ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಪರಿಣಾಮ ಮಳೆಗಾಲದಲ್ಲಿಯೂ ಉಷ್ಣಾಂಶ ಹೆಚ್ಚಳವಾಗಿದೆ. ಮಳೆ ಕೊರತೆಯಿಂದಾಗಿ ಉಷ್ಣಾಂಶ ವಾಡಿಕೆಗಿಂತಲೂ 3 ಡಿಗ್ರಿ ಏರಿಕೆ ಕಂಡಿದೆ. ಸಿಲಿಕಾನ್ ಸಿಟಿಯಲ್ಲೂ ಸುಡು ಸುಡು ವಾತಾವರಣ ನಿರ್ಮಾಣವಾಗಿದ್ದು, ಮಡಿಕೇರಿಯಲ್ಲಿ ಈ ಬಾರಿ 7 ಡಿಗ್ರಿಯಷ್ಟು ಉಷ್ಣಾಂಶ ಏರಿಕೆಯಾಗಿದೆ.ವಾಯುವ್ಯ ದಿಕ್ಕಿನಿಂದ ಗಾಳಿ ಬೀಸುತ್ತಿರುವ ಹಿನ್ನೆಲೆ ತಾಪಮಾನ ಹೆಚ್ಚಳವಾಗಿದೆ.

ಜೂನ್‌ನಿಂದ ಇಲ್ಲಿಯವರೆಗೆ ವಾಡಿಕೆಯಂತೆ 666 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಇಲ್ಲಿಯತನಕ ಕೇವಲ 490 ಮಿ.ಮೀ ಅಷ್ಟೇ ಮಳೆಯಾಗಿದೆ. ಜುಲೈ ಕೊನೆ ವಾರದಲ್ಲಿ ಮಳೆ ಪ್ರಮಾಣ ಅಲ್ಪಮಟ್ಟಿಗೆ ಸುಧಾರಣೆ ಕಂಡರೂ ಆಗಸ್ಟ್ನಲ್ಲಿ 23% ರಷ್ಟು ಮಳೆ ಕೊರತೆಯಾಗಿದೆ.ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 24 ಡಿಗ್ರಿ, ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:

ಬೆಂಗಳೂರು: 31-20

ಮಂಗಳೂರು: 29-24

ಶಿವಮೊಗ್ಗ: 29-21

ಬೆಳಗಾವಿ: 27-21

ಮೈಸೂರು: 31-21

ಮಂಡ್ಯ: 33-21

ಮಡಿಕೇರಿ: 24-17

ರಾಮನಗರ: 32-21

ಹಾಸನ: 28-19

ಚಾಮರಾಜನಗರ: 32-21

ಚಿಕ್ಕಬಳ್ಳಾಪುರ: 30-19

ಕೋಲಾರ: 32-21

ತುಮಕೂರು: 31-20

ಉಡುಪಿ: 30-25

ಕಾರವಾರ: 29-25

ಚಿಕ್ಕಮಗಳೂರು: 27-19

ದಾವಣಗೆರೆ: 31-22

ಹುಬ್ಬಳ್ಳಿ: 29-21

ಚಿತ್ರದುರ್ಗ: 31-21

ಹಾವೇರಿ: 30-22

ಬಳ್ಳಾರಿ: 35-23

ಗದಗ: 32-21

ಕೊಪ್ಪಳ: 33-22

ರಾಯಚೂರು: 34-24

ಯಾದಗಿರಿ: 34-24

ವಿಜಯಪುರ: 32-22

ಬೀದರ್: 30-21

ಕಲಬುರಗಿ: 33-24

ಬಾಗಲಕೋಟೆ: 33-22

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *