
ಸಕಲೇಶಪುರದ ಹಿರಿಯ ಕೇಬಲ್ ಆಪರೇಟರ್ ಶಂಕರಪ್ಪ ಅವರ ಧರ್ಮ ಪತ್ನಿ ನಿಧನ.ಸಕಲೇಶಪುರ ಪಟ್ಟಣದ ಸೌಮ್ಯ ಪಿಕ್ಚರ್ಸ್ ನ ಮಾಲೀಕರಾದ ಶಂಕರಪ್ಪ ಅವರ ಪತ್ನಿ ಮಲ್ಲಿಗೆ ( 59 ) ಇಂದು ನಿಧನ ಹೊಂದಿದ್ದಾರೆ .ಸೋಮವಾರ ಪೇಟೆ ತಾಲೂಕು ಶನಿವಾರಸಂತೆ ಹೋಬಳಿ ಮಾಲಂಬಿ ಗ್ರಾಮದ ನಿವಾಸಿಯಾದ ಶಂಕರಪ್ಪ ಅವರ ಪತ್ನಿ ಇಂದು ಅನಾರೋಗ್ಯದಿಂದ ಮೃತಪಟ್ಟಿದ್ದು ಮೃತರ ಅಂತ್ಯಕ್ರಿಯೆ ನಾಳೆ 3 ಘಂಟೆಗೆ ಮಾಲಂಬಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ ಮೃತರ ಆತ್ಮಕ್ಕೆ ಶಾಂತಿ ದೊರಕಲೆಂದು ಸಕಲೇಶಪುರ ಆಲೂರು ಬೇಲೂರು ಕೊಡ್ಲಿಪೇಟೆ ಶನಿವಾರಸಂತೆ ಕೇಬಲ್ ಆಪರೇಟರ್ ಅಸೊಶಿಯೇಶನ್ ಸಂತಾಪ ಸೂಚಿಸಿದೆ.
