ವರದಿ….. ಅರುಣ್ ಗೌಡ ಕರಡಿಗಾಲ.

ಸಕಲೇಶಪುರ : ತಾಲ್ಲೂಕಿನ ಯಾವ ಮೂಲೆಯ ಹಳ್ಳಿಯ ಮೂಲಭೂತ ಸಮಸ್ಯೆಗಳು ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಅರು ಗಂಟೆಯಿಂದ ಏಳು ಗಂಟೆ ಒಳಗೆ ಆ ಸ್ಥಳಕ್ಕೆ ಯಾರಿಗೂ ಹೇಳದೆ ಎಲ್ಲಿಯೂ ಪ್ರಚಾರವಿಲ್ಲದೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಂಬ ಸರ್ಕಾರಿ ಗಾಡಿ ಒಂದು ಬಂದು ನಿಲ್ಲುತ್ತದೆ.

ಅದರಿಂದ ಒಬ್ಬ ಆರಡಿ ದೈತ್ಯ ವ್ಯಕ್ತಿ ಇಳಿದು ಸ್ಥಳದಲ್ಲಿ ಮಳೆಯೇ ಇರಲಿ, ಬಿಸಿಲೆ ಇರಲಿ ಅಥವಾ ಎಂತ ಕೆಟ್ಟ ವಾಸನೆಗಳಿಂದ ತುಂಬಿದ ವಾತಾವರಣವಿರಲಿ ಅಲ್ಲದೆ , ಗೊಚ್ಚೆ ,ಚರಂಡಿ ಇರಲಿ ಸರಸರನೆ ನಡೆಯುತ್ತಾ ಸಮಸ್ಯೆ ಬಗ್ಗೆ ಬಿತ್ತರಿಸಿದ ಸ್ಥಳಕ್ಕೆ ಧಾವಿಸಿ ಬರುತ್ತಾರೆ.

ಪ್ರತಿಯೊಂದು ಸಮಸ್ಯೆಯನ್ನು ಸೂಕ್ಷ್ಮವಾಗಿ ವೀಕ್ಷಿಸಿ ,ಪರೀಕ್ಷಿಸಿ ದೂರು ಕೊಟ್ಟವರನ್ನು ಸ್ಥಳೀಯರನ್ನು ಪಕ್ಕಕ್ಕೆ ಕರೆದು ಇಲ್ಲ ಅವರಿರುವ ಜಾಗಕ್ಕೆ ಹೋಗಿ ಅವರು ವಯಸ್ಸಿನ ಚಿಕ್ಕವರೇ ಇರಲಿ ದೊಡ್ಡವರೇ ಕೈ ಮುಗಿಯುತ್ತ ಮೃದುವಾಗಿ “ಗೌಡ್ರೆ …. ಅಥವಾ ಸ್ವಾಮಿ ….ಈ ಜಾಗದಲ್ಲಿ ನೀವು ಹೇಳಿದ ಸಮಸ್ಯೆಗೆ ಖಂಡಿತವಾಗಿಯೂ ಸ್ಪಂದಿಸಿ ಕೆಲಸ ಮಾಡಿ ಕೊಡುತ್ತೇವೆ .ನೀವು ನಿಶ್ಚಿಂತೆ ಇರಬೇಕು. ಎಂದು ಹೇಳುವುದರ ಜೊತೆಗೆ, ಸ್ಥಳಕ್ಕೆ ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿಗಳಿಗೆ ಬರುವುದಕ್ಕೆ ಹೇಳಿ ಕೂಡಲೇ ಈ ಸಮಸ್ಯೆ ಬಗೆಹರಿಸಿ ಎಂದು ಆಜ್ಞಾಪಿಸುವುದರೊಂದಿಗೆ ಕೆಲಸ ಮಾಡಿಕೊಡಲು ಮುಂದಾಗುತ್ತಾರೆ.

ಗ್ರಾಮ ಪಂಚಾಯಿತಿಯಲ್ಲಿ ಹಣವಿಲ್ಲದಿದ್ದರೂ ಪರವಾಗಿಲ್ಲ ಇಲ್ಲಿ ಜನರಿಗೆ ಖಂಡಿತ ಸಮಸ್ಯೆಯಾಗುತ್ತಿದೆ ಹಾಗಾಗಿ 15ನೇ ಹಣಕಾಸಿನ ನಲ್ಲಿ ಸೇರಿಸಿ ಕಳಿಸಿ ನಾವು ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸೋಣ .ಸಾರ್ವಜನಿಕರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ನೋಡಿಕೊಳ್ಳೋಣ. ಇಂದು ಹೇಳುವುದರೊಂದಿಗೆ ಬಂದಿದ್ದ ಅಭಿವೃದ್ಧಿ ಅಧಿಕಾರಿಗಳಿಗೂ ಧೈರ್ಯ ತುಂಬುತ್ತಾರೆ. ನಂತರ ಎಲ್ಲರಿಗೂ ನಮೃತವಾಗಿ ಧನ್ಯತಭವಾದದಿಂದ ನಯ ವಿನಯದಿಂದ ಕೈ ಮುಗಿಯುತ್ತಾ ಹೊರಡುವ ಮೂಲಕ ಸ್ಥಳದಲ್ಲಿಯೇ ಪರಿಹಾರವನ್ನು ಸೂಚಿಸಿ ಗ್ರಾಮಸ್ಥರ ಪ್ರೀತಿಗೆ ಪಾತ್ರವಾಗಿರುವ ಈ ತಾಲೂಕಿನ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಣಾಧಿಕಾರಿ ರಾಮಕೃಷ್ಣ.

ನೋಡಲು ಆರಡಿ ದೈತ್ಯ ವ್ಯಕ್ತಿ .ಆದರೆ ಮಾತು ಮತ್ತು ಮನಸ್ಸು ಮೃದು.ತನ್ನ ವೃತ್ತಿಜೀವನದಲ್ಲಿ ವಿಶ್ರಾಂತಿ ಇಲ್ಲದ ಕೆಲಸದಿಂದಲೇ ತಾಲೂಕಿನಾಧ್ಯಂತ ಜನರ ಪ್ರೀತಿಗೆ ಅಭಿವೃದ್ಧಿಗೆ ಹೆಸರಾಗಿರುವ ಇ.ಓ ರಾಮಕೃಷ್ಣ ತಾಲೂಕಿನ ಯಾವ ಊರಿನ ಯಾವ ಮಂದಿಗೆ ಸಮಸ್ಯೆ ಇದ್ದರೂ ಕೂಡ ಸ್ಪಂದಿಸುವಂತಹ ಅಧಿಕಾರಿ ಹಾಗಾಗಿ ಎಲ್ಲಾ ಗ್ರಾಮಸ್ಥರ ಬಾಯಲ್ಲಿ ಇವರ ಹೆಸರು ಹಾಗೂ ಇವರ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ.

ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವ ಸಿದ್ಧಾಂತವನ್ನು ಹೊಂದಿರುವ ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರು ಇವರು 13-06-1980 ರಲ್ಲಿ ತಂದೆಗೆ ಮುದ್ದಿನ ಒಬ್ಬರೇ ಮಗನಾಗಿ ಜನಿಸಿದರು.

ತಂದೆ ಭದ್ರಾವತಿ ಕಾರ್ಖಾನೆಯಲ್ಲಿ ಕೆಲಸ ಮಾಡುವುದರಿಂದ ಇವರ ವಿದ್ಯಾಭ್ಯಾಸ ಇಲ್ಲೇ ನಡೆಯಿತು. ತಮ್ಮ ಮನೆಯ ಕ್ವಾಟ್ರಸಿನ ಅಕ್ಕಪಕ್ಕದ ಮನೆಯವರೆಲ್ಲ ವಿದ್ಯಾಭ್ಯಾಸದಲ್ಲಿ ಮುಂದಿದ್ದು ಎಲ್ಲರೂ ತಮ್ಮ ತಂದೆಯಂತೆ ಭದ್ರಾವತಿ ಕಬ್ಬಿಣ ಕಾರ್ಖಾನೆಯಲ್ಲಿ ಇಂಜಿನಿಯರ್ ಕೆಲಸದ ಹುದ್ದೆಯನ್ನು ಅಲಂಕರಿಸಬೇಕೆಂಬ ಕನಸು ಹೊತ್ತು ಓದುತ್ತಿದ್ದರು, ಇದೇ ನಿಟ್ಟಿನಲ್ಲಿ ಇವರ ಗುರಿಯು ಸಾಗಿತು .ಇದರ ಫಲವಾಗಿ ಇವರು ಜವಾಹರ್ ಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ (JNCE) ಕಾಲೇಜಿನಲ್ಲಿ ಇಂಜಿನಿಯರ್ ಪದವಿ ಪಡೆದು ಇವರು ಮೊದಲು 08-೦9-2009 ರಲ್ಲಿ ರಾಯಚೂರಿನ ಕೃಷ್ಣಭಾಗ್ಯ ಜಲನಿಗಮ ನಿಯಮಿತ, ನಾರಾಯಣಪುರ ಬಲದಂಡೆ ಕಾಲುವೆ ದೇವದುರ್ಗ ದಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿ ಅಲ್ಲಿಯ ಜನರ ಪ್ರೀತಿಗೆ ಪಾತ್ರರಾದರು.ನಂತರ ತಮ್ಮ ಜೀವನದ ಅಮೂಲ್ಯ ಸೇವೆಗಾಗಿ ಸಕಲೇಶಪುರ ತಾಲೂಕು ಕೈಬೀಸಿ ಕರೆಯಿತು.

28-10-2015ರಲ್ಲಿ ಎತ್ತಿನಹೊಳೆ ಏತ ನೀರಾವರಿ ಸಂಬಂಧಿಸಿದಂತೆ ಭೂ ಸ್ವಾಧೀನ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಾ , ದೋಣಿಗಲ್, ಹೆಬ್ಬಸಾಲೆ ಸೇರಿದಂತೆ ಆ ಭಾಗದ ಜನರಿಗೆ ಪರಿಹಾರವನ್ನು ಕಲ್ಪಿಸಿಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಇದರ ಫಲವಾಗಿಯೇ ಅವರಿಗೆ ಸಕಲೇಶಪುರ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ 30-03-2023 ರಲ್ಲಿ ಒಲಿದು ಬಂದಿತ್ತು.

ಅಧಿಕಾರ ಸ್ವೀಕರಿಸಿದ ದಿನದಲ್ಲಿ ಆಗ ತಾನೇ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಾಗದೆ ಒಂದು ವರ್ಷ ಮುಂದೂದುತ್ತ ಬಂದಿತ್ತು. ಹಾಗೂ ಆಗತಾನೆ ಎಂಎಲ್ಎ ಚುನಾವಣೆಯಲ್ಲಿ ನೂತನ ಶಾಸಕರು ಕಂಡ ಜನತೆಗೆ ಅಭಿವೃದ್ಧಿಯ ಕನಸು ಹೊತ್ತಿದ್ದರು. ತಾಲೂಕಿನಲ್ಲಿ ಅಭಿವೃದ್ಧಿ ಇಂಥ ಸಂದರ್ಭದಲ್ಲಿ ತಾಲೂಕಿನ ಜನರ ಸಮಸ್ಯೆಗೆ ಸ್ವಂದಿಸಿ ಪರಿಹಾರದ ಗಮನ ಹರಿಸುವ ವ್ಯಕ್ತಿ ಅತಿ ಮುಖ್ಯವಾಗಿ ಇಂತಹ ಸಂದರ್ಭದಲ್ಲಿ ಬೇಕಾಗಿತ್ತು.

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಯಾವುದೇ ಊರಿನ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ ,ವಿದ್ಯುತ್ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆಗಳು ಇದ್ದರು ಕೂಡಲೇ ಸ್ಥಳಕ್ಕೆ ಹೋಗಿ ಪರಿಹಾರಕ್ಕೆ ಮುಂದಾಗುತ್ತಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ಹಿರೇಮಂದಿ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿ ಕೊಟ್ಟು ಈಗಲೂ ಗ್ರಾಮಸ್ಥರು ಧನ್ಯತಾಭಾವ ವ್ಯಕ್ತಪಡಿಸುತ್ತಾರೆ. ಅಲ್ಲದೇ ಅವರೆಕಾಡು ಗ್ರಾಮಸ್ಥರು ರಸ್ತೆ ಸಂಪರ್ಕವಿಲ್ಲದೆ ಚುನಾವಣೆ ಬಹಿಷ್ಕಾರಕ್ಕೆ ಮುಂದಾದಾಗ ತಾವು ಮುಂದೆ ನಿಂತು ಗ್ರಾಮಸ್ಥರ ಮನವೊಲಿಸಿ ಬಹಿಸ್ಕಾರ ಹಿಂದೆ ತೆಗೆಯುವಂತೆ ಮಾಡಿ ಮತದಾನಕ್ಕೆ ದಾರಿ ಮಾಡಿ ಕೊಟ್ಟಿದ್ದು ಇವರ ಕಾರ್ಯ ವೈಕರಿಯರಿಗೆ ನೀಡಿದ ಕೈ ಗನಡಿಯಾಗಿದೆ.ಅಲ್ಲದೆ ಇವರಿಗೆ ಓದಿನಲ್ಲಿ ಆಸಕ್ತಿ ಹೆಚ್ಚಿರುವುದರಿಂದ ಪ್ರತಿ ಗ್ರಾಮ ಪಂಚಾಯಿತಿಯು ಡಿಜಿಟಲ್ ಕನ್ನಡ ಗ್ರಂಥಾಲಯವನ್ನು ಮಾಡಲು ಎಲ್ಲಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ವ್ಯವಸ್ಥಿತ ಹಾಗೂ ಸುಸಜ್ಜಿತ ಗ್ರಂಥಾಲಯದ ವ್ಯವಸ್ಥೆಗೆ ಇವರ ಕೈವಾಡ ಎದ್ದು ಕಾಣುತ್ತದೆ.

ಗ್ರಾಮಪಂಚಾಯಿತಿಯ ಗ್ರಂಥಾಲಯದಲ್ಲಿರುವ ಅತ್ಯುತ್ತಮ ಪುಸ್ತಕಗಳು ಓದುಗರನ್ನು ತಲುಪಬೇಕು ಎಂಬ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ಗ್ರಂಥಾಲಯಕ್ಕೆ ತಾವೇ ಖುದ್ದಾಗಿ ಭೇಟಿ ನೀಡಿ ಗ್ರಂಥ ಪಾಲಕರಿಗೆ ಸರಿಯಾದ ಮಾರ್ಗದರ್ಶನ ನೀಡುವುದರೊಂದಿಗೆ ಮಾದರಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಹಾಗೂ ಡಿಜಿಟಲ್ ಲೈಬ್ರರಿ ವ್ಯವಸ್ಥೆತವಾಗಿ ಕಾರ್ಯರೂಪಕ್ಕೆ ಬರುವಲ್ಲಿ ಇವರ ಶ್ರಮ ಇದೆ..ಇದಕ್ಕೆ ಉದಾಹರಣೆ ಎಂಬಂತೆ ವಳಲಹಳ್ಳಿ ಗ್ರಾಮ ಪಂಚಾಯಿತಿ ಯಲ್ಲಿ ಒಂದು ವರ್ಷದಿಂದ ಧೂಳು ಹಿಡಿದು ಬಿದ್ದಿದ್ದ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಪುಸ್ತಕಗಳು ಈಗ ಗ್ರಂಥಾಲಯದ ರೂಪವನ್ನು ಪಡೆದುಕೊಂಡಿದೆ.

ಇಷ್ಟೆಲ್ಲದರ ಜೊತೆಗೆ ಗ್ರಾಮ ಪಂಚಾಯಿತಿಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚು ಅನುದಾನ ತಂದು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾಮ ಪಂಚಾಯತಿಯ ಮೂಲಕ ಪ್ರತಿ ಗ್ರಾಮವು ಅಭಿವೃದ್ಧಿ ಆಗಬೇಕು. ಎಂಬ ಉದ್ದೇಶವನ್ನು ಹೊಂದಿರುವವರು .ಇಷ್ಟೆಲ್ಲಾ ಅಭಿವೃದ್ಧಿಯನ್ನು ಮಾಡುತ್ತಾ ಮಾದರಿ ಗ್ರಾಮ ಪಂಚಾಯಿತಿಯಾನ್ನಗಿ ಮಾಡುವ ಕನಸು ಹೊತ್ತಿರುವ ರಾಮಕೃಷ್ಣ ಕೇವಲ ಐದು ತಿಂಗಳಲ್ಲಿ ಇಷ್ಟೆಲ್ಲಾ ಕೆಲಸಗಳನ್ನು ಮಾಡಿ ತಾಲೂಕಿನಧ್ಯಂತ ಎಲ್ಲಾ ಎಲ್ಲಾ ಗ್ರಾಮಗಳಲ್ಲೂ ತಮ್ಮ ಕೆಲಸದ ಮೂಲಕ ಕೆಲವು ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿಗಳ ರೂಪಗೊಳಿಸಿದ್ದಾರೆ .

ಇನ್ನು ಇವರಿಗೆ ಒಂದರಿಂದ ಎರಡು ವರ್ಷ ಅವಧಿ ಸಿಕ್ತಾರೆ ಖಂಡಿತ ಅಭಿವೃದ್ಧಿ ಮಾಡುವುದರಲ್ಲಿ ಜೊತೆಗೆ ಎರಡರಿಂದ ಮೂರು ಗ್ರಾಮ ಪಂಚಾಯಿತಿಯನ್ನು ರಾಜ್ಯಮಟ್ಟದ ಮಾದರಿ ಗ್ರಾಮ ಪಂಚಾಯತಿಯನ್ನು ಮಾಡುವ ಕನಸನ್ನು ಹೊಂದಿದ್ದಾರೆ. ಸ್ನೇಹಜೀವಿ, ಸದಾ ಅಭಿವೃದ್ಧಿಯತ್ತ ಚಿಂತೆ ಮಾಡುವ ಅಧಿಕಾರಿ, ನಿಷ್ಠಾವಂತ , ಪ್ರಾಮಾಣಿಕ ಅಧಿಕಾರಿ ಆಗಿರುವ ರಾಮಕೃಷ್ಣ ಅವರ ಸೇವೆ ಈ ತಾಲೂಕಿಗೆ ಇನ್ನು ಹೆಚ್ಚು ಕಾಲ ದೊರೆಯುವಂತಾಗಲಿ.

ವರದಿ…… ಅರುಣ್ ಗೌಡ ಕರಡಿಗಾಲ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *