ಯೆಡೇಹಳ್ಳಿ ಆರ್ ಮಂಜುನಾಥ್.

ನೋಡನೋಡುತ್ತಿದ್ದಂತೆಯೇ ಕಳೆದುಹೋಗುವ ಬದುಕಿನ ಕ್ಷಣಗಳನ್ನು ನಮಗಾಗಿ ಹಿಡಿದುಕೊಡುವುದು ಛಾಯಾಚಿತ್ರಗಳ ವೈಶಿಷ್ಟ್ಯ. ಹಾಗೆ ಹಿಡಿದುಕೊಡುವ ಕೆಲಸ ಬರಿಯ ಕ್ಯಾಮೆರಾ ಒಂದರಿಂದಲೇ ಆಗುವಂಥದ್ದಲ್ಲ; ಕ್ಯಾಮೆರಾ ಹಿಂದಿನ ಕಣ್ಣಿನ ಜೊತೆಗೆ ಆ ಕಣ್ಣಿನಿಂದ ನೋಡುವ ಕಲಾತ್ಮಕ ಮನಸ್ಸು ಸೇರಿದಾಗಲೇ ಛಾಯಾಚಿತ್ರಗಳು ಕಲಾಕೃತಿಗಳಾಗುವುದು ಸಾಧ್ಯ. ಛಾಯಾಚಿತ್ರಗಳಿಗೆ ಹಾಗೊಂದು ಕಲಾಕೃತಿಯ ರೂಪಕೊಡುವ ಶಕ್ತಿ ಎಲ್ಲೋ ಕೆಲವರಿಗಷ್ಟೆ ಇರುತ್ತದೆ. ಕಲಾವಿದ ಕೃಷ್ಣಮೂರ್ತಿಯವರು ಛಾಯಾಗ್ರಹಣದ ಸೃಜನಶೀಲತೆ ಹಾಗೂ ತಾಂತ್ರಿಕ ನೈಪುಣ್ಯಗಳೆರಡನ್ನು ನೂರಾರು ಯುವಕರಿಗೆ ಕಲಿಸಿ ನೈಪುಣ್ಯತೆ ಮೆರೆದ ಮಹಾನ್ ವ್ಯಕ್ತಿಯಾಗಿದ್ದಾರೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮತ್ತಿಕೆರಿ ಗ್ರಾಮದಲ್ಲಿ 1932 ರಲ್ಲಿ ನರಸಿಂಹಯ್ಯ ಮತ್ತು ಚೆಲುವಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ಕೃಷ್ಣಮೂರ್ತಿಯವರು ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ ಛಾಯಾಗ್ರಹಣ ಅಧ್ಯಯನ ಮಾಡಿ, 1955ರ ಸುಮಾರಿಗೆ ಸಕಲೇಶಪುರಕ್ಕೆ ಬಂದರು. ಸಂಪೂರ್ಣ ತಮ್ಮ ಆಸ್ತಿಯನ್ನು ಹುಟ್ಟೂರಿನ ದೇವಾಲಯಕ್ಕೆ ಬರೆದುಕೊಟ್ಟು ಬರಿಗೈಯಲ್ಲಿ ಬಂದರಂತೆ.

ಸ್ಟುಡಿಯೋದಲ್ಲಿ ಛಾಯಾಗ್ರಹಣದ ಜೊತೆಗೆ ಹಲವಾರು ಯುವಕರಿಗೆ ಛಾಯಾಗ್ರಹಣದ ಹುಚ್ಚು ಹಿಡಿಸಿ ನೂರಾರು ಜನರಿಗೆ ತರಬೇತಿ ನೀಡಿ ಬದುಕು ಕಟ್ಟಿಕೊಳ್ಳುವಲ್ಲಿ ನೆರವಾಗಿದ್ದರಂತೆ, ಜೊತೆಗೆ ಛಾಯಾಗ್ರಹ ತರಬೇತಿಯ ಯುವಕರಿಗೆ ಊಟ ವಸತಿ ಉಚಿತವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಎಂಟು ಮಕ್ಕಳನ್ನು ಪಡೆದ ಕೃಷ್ಣಮೂರ್ತಿಯವರು ಗಾಯತ್ರಿ.. ಲಲನ ಎಂಬ ಪುತ್ರಿಯರು. ಕರುಣಾಕರ್, ಪಾರ್ಥಸಾರಥಿ, ಆನಂದ್, ಸತ್ಯನಾರಾಯಣ, ರಮೇಶ್ ಎಂಬ ಪುತ್ರರನ್ನು ಪಡೆದಿದ್ದಾರೆ, ಒಂದೊಂದು ಉದ್ಯಮದಲ್ಲಿ ಮಕ್ಕಳನ್ನು ತೊಡಗಿಸಿ ಸಕಲೇಶಪುರದಲ್ಲಿ ಹೆಗ್ಗುರಿತು ಮೂಡಿಸುವಲ್ಲಿ ಕಾರಣಿಭೂತರಾಗಿದ್ದಾರೆ.1999ರಲ್ಲಿ ನಿಧನ ಹೊಂದಿದ್ದಾರೆ.

ಹಲವಾರು ಜನರಿಗೆ ಕಷ್ಟದಲ್ಲಿದ್ದವರಿಗೆ ಹಣ ಸಹಾಯ ಮಾಡುತ್ತಿದ್ದರಂತೆ, ನಾನು ಕೊಟ್ಟಿದ್ದೇನೆ ಎಂದು ಯಾರಿಗೂ ಹೇಳದೆ, ನಿಮಗೆ ಕೊಡುವಂಥ ಶಕ್ತಿ ಭಗವಂತ ನೀಡಿದಾಗ ಕೊಡಿ ಎಂದು ಉದಾರತೆ ಮೆರೆದಿದ್ದಾರೆ. ಚಂದ್ರಶೇಖರ್ ಧೂಳೇಕರ್ ಬರೆದಂತಹ ಮಂಜರಬಾದ್ ತಾಲೂಕಿನ ಮಹಾನುಭಾವರು ಪುಸ್ತಕದಲ್ಲಿ ಸ್ವಲ್ಪ ಓದಿ ತಿಳಿದೆ. ನಂತರ ಕೆಲವರನ್ನು ಕೇಳಿ ತಿಳಿದಾಗ ನನಗೆ ಇವರ ಬಗ್ಗೆ ದುಡಿಮೆ ಬಗ್ಗೆ ಗೌರವ ಮೂಡಿತು, ಕೃಷ್ಣಮೂರ್ತಿ ಅವರ ಸುಪುತ್ರರುಗಳು ನನಗೆ ಬಹಳ ಆತ್ಮೀಯ ಸ್ನೇಹಿತರಾಗಿದ್ದಾರೆ, ಅವರೆಲ್ಲರೂ ಕೂಡ ಕಾಯಕ ಶ್ರದ್ಧೆಯನ್ನು ಮೆರೆದು ನಮ್ಮೆಲ್ಲರಿಗೂ ಕೂಡ ಹೆಮ್ಮೆ ಎನಿಸುವಂತೆ ಮಾದರಿಯ ಜೀವನ ನಡೆಸುತ್ತಿರುವುದು ತಾಲೂಕಿನ ಹೆಮ್ಮೆಯ ವಿಷಯವಾಗಿದೆ. ಎಲ್ಲರಿಗೂ ಒಳಿತಾಗಲಿ.

ಯಡೇಹಳ್ಳಿ’ಆರ್’ ಮಂಜುನಾಥ್

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *