
ಸಕಲೇಶಪುರ : ತಾಲ್ಲೂಕಿನ ಬೆಳಗೂಡು ಹೋಬಳಿಯ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ 45 ರಿಂದ 50 ವರ್ಷದಿಂದ ಹಾಳು ಬಿದ್ದ ಬಾವಿ ನೀರು ಕುಡಿಯಲು ಉಪಯೋಗಿಸಲಾಗುತ್ತಿದೆ ಮತ್ತು ಇಲ್ಲಿಯ ಸುಮಾರು 60 ಮನೆಗಳಿಗೆ ಇದೇ ನೀರು ಕುಡಿಯುತ್ತಿದ್ದು ಇಲ್ಲಿಯ ಜನರು ದಿನ ನಿತ್ಯ ಪಾಳುಬಿದ್ದ ಬಾವಿಯ ನೀರನ್ನು ಕುಡಿಯುವುದರಿಂದ ಹಲವು ರೋಗಗಳಿಂದ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ದಯಮಾಡಿ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಬೆಳಗೊಡು ಸರ್ಕಾರಿ ಶಾಲೆಯಲ್ಲಿ ಸುಮಾರು 120 ಶಾಲೆ ಮಕ್ಕಳಿದ್ದು ಹಾಗೂ ಗ್ರಾಮಸ್ಥರು ಮಹಿಳೆಯರು ಮಕ್ಕಳು ಸೇರಿ 250 ಜನ ವಾಸ ಇರುತ್ತಾರೆ.
ದಯಮಾಡಿ ಈ ಭಾಗಕ್ಕೆ ಒಂದು ಕೊಳವೆ ಬಾವಿಯನ್ನು ಕೊರಸಿ ಇಲ್ಲಿಯ ಜನಗಳಿಗೆ ಮತ್ತು ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಸಿ ಕೊಡಬೇಕೆಂದು ಗ್ರಾಮಸ್ಥರು ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಮಕ್ಕಳು ಹಾಗೂ ಶಾಲಾ ಸಿಬ್ಬಂದಿ ವರ್ಗ ಮತ್ತು ಕರವೇ ಪ್ರವೀಣ್ ಶೆಟ್ಟಿ ಬಳಗ ತಾಲೂಕು ಅಧ್ಯಕ್ಷರ ರಮೇಶ್ ಪೂಜಾರಿ ಬೆಳಗೂಡು ಬಸವ ನಾಗರಾಜ್ ಇತರ ಸ್ನೇಹಿತರೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಈ ಭಾಗದ ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜು ರವರಿಗೆ ಮನವಿ ಮಾಡಿಕೊಂಡಿದ್ದಾರೆ.
ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.




