ಸಕಲೇಶಪುರ. ತಾಲ್ಲೂಕಿನ ಬೆಳಗೋಡು ಹೋಬಳಿ ಕೆಲವಳ್ಳಿ ಹೆಗ್ಗೋವೆ ಗ್ರಾಮದಲ್ಲಿಯೇ ಇರುವ ಭೀಮನ ದೇಹದ ಹಿಂಬದಿ ತೀವ್ರ ಸ್ವರೂಪದ ಗಾಯವಾಗಿದ್ದು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ.ಇಲ್ಲಿಯವರೆಗೆ ಯಾರಿಗೂ ತೊಂದರೆ ಕೊಡದೇ ಆಹಾರ ಅರಸಿ ಮನೆಯ ಬಾಗಿಲಿಗೆ ಬರುತ್ತಿದ್ದ ಭೀಮನಿಗೆ ಜನರು ಹಣ್ಣು, ಕಬ್ಬು ನೀಡುತ್ತಿದ್ದರು.ಕಳೆದ ಒಂದು ವಾರದ ಹಿಂದೆ ಹೆಗ್ಗೋವೆ ಗ್ರಾಮದ ಸಮೀಪ ಕಾಡಾನೆಗಳ ಕಾಳಗದಲ್ಲಿ ದಂತದಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿತ್ತು.ಕಾಡಾನೆಯ ಬಾಲ ಹಾಗು ಹಿಂಬದಿಯ ಬಲಗಾಲಿನ ಬಳಿ ಚರ್ಮ ಕೊಳೆಯುತ್ತಿದ್ದು ನೋವಿನಿಂದ ಬಳಲುತ್ತಿದ್ದು ಆಹಾರ ತ್ಯಜಿಸಿ, ನೋವು ತಾಳಲಾರದೆ ಪ್ರತಿನಿತ್ಯವೂ ಹೆಗ್ಗಾವೆ ಸಮೀಪದ ಹೊಂಡದ ನೀರಿನಲ್ಲಿ ಮಲಗಿ ನಡೆದಾಡಲಾಗದೆ ಪರದಾಡುತ್ತಿತ್ತು,ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಆಗಸ್ಟ್. 25ರಂದು ಮೈಸೂರಿನಿಂದ ಆಗಮಿಸಿದ ನುರಿತ ವನ್ಯಜೀವಿ ವೈದ್ಯರು ಕಾಡಾನೆಗೆ ಚಿಕಿತ್ಸೆ ನೀಡಿದ್ದರು ಆದರೆ ಚಿಕಿತ್ಸೆ ನೀಡಿ ನಾಲ್ಕು ದಿನವಾದರೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದೆ ಇರುವುದ್ದರಿಂದ ಗ್ರಾಮಸ್ಥರು ಅಂತಕಕ್ಕೆ ಒಳಗಾಗಿದ್ದಾರೆ.

ಒಮ್ಮೆ ಚಿಕಿತ್ಸೆ ನೀಡಿ ಹೋದ ಅರಣ್ಯ ಇಲಾಖೆ ಪುನಃ ಇತ್ತ ತಿರುಗಿ ನೋಡದೆ ಇರುವುದರಿಂದ ಕಾಡಾನೆ ದಿನನಿತ್ಯ ಗ್ರಾಮಸ್ಥರು ನೀಡುವ ಆಹಾರ ತಿಂದು ನೋವಿನಲ್ಲಿ ನಡೆದಾಡುತ್ತಿರುವ ದೃಶ್ಯ ಗ್ರಾಮಸ್ಥರ ಮನಕಲಕುತ್ತಿದೆ.ಅರಣ್ಯ ಇಲಾಖೆ ನೆಪ ಮಾತ್ರಕ್ಕೆ ಚಿಕಿತ್ಸೆ ನೀಡಿ ತೆರಳಿದ್ದಾರೆ ಗಾಯಗೊಂಡಿರುವ ಆನೆಗೆ ಪೂರ್ಣ ಪ್ರಮಾಣದ ಚಿಕಿತ್ಸೆ ನೀಡುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ ತೋರುತ್ತಿದ್ದಾರೆ .

ಈಗ ಭೀಮನಿಗೆ ಆಹಾರ ನೀಡಲು ಗ್ರಾಮಸ್ಥರು ತೆರಳಿದರು ಗ್ರಾಮಸ್ಥರ ಮೇಲೆ ಎರಗಿ ಬರುತ್ತಿದೆ. ಇತ್ತ ಅರಣ್ಯ ಇಲಾಖೆಯವರು ಆನೆಯ ಆರೋಗ್ಯ ಸ್ಥಿತಿ ಮೇಲೆ ನಿಗಾ ವಹಿಸಿಲ್ಲ ಇದರಿಂದ ಭೀಮ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಅರಣ್ಯಇಲಾಖೆ ಶೀಘ್ರವಾಗಿ ಸ್ಥಳಾಂತರ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಬೇಕು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *