ಸಕಲೇಶಪುರ : ಸಕಲೇಶಪುರ ತಾಲೂಕು ಹಾನುಬಾಳು ಹೋಬಳಿಯ ದೇವಲಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಪ್ರಸಿದ್ಧ ಪುರಾತನ ಚೋಳರ ಕಾಲದ ಶ್ರೀ ಬೆಟ್ಟದ ಬೈರವೇಶ್ವರ ದೇವಸ್ಥಾನದ ಆವರಣವನ್ನು ಭಾನುವಾರ ದೇವಲಕೆರೆ ಯೂಥ್ ಸ್ಪೋರ್ಟ್ಸ್ ಕ್ಲಬ್ ಹಾಗೂ ದೇವಲಕೆರೆ ಮರಗುಂದ ಗ್ರಾಮಸ್ಥರು ಸ್ವಚ್ಛಗೊಳಿಸಿದರು.

ಈ ಹಿಂದೆ ಇಲ್ಲಿಗೆ ಬರುವ ಪ್ರವಾಸಿಗರು ನೀರಿನ ಬಾಟಲ್ ಗಳು ತಿಂಡಿ ತಿನಿಸುಗಳ ಪ್ಲಾಸ್ಟಿಕ್ ಗಳು ಮಳೆಗೆ ನೆನೆದ ಹಾಗೆ ಹಾಕಿಕೊಳ್ಳುವ ಪ್ಲಾಸ್ಟಿಕ್ ಗಳನ್ನು ಅಲ್ಲಿಯೇ ಎಸೆದು ಹೋಗುವುದು ಮತ್ತು ಚಪ್ಪಲಿ ಶೂಗಳನ್ನು ಹಾಕಿ ಕೊಂಡು ದೇವಾಲಯ ಆವರಣದಲ್ಲಿ ಡ್ಯಾನ್ಸ್ ಮಾಡುವುದು ಕೇಕ್ ಕತ್ತರಿಸಿ ಸಂಭ್ರಮಿಸಿ ಉಳಿದ ಕೇಕ್ ನ್ನು ಅಲ್ಲಿಯೇ ಬಿಟ್ಟು ಹೋಗುವುದು ಇದರ ವಿರುದ್ಧ ಅಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

ದೇವಲಕೆರೆ ಯೂತ್ ಸ್ಪೋರ್ಟ್ಸ್ ಕ್ಲಬ್ ಸದಸ್ಯ ಯಶ್ವಂತ್ ಮಾತನಾಡಿ ಬೆಟ್ಟದ ಭೈರವೇಶ್ವರ ದೇವಸ್ಥಾನದ ಇತಿಹಾಸ ಇರುವ ಒಂದು ದೇವಸ್ಥಾನ ಇಲ್ಲಿಗೆ ಬರುವ ಪ್ರವಾಸಿಗರು ಬೇರೆ ಕಡೆಯಿಂದ ತರುವ ತಿಂಡಿ ತಿನಿಸು ಗಳು ಪ್ಲಾಸ್ಟಿಕ್ ಗಳು ಹಾಗೂ ಇನ್ನಿತರ ವಸ್ತುಗಳನ್ನು ಇಲ್ಲಿಯೇ ಬಿಸಾಕಿ ಹೋಗುತ್ತಿದ್ದಾರೆ ಇದರಿಂದ ದೇವಸ್ಥಾನದ ಆವರಣದ ಶುಚಿತ್ವ ಹಾಳಾಗುತ್ತದೆ ಹಾಗೂ ಪ್ರಕೃತಿಯ ಸೌಂದರ್ಯ ಹಾಳಾಗುತ್ತಿದೆ .ದೇವಸ್ಥಾನ ಆವರಣಕ್ಕೆ ಚಪ್ಪಲಿ ಹಾಕಿಕೊಂಡು ಬರುವ ಪ್ರವಾಸಿಗರು ದೇವಸ್ಥಾನದ ಪಾವಿತ್ರತೆಯನ್ನು ಹಾಳು ಮಾಡುತ್ತಿದ್ದಾರೆ.

ಈ ದೇವಸ್ಥಾನ ಅರ್ಚಕರು ದೇವಸ್ಥಾನಕ್ಕೆ ಬೆಳಗಿನ ಸಮಯದಲ್ಲಿ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ ಆನಂತರ ಬರುವ ಪ್ರವಾಸಿಗರು ತಮಗೆ ಇಷ್ಟ ಬಂದ ರೀತಿಯಲ್ಲಿ ತಾವುಗಳು ತಂದ ತಿಂಡಿ ತಿನಿಸುಗಳನ್ನು ತಿಂದು ಪ್ಲಾಸ್ಟಿಕ್ ಗಳನ್ನು ಬಿಸಾಡುವುದು, ನೀರು ಕುಡಿದು ನೀರಿನ ಬಾಟಲಿಗಳನ್ನು ಎಸೆಯುವುದು, ಹಾಡುಗಳಿಗೆ ಡ್ಯಾನ್ಸ್ ಮಾಡುವುದು ಹಾಗೂ ಹುಟ್ಟು ಹಬ್ಬದ ಕಾರ್ಯಕ್ರಮಗಳನ್ನು ಮಾಡಿ ಕೇಕ್ ಕತ್ತರಿಸಿ ಉಳಿದ ಕೇಕ್ ಅನು ಲ್ಲಿಯೇ ಬಿಟ್ಟು ಹೋಗುವುದರಿಂದ ದೇವಸ್ಥಾನದ ಆವರಣ ಹಾಳು ಮಾಡುವ ಕೆಲಸ ನಡೆಯುತ್ತಿದೆ.

ಈ ದೇವಸ್ಥಾನವು ಸಕಲೇಶಪುರದಿಂದ ದೂರ ಇರುವುದರಿಂದ ಇಲ್ಲಿಗೆ ಬಂದು ಸ್ವಚ್ಛಗೊಳಿಸಲು ಆಗೋದಿಲ್ಲ ಹಾಗಾಗಿ ಪ್ರವಾಸಿಗರು ತಂದಂತಹ ಪ್ಲಾಸ್ಟಿಕ್ ಗಳು ಇನ್ನಿತರ ಬೇಡದ ವಸ್ತುಗಳನ್ನು ನೀವೆ ತೆಗೆದುಕೊಂಡು ಹೋಗಿ ಎಲ್ಲಿ ಸೂಕ್ತವಾದ ಜಾಗ ಇದೆ ಅಲ್ಲಿ ಹಾಕಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಸಕಲೇಶಪುರ ತಾಲೂಕು ಅಧ್ಯಕ್ಷ ಮಂಜುನಾಥ್ ಸಿಂಘ್ವಿ ಯವರು ಭೈರವೇಶ್ವರ ದೇವಸ್ಥಾನ ಪುರಾತನ ಚೋಳರ ಕಾಲದ ದೇವಸ್ಥಾನವಾಗಿದೆ ಎಂದು ನಮ್ಮ ಹಿರಿಯರು ಹೇಳುತ್ತಾ ಬಂದಿದ್ದಾರೆ. ತಲೆ ತಲೆಮಾರುಗಳಿಂದ ಪೂಜಾ ಪದ್ಧತಿಗಳನ್ನು ನಡೆಸಿಕೊಂಡು ಬಂದಿದ್ದಾರೆ ಇಲ್ಲಿನ ಗ್ರಾಮಸ್ಥರಿಗೆ ಹಾಗೂ ಅನೇಕ ಹೊರ ಜಿಲ್ಲೆಯವರಿಗೆ ಈ ದೇವರು ಮನೆದೇವರಾಗಿದೆ.ಹಿಂದಿನಿಂದಲೂ ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಪೂಜೆ ನಡೆಸಿಕೊಂಡು ಬಂದ ಸ್ಥಳ. ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.

ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರವಾಸಿಗರು ಬಂದು ಪ್ರಕೃತಿ ಸೌಂದರ್ಯವನ್ನು ಸವಿಯಬೇಕು. ಪ್ರವಾಸಿಗರು ಅವರ ಮನೆಯನ್ನು ಎಷ್ಟು ಸ್ವಚ್ಛವಾಗಿ ಇಡುತ್ತಾರೆ ಹಾಗೆ ಇಲ್ಲಿನ ದೇವಸ್ಥಾನ ಆವರಣವನ್ನು ಹಾಗೂ ಪರಿಸರವನ್ನು ಸ್ವಚ್ಛವಾಗಿ ಇಡುವ ಮನಸ್ಥಿತಿ ಇಟ್ಟುಕೊಳ್ಳಬೇಕು. ಈ ದೇವಸ್ಥಾನ ಒಂದು ಶ್ರದ್ಧಾ ಕೇಂದ್ರ ವಾಗಿದ್ದು ಶೂ ಹಾಗೂ ಚಪ್ಪಲಿ ಹಾಕಿಕೊಂಡು ದೇವಸ್ಥಾನದ ಆವರಣದಲ್ಲಿ ಹೋಗಿ ಮೋಜು ಮಾಡುವುದು ಎಷ್ಟು ಸರಿ.ಪ್ರವಾಸಿಗರು ಬೆಟ್ಟದ ಭೈರವೇಶ್ವರ ದೇವಸ್ಥಾನ ನೋಡಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ನಮಗೆ ಸಂತೋಷ ಆದರೆ ಅಷ್ಟೇ ಸ್ವಚ್ಛವಾಗಿ ಇಡಬೇಕು ಅದು ನಿಮ್ಮ ಕರ್ತವ್ಯವಾಗಿದೆ.

ಈ ದೇವಸ್ಥಾನದ ಆವರಣದಲ್ಲಿ ಅನೇಕ ಚಲನಚಿತ್ರಗಳು ಚಿತ್ರೀಕರಣವಾಗಿದ್ದು ಅದರಲ್ಲಿ ರವಿಚಂದ್ರನ್ ಅವರ ಐದರಿಂದ ಆರು ಚಲನಚಿತ್ರಗಳು ಚಿತ್ರೀಕರಣ ನಡೆಸಿದರು ಅವರು ಅಷ್ಟೇ ದೇವಸ್ಥಾನವನ್ನು ಸ್ವಚವಾಗಿಟ್ಟಿದರು.ನಮಗೆ ಈ ಬೆಟ್ಟದ ಭೈರವೇಶ್ವರ ದೇವಸ್ಥಾನದ ಮಹತ್ವ ತಿಳಿಯಬೇಕು ಹಾಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ಈ ಸ್ಥಳವನ್ನು ಸ್ವಚವಾಗಿಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಸನ್ನ ದೇವಲಕೆರೆ, ಸುನಿಲ್, ಕೌಶಿಕ್ ಪರಿಕ್ಷೀತ್, ಅನಿಲ್ ಸಂಪಗೋಡು, ರತನ್ ,ಶೌರ್ಯ ವಿಪತ್ತು ನಿರ್ವಹಣಾ ತಂಡ, ದೇವಾಲಕೆರೆ ಹಾಗೂ ಮರಗುಂದ ಗ್ರಾಮಸ್ಥರು ಉಪಸಿದ್ಧರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *