
ಭಾರತದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು (Uniform Civil Code) ಜಾರಿಗೆ ತರಬೇಕು ಎಂಬ ವಿಚಾರ ಹಲವು ವರ್ಷ ಗಳಿಂದ ಚರ್ಚೆ ನಡೆಯುತ್ತಿದೆ, ಕೆಲವರು ಈ ನಿಯಮ ಬೇಕು ಎಂದರೆ, ಕೆಲವರು ಈ ವಿಚಾರಕ್ಕೆ ಒಪ್ಪಿಕೊಳ್ಳುತ್ತಿಲ್ಲ, ಏಕರೂಪ ನಾಗರಿಕ ಸಂಹಿತೆ ಇದ್ದರೆ ಒಂದೇ ಕಾನೂನು ಎಲ್ಲರಿಗೂ ಇರುತ್ತದೆ ಎಲ್ಲಾ ಜನರನ್ನು ಸಮಾನವಾಗಿ ನೋಡಲಾಗುತ್ತದೆ. ಭಾರತದಲ್ಲಿ ವಿವಿಧ ಮತದ, ಜಾತಿಯ ಜನಾಂಗಗಳು ಇವೆ, ಸಮಾನ ಸಂಹಿತೆ ನಾಗರಿಕ ಸಂಹಿತೆ ಜಾರಿಯಾದರೆ ಎಲ್ಲಾ ಧರ್ಮದವರೂ ತಮ್ಮ ವೈಯಕ್ತಿಕ ಕಾನೂನನ್ನು ಒಪ್ಪಬೇಕಾಗುತ್ತದೆ, ಅವರು ಈ ನಿಯಮಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ, ಈ ವಿಚಾರಕ್ಕಾಗಿ ಇನ್ನು ಕೂಡ ಚರ್ಚೆ ಯಲ್ಲಿದೆ, ಇದೀಗ ಕೇಂದ್ರ ಸರ್ಕಾರ (Central Govt) ಸಮಾನ ನಾಗರಿಕ ಸಂಹಿತೆ ಜಾರಿಗೆ ತರಲು ತಯಾರಿ ನಡೆಸಿದೆ ಎನ್ನಲಾಗಿದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು ನಿರ್ಣಯ ತೆಗೆದು ಕೊಳ್ಳುವ ಬಗ್ಗೆ ಚರ್ಚೆ ಕೂಡ ನಡೆಸ ಲಾಗಿದೆ. ಸಮಾನ ನಾಗರಿಕ ಸಂಹಿತೆ ಎಂದರೇನು:ಸಮಾನ ನಾಗರಿಕ ಸಂಹಿತೆ ಎಂದರೆ ದೇಶಕ್ಕೆ ಒಗ್ಗಿಕೊಳ್ಳುವಂತಹ, ಅನ್ವಯ ವಾಗುವಂತೆ ಜಾರಿ ಮಾಡಲಾಗುವ ಒಂದೇ ಕಾನೂನು. ಈ ಕಾನೂನು ಬಂದ ಮೇಲೆ ಎಲ್ಲ ಜಾತಿ ಮತ್ತು ಸಮುದಾಯಗಳು ಒಪ್ಪಿಕೊಳ್ಳಬೇಕು, ಎಲ್ಲ ಜನಾಂಗದವರಿಗೆ ಅನ್ವಯವಾಗುವಂತೆ ಅನುಷ್ಠಾನ ಮಾಡುವುದು ಇದರ ಮೂಲ ಉದ್ದೇಶವಾಗಿರುತ್ತದೆ . ಮದುವೆ, ವಿವಾಹ ವಿಚ್ಛೇದನ, ದತ್ತು ಸ್ವೀಕಾರ, ವಿಚಾರ ಇತ್ಯಾದಿ ಗಳನ್ನು ಅದು ಒಳಗೊಳ್ಳಲಿದೆ. ಭರವಸೆ ನೀಡಿತ್ತು:ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ 2019ರ ಲೋಕಸಭಾ ಚುನಾವಣೆ ವೇಳೆ , ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿ ತರುತ್ತವೆ ಎಂದು ಭರವಸೆ ನೀಡಿತ್ತು, ಮುಂದಿನ ಅಧಿವೇಶನ ದಲ್ಲಿ ಸಮಾನ ನಾಗರಿಕ ಸಂಹಿತೆ ಮಂಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಜನರು ತಮ್ಮ ಧಾರ್ಮಿಕ ಕಾನೂನುಗಳನ್ನು ಬಿಟ್ಟುಕೊಡಲು ತಿರ್ಮಾನಿಸುತ್ತಿಲ್ಲ ಅದಕ್ಕಾಗಿಯೇ ಯಾವುದೇ ಸರ್ಕಾರವು ಅದನ್ನು ಜಾರಿಗೆ ತರಲು ಧೈರ್ಯ ಮಾಡಿಲ್ಲ.
