲ್ ನಲ್ಲಿ ವರದಿ ಮಾಡಿದೆವು
ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರು ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಈ ಕಾರ್ಯಕ್ಕೆ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.







