
ಸಕಲೇಶಪುರದ ತೇಜಸ್ವಿ ಬಳಿ ಲಾರಿ ಹಾಗೂ ಬೈಕ್ ನಡುವೆ ರಸ್ತೆ ಅಪಘಾತ ಸಕಲೇಶಪುರ ನಗರದ ಬಿ ಎಂ ರಸ್ತೆಯಲ್ಲಿ (ತೇಜಸ್ವಿ ಹತ್ತಿರ) ಬೈಕ್ ಹಾಗೂ ಲಾರಿಯ ನಡುವೆ ಇಂದು 12-30ಕ್ಕೆ ಅಪಘಾತ ಸಂಭವಿಸಿದ್ದು, ತಮಿಳುನಾಡು ಮೂಲದ ಲಾರಿಯ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ
ನಂತರಲಾರಿಯನ್ನು ಬಾಳುಪೇಟೆಯ ಹತ್ತಿರ ತಡೆದು ನಿಲ್ಲಿಸಿಲಾಗಿದೆ. ಅಪಘಾತದಲ್ಲಿ ದ್ವಿ ಚಕ್ರ ವಾಹನದಲ್ಲಿದ್ದಂತ ಮಂಜು ಗೆ ಗಂಭೀರ ಗಾಯವಾಗಿದ್ದು ಇನ್ನೊರ್ವ ಯುವರಾಜ್ ಗೆ ಸಣ್ಣಪುಟ್ಟ ಗಾಯಗಳಾಗಿದೆ ಇವರುಗಳು ಜಮ್ಮನಹಳ್ಳಿ ಹಾಗೂ ಬಂದಿಹಳ್ಳಿಯವರು ಎಂದು ತಿಳಿದು ಬಂದಿದೆ.ಮಂಜುನಾಥ್ ಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕಳುಹಿಸಲಾಗಿದೆ.




